ಅಕ್ಷಯ ತೃತೀಯ ಹನಿಗಳು

ನೀನೇ ಚೆನ್ನ…ನೀನೇ ರನ್ನ… ನಿoಗ್ಯಾಕೆ ಬೇಕೆ ಚಿನ್ನ!?… ಅಕ್ಷಯ ತೃತೀಯ ದಿನ ಕವಿ  ಹೆಚ್. ಪಿ. ಕೃಷ್ಣಮೂರ್ತಿ ಅವರ ಹನಿಗವನಗಳನ್ನು ತಪ್ಪದೆ ಮುಂದೆ ಓದಿ…

ಸಾಲ ಮಾಡಿಯಾದರೂ ಸರಿ
ಕೊಡಿಸಬೇಕು ಈ ದಿನ
ಹೆಂಡತಿಗೆ ಚಿನ್ನ
ಇಲ್ಲವಾದಲ್ಲಿ ಬೀಳುತ್ತದೆ
ಅಡುಗೆ ಮನೆಯ ಪಾತ್ರೆಗಳಿಗೆ
ಗುನ್ನ!!

* * *

ಈ ದಿನ ಅಕ್ಷಯ ತೃತೀಯ
ಕೊಡಿಸಿಬಿಡಬೇಕು ಹೆಂಡತಿಗೆ
ಚಿನ್ನದ ಹಾರ
ಇದರಿಂದ ನಾ ತಪ್ಪಿಸಿಕೊಳ್ಳಬಹುದು
ಅವಳಿಂದಾಗುವ
ಪ್ರಹಾರ!!

* * *

ನೀನೇ ಚೆನ್ನ
ನೀನೇ ರನ್ನ
ನಿoಗ್ಯಾಕೆ ಬೇಕೆ ಚಿನ್ನ!?
ಅಂತ ರಮಿಸಿದ ಕವಿ
ಹಿತವಾಗಿ ಇಟ್ಟ
ಹೆಂಡತಿ ಆಸೆಗೆ ಗುನ್ನ!!

* * *

ಯಾವ ಜ್ಯುವೆಲರಿಯಿಂದ
ತಂದು ಕೊಡಲಿ
ಹೆಂಡತಿಗೆ ಚಿನ್ನ!?
ಯೋಜನೆ ರೂಪಿಸುತಿರುವೆ
ಹಾಕಬೇಕಲ್ಲ
ಈ ರಾತ್ರಿಗೆ ಕನ್ನ!!


  •  ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW