ಕವಿಗಳ ಸ್ಫೂರ್ತಿಯೇ ಹೆಣ್ಣು. ಆ ಹೆಣ್ಣು ‘ನೀ’… ಅವಳ ಬಗ್ಗೆ ಕವಿ ಟಿಪಿ.ಉಮೇಶ್ ಅವರು ಬರೆದಿರುವ ಹನಿಗವನಗಳು ಓದುಗರ ಮುಂದಿದೆ…ಮುಂದೆ ಓದಿ…
#ನೀ..
ಉಳಿದದ್ದು
ನನ್ನ ಪದ್ಯದಲ್ಲಿ!
ಕಳೆದದ್ದು
ಕಣ್ಣ ಮದ್ಯದಲ್ಲಿ!
*
ನೀನೆ…
ಉಳಿಸಿದ್ದು
ದೇವರ ಲೆಕ್ಕದಲ್ಲಿ!
ಕಳೆಸಿದ್ದು
ಆತ್ಮದ ಬುಕ್ಕದಲ್ಲಿ!
*
ನಿನಗಾಗಿ..
ಉಳಿಯುತ್ತಿರುವುದು;
ಪದಗಳ ಸಾಂಗತ್ಯದಲ್ಲಿ!
ಅಳಿಯುತ್ತಿರುವುದು;
ನಿನ್ನದೇ ಸ್ಮರಣೆಯಲ್ಲಿ!
*
ನಿನ್ನಿಂದ…
ಉಳಿಯಬಹುದು
ಅಳಿಯದೆ;
ಅಳಿಯಬಹುದು
ಉಳಿಯದೆ;
ನಿಗಿನಿಗಿ ಮೌನ ಹಾಡಿನಲಿ !
*
ನಿನ್ನೊಳಗೆ..
ನೀ
ಉಳಕೊಂಡೆ;
ನಾ
ಕಳಕೊಂಡೆ!
*
ಕಡೆಗೆ…
ನೀ
ಗೋರಿ ಮೇಲಿನ ಚಿಗುರು!
ನಾ
ಚಿಗುರ ಮೇಲಣ ಹೂವು !
*
ಇಬ್ಬರೂ…
ಹೂವಿನ ಮುಗ್ಧ ಹಾಡು !
- ಟಿಪಿ.ಉಮೇಶ್ (ಶಿಕ್ಷಕರು, ಕವಿಗಳು) ಚಿತ್ರದುರ್ಗ
