ಒಲವು ಮರೀಚೀಕೆಯಾಯಿತೇ.?…ಮರುಭೂಮಿಯೊಳೆಲ್ಲವೂ ಶೂನ್ಯದಂತೇ .. ಕವಿಯತ್ರಿ ವಿಜಯಲಕ್ಷ್ಮೀ ನಾಗೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನೂರು ನೋವುಗಳ ಜೊಳ್ಳ ತೂರಿ
ಧಗಧಗನೆ ಉರಿದಿತ್ತು ಅವಳೊಡಲೊಳಗಿನ ಕುಲುಮೆಯಲಿ ಸುಡುವ ಬೆಂಕಿ.!
ದುಃಖದ ಕಣ್ಣೀರ ಕೋಡಿ ಹರಿದರೂ ಶಮನವಾಗದ ಬೇಗುದಿಯೊಳು ನೂಕಿ ನೂಕಿ!!
ಹುಡುಕಿದ್ದಳು ನಲಿವಿನ ಗಟ್ಟಿ ಕಾಳೊಂದನ್ನು ನೂರು ನೋವುಗಳ ಜೊಳ್ಳ ತೂರಿ.!!
ಹದಗೆಟ್ಟ ಅಡುಗೆಯ ಹದಗೊಳಿಸಿ ಉಣಬಡಿಸಿದ್ದಳು ಮಮತೆ ಕರುಣೆಯ ತೋರಿ.!
ಒಲವು ಮರೀಚೀಕೆಯಾಯಿತೇ.?
ಮರುಭೂಮಿಯೊಳೆಲ್ಲವೂ ಶೂನ್ಯದಂತೇ ..
ತೊರೆದಷ್ಟೂ ಬತ್ತದ ಕನಸಿನ ಒರತೆ.!!
ಬೀಸಿಬಂದ ತಂಬೆಲರೂ ಬಿಸಿಯಾಗಿ ಕಾಡಿದಂತೆ ಬದುಕ ಬಯಲೊಳು ಏಕಾಂಗಿಯಾದರೂ ಬಿಡದೇ ಎಳೆದೊಯ್ಯುವ ಬಾಳ ಪಥವಂತೇ..!!
- ವಿಜಯಲಕ್ಷ್ಮೀ ನಾಗೇಶ್
