ಮಾರುತಗಳ ಮುಂಗಾಮಿ ‘ಚೊಟ್ಟಿ ಕೋಗಿಲೆ’



ಚೊಟ್ಟಿ ಕೋಗಿಲೆಯ ಸುಂದರ ಛಾಯಾಚಿತ್ರಣದ ಜೊತೆಗೆ ಪಕ್ಷಿಯ ಕುರಿತು ಒಂದಷ್ಟು ಕುತೂಹಲಕಾರಿ ವಿಷಯಗಳನ್ನುಓದುಗರೊಂದಿಗೆ ಹಂಚಿಕೊಂಡಿದ್ದಾರೆ ಪರಿಸರವಾದಿ, ಪಕ್ಷಿಸಂರಕ್ಷಕ ಚಿದಾನಂದ್ ಯುವ ಸಂಚಲನ ಅವರು.ಮುಂದೆ ಓದಿ…

ಚೊಟ್ಟಿ ಕೋಗಿಲೆ ( Pied Cuckoo )

ಹನಿ ನೀರನ್ನು ಹುಡುಕಿಕೊಂಡು ನೂರಾರು ಕಿಲೋಮೀಟರ್ ಗಟ್ಟಲೆ ಸಂಚರಿಸಿ ಗುಟುಕು ನೀರು ಸಿಕ್ಕೊಡನೆ ಕುಡಿದು ದಣಿವಾರಿಸಿಕೊಳ್ಳುವ ಎಷ್ಟೋ ಪಕ್ಷಿಗಳನ್ನು ನಾವು ನೋಡಿದ್ದೇವೆ. ಆದರೆ ‘ಮಾರುತಗಳ ಮುಂಗಾಮಿ’ ಎಂದೇ ಕರೆಯಲ್ಪಡುವ ಈ ಚಾತಕ ಪಕ್ಷಿ ಮಳೆಗಾಗಿ ಕಾದು, ಮಳೆ ಬೀಳುವ ಸಮಯದಲ್ಲಿ ಅಷ್ಟೇ ಮಳೆ ನೀರನ್ನು ಕುಡಿದು ಬದುಕುವ ಪಕ್ಷಿ. ಸದಾ ಮಳೆಯೊಂದಿಗೇ ಸಂಚಾರ ಮಾಡುತ್ತ ಮಳೆ ನೀರಿಗಾಗಿ ದೇಶದಿಂದ ದೇಶಕ್ಕೆ ವಲಸೆ ಬರುವ ಪಕ್ಷಿ.

ಹವಾಮಾನ ಇಲಾಖೆಯ ಜವಾಬ್ದಾರಿಯನ್ನು ಇಲಾಖೆ ಪ್ರಾರಂಭವಾಗುವ ಮುಂಚೆಯಿಂದಲೂ ಚಾಚೂತಪ್ಪದೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವ ಪಕ್ಷಿ. ಇಲಾಖೆಯ ವರದಿ ತಪ್ಪಾಗಬಹುದು ಆದರೆ ಈ ಪಕ್ಷಿಯ ಮಾಹಿತಿ ತಪ್ಪಾಗಲು ಸಾಧ್ಯವೇ ಇಲ್ಲ. ಏಕೆಂದರೆ ಮುಂಗಾರಿನ ಗಾಳಿಯ ದಿಕ್ಕಿನಲ್ಲಿ ಕ್ರಮಿಸುವ ಹಕ್ಕಿ ಇದು. ಇದರ ದನಿ ಮೊದಲ ಮಳೆಯ ಸೂಚಕ, ಚಾತಕ ಪಕ್ಷಿ ಕಾಣಿಸಿತೆಂದರೆ ಮಳೆಯಂತು ನೂರಕ್ಕೆ ನೂರು ಖಚಿತ. ಆಗಾಗಿ ರೈತರು ಮುಂಗಾರಿನ ಸಮಯದಲ್ಲಿ ಹಂಬಲದಿಂದ ಈ ಪಕ್ಷಿಯ ವೀಕ್ಷಣೆಗೆ ಕಾಯುವುದು ಉಂಟು.

ಇನ್ನೂ ಅಷ್ಟು ದೂರದ ಓಮನ್, ಸೌದಿ ಅರೇಬಿಯಾ, ಸೀಶೆಲ್ಸ್ ಗಳಿಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ದಾಟಿ ಬಂದು #ಸಂತಾನೋತ್ಪತ್ತಿ ಮಾಡುವುದು ಬೇಡವೇ…? ಮಳೆ ನೀರು, ಆಹಾರ ಜೊತೆಗೆ ಸಂತಾನೋತ್ಪತ್ತಿಗಾಗಿ ಭಾರತಕ್ಕೆ ವಲಸೆ ಬರುತ್ತದೆ. ಅದರಲ್ಲೂ ಇದು ಕೋಗಿಲೆ ಜಾತಿಗೆ ಸೇರಿದ್ದು ಬೇರೆ, ಅದರ ಬುದ್ಧಿ ಮರೆಯುವುದು ಉಂಟೆ. ಅದರಂತೆಯೆ ಇವು ಸಹ ಬೇರೆ ಪಕ್ಷಿಯ ಗೂಡಿನಲ್ಲಿ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತದೆ. ತದನಂತರ ಸೆಪ್ಟಂಬರ್- ಅಕ್ಟೋಬರ್ ವೇಳೆಗೆ ಭಾರತವನ್ನು ಬಿಟ್ಟು ತಮ್ಮ ಮುಂದಿನ ಪಯಣ ಬೆಳಸುತ್ತದೆ.

ನಮ್ಮ ದೊಡ್ಡಬಳ್ಳಾಪುರದ #ಅಣಬೆ ಗ್ರಾಮದ ಕೆರೆಯ ಆವರಣದಲ್ಲಿ ಹಾಗೂ ತೀರ ಈಚೆಗೆ ಅಂದರೆ ನವೆಂಬರ್ 20, 2021 ರಂದು ಹುಲುಕುಡಿ ಬೆಟ್ಟದ ಚಾರಣದ ಸಮಯದಲ್ಲಿ ಪೂದೆ ಸಸ್ಯಗಳಲ್ಲಿರುವ ಕಂಬಳಿ ಹುಳುಗಳನ್ನು ಹಿಡಿದು ತಿನ್ನುವ ಸಮಯದಲ್ಲಿ ನನ್ನ ಕಣ್ಣಿಗೆ ಕಂಡದ್ದು.


  • ಕ್ಯಾಮರಾ ಹಿಂದಿನ ಕಣ್ಣು – ಚಿದಾನಂದ್ ಯುವ ಸಂಚಲನ (ಯುವ ಸಂಚಲನ, ಪರಿಸರವಾದಿ, ಲೇಖಕರು) ದೊಡ್ಡಬಳ್ಳಾಪುರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading