‘ನೀ ಒಲವ ಸಿರಿಯಾಗು’ ಕವನ

ನಿನ್ನ ಹಸ್ತ ಹಿಡಿದು ನಡೆದ ನೆನಪು; ಹಗಲಿರುಳು ಮನದಿ ಹಚ್ಚೆಯಂತೆ ನಿನ್ನೆಸರು ಬಿತ್ತು!…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿರಲಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಕಾಣದಂತೆ ನಿನ್ನ ನಿಂತು ನೋಡುವೆ;
ಪ್ರೀತಿ ತೊರೆದು ಹೊರಟ ನಿನ್ನ ಹಿಂದೆ ಬರಲಾರದೆ!
ನಿನ್ನ ನಡೆಯ ಲಾಸ್ಯ ಮನದಿ ನೆನೆವೆ;
ಎಷ್ಟು ಹಾಡಿದರು ನಿನ್ನ ಕುಡಿನೋಟ ಮರೆಯದೆ!

ಒಪ್ಪಿದಾಗ ಒಲವು ಬೆಳದಿಂಗಳಿತ್ತು;
ಚೈತ್ರೋದಯದ ಹಸಿರ ಮಾವು ಘಮ ಸುತ್ತಲಲ್ಲಿ!
ತಪ್ಪಿದಾಗ ಭಾಷೆ ಕಾಳ ರಾತ್ರಿಯಿತ್ತು;
ಸೊರಗಿತೀ ಒಡೆದ ಹೃದಯ ದುಃಖದ ಕಡಲಿನಲ್ಲಿ!

ನಿನ್ನ ಹಸ್ತ ಹಿಡಿದು ನಡೆದ ನೆನಪು;
ಹಗಲಿರುಳು ಮನದಿ ಹಚ್ಚೆಯಂತೆ ನಿನ್ನೆಸರು ಬಿತ್ತು!
ಮೈಮನ ತುಂಬಿ ನಿನ್ನಂದ ಒನಪು;
ಜನ್ಮಪೂರ್ತಿ ಒಂಟಿತನಕೆ ಆಸರೆ ನೀಕೊಟ್ಟ ಮುತ್ತು!

ನಿನ್ನ ಹೆಜ್ಜೆ ಹಿಂಬಾಲಿಸಿ ಬಂದ ಹಾದಿ;
ಹೂವ ಸುಗಂಧ ತುಂಬಿ ಪ್ರೇಮಿಗಳ ಸ್ಮೃತಿಯಾಗಿದೆ!
ನಿನ್ನ ಕೈಗಳಿಗೆ ಬಳೆಯನಿಟ್ಟ ಘಳಿಗೆ;
ಬಾನು ಭುವಿ ಪ್ರಕೃತಿಯ ಒಲವಿಗಿಲ್ಲಿ ಶೃತಿಯಾಗಿದೆ!

ನಿನ್ನ ಜೀವನ ಸುಖವನ್ನೆ ನೋಡಿ;
ಮರೆಯಲ್ಲಿ ಹಾರೈಸುವೆ ಹೊಳೆಯುವ ತಾರೆಯಾಗು!
ನಿನ್ನ ಜೊತೆಗಿದ್ದ ಸವಿಯೆ ಮೋಡಿ;
ನೆನೆಯುತ ಕಳೆವೆ ಬದುಕು ನೀ ಒಲವ ಸಿರಿಯಾಗು!


  • ಟಿ.ಪಿ.ಉಮೇಶ್ – ಸಾಹಿತಿಗಳು ಹೊಳಲ್ಕೆರೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW