ಕನಸ್ಸಿನಲ್ಲಿ ಕಾಡುವ ಆ ದಿವ್ಯ ಶಕ್ತಿಯೇ ನೀನಾರು? ಪೋರಿಯೋ? ಇಲ್ಲಾ …ಗುರಿಯೋ ?…ಡಾ. ಅರ್ಜುನ್ ಎಂ ಜಿ ಅವರ ಕವನ.ಮುಂದೆ ಓದಿ…
ಯಾವಾಗಲೂ ನನ್ನನ್ನು ಕಾಡುತ್ತಿರುವ ಶಕ್ತಿಯೇ ನೀನಾರು….?
ನೀನಾರು…?
ಪೋರಿಯೋ…? ಇಲ್ಲಾ ಗುರಿಯೋ…?
ಹೇಳು ಶಕ್ತಿಯೇ ನೀನಾರು?
ಪೋರಿಯಾದರೆ ನಿನ್ನಿಂದ ಪಾರಗೆನು
ಗುರಿಯಾದರೆ ನಿನ್ನಿಂದ ಮೌನಿಯಾಗೆನು
ನೀನಾರು..?
ಪೋರಿಯೋ…? ಇಲ್ಲಾ , ಗುರಿಯೋ…?
ಹೇಳು ಶಕ್ತಿಯೇ ನೀನಾರು….?
ಸದಾ ಕನಸ್ಸಿನಲ್ಲಿ ಬಂದು,ಮಾಡುವ ಸನ್ನೆಗೆ ಸೋತು ಹೋಗಿರುವೆ ನಾನು.
ನಿನ್ನ ಮನದಿಂಗಿತವಾದರೂ ಏನು?
ನಿನಗಾಗಿ ಏನಾದರೂ ಮಾಡಬೇಕೇನು?
ನೀನಾರು…?
ಪೋರಿಯೋ….? ಇಲ್ಲಾ , ಗುರಿಯೋ…?
ಹೇಳು ಶಕ್ತಿಯೇ ನೀನಾರು….?
ಏಕಾಂಗಿಯಾಗಿ, ಮಂಕಾಗಿ ಕುಳಿತಾಗ ಸದಾ ನನ್ನನ್ನು
ಹುರಿದುಂಬಿಸುವ ಚೈತನ್ಯವೇ ನೀನಾರು…?
ಅಚೇತನದಿಂ ,ಚಿತ್ತ-ಚಾಂಚಲ್ಯದಿಂ ಇರುವಾಗ,
ಚೇತನವನ್ನು ತುಂಬುತ್ತಿರುವ ದಿವ್ಯ ಶಕ್ತಿಯೇ
ನೀನಾರು…?
ಪೋರಿಯೋ…? ಇಲ್ಲಾ , ಗುರಿಯೋ…?
ಹೇಳು ದಿವ್ಯ ಶಕ್ತತಯೇ ನೀನಾರು…?
- ಡಾ ಅರ್ಜುನ್ ಎಂ ಜಿ (ವೃತ್ತಿಯಲ್ಲಿ ವೈದ್ಯರು, ಕವಿಗಳು) ಮಿರಜ್
