‘ಪ್ರಚಂಡ ರಾವಣ’ ನಾಟಕದಲ್ಲಿ ನಟ ಭಯಂಕರ ವಜ್ರಮುನಿ ಅವರು ಈ ಹಿಂದೆ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದರು, ಈಗ ಅದೇ ನಾಟಕದಲ್ಲಿ ರಾವಣನ ಪಾತ್ರದಲ್ಲಿ ಅವರ ಮೊಮ್ಮಗ ಕಾಣಸಿಕೊಳ್ಳಲಿದ್ದಾನೆ. ಮೇ ೨೪,೨೦೨೪ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನವಿದೆ, ತಪ್ಪದೆ ಬನ್ನಿ…
ನಾಟಕ : ಪ್ರಚಂಡ ರಾವಣ
ತಂಡ :ರಂಗಶ್ರೀ ಕಲಾಸಂಸ್ಥೆ
ದಿನಾಂಕ : ಮೇ ೨೪,೨೦೨೪
ಸಮಯ : ಸಂಜೆ ೫ ಕ್ಕೆ
ಸ್ಥಳ : ರವೀಂದ್ರ ಕಲಾಕ್ಷೇತ್ರ
ಒಂದು ಕಾಲದಲ್ಲಿ ಖಳನಾಯಕನಾಗಿ ಎಲ್ಲರ ಮನಗೆದ್ದ ಜನಪ್ರಿಯ ನಟರೆಂದರೆ ವಜ್ರಮುನಿ ಅವರು, ಕನ್ನಡ ಚಿತ್ರರಂಗದಲ್ಲೇ ತಮ್ಮದೇಯಾದ ಒಂದು ಇತಿಹಾಸವನ್ನು ಬರೆದಂತಹ ಕಲಾವಿದ. ಆಕೃತಿಕನ್ನಡ ಇತ್ತೀಚಿಗೆ ಅವರ ಧರ್ಮಪತ್ನಿಯವರ ಜೊತೆ ಮಾತಾಡಿದಾಗ ವಜ್ರಮುನಿ ಅವರ ತೆರೆಯ ಹಿಂದಿನ ಬದುಕಿನ ಚಿತ್ರಣ ಅನಾವರಣಗೊಂಡಿತು.


- ಆಕೃತಿ ಕನ್ನಡ ನ್ಯೂಸ್
