ಪ್ರೀಮಿಯರ್ ಬಸವರಾಜಯ್ಯ ಬರಿಯ ಹೆಸರಲ್ಲ



ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮಾಲೀಕರಾದ ಎಂ.ರಾಜಯೋಗಿ ‘ರಾಜ ಬಸವ’ ಕೃತಿ ಇದು ಗಣೇಶ್ ಕಾಸರಗೋಡು ಅವರ ಮಹತ್ವಾಕಾಂಕ್ಷೆಯ ಸಂಶೋಧನಾ ಕೃತಿಯಾಗಿದ್ದು, ಸದ್ಯದಲ್ಲೇ ಓದುಗರ ಕೈ ಸೇರಲಿದ್ದು, ಈ ಕೃತಿಯ ಇಂಟ್ರಡಕ್ಷನ್ ಇಲ್ಲಿದೆ. ಮುಂದೆ ಓದಿ…

ಪುಂಖಾನುಪುಂಖವಾಗಿ ಪುಸ್ತಕಗಳು ರೆಡಿಯಾಗುತ್ತಿವೆ :

  • ಬೆಳ್ಳಿತೆರೆಯ ಬಂಗಾರದ ಗೆರೆ
  • ಕನ್ನಡ ಚಿತ್ರರಂಗದ ಲೆಜೆಂಡ್’ಗಳ ಕೊನೆಯ ದಿನಗಳು
  • ಸಾಂಪ್ರತಾ ತಿಳಿಸುವುದೇನಂದ್ರೆ
  • ಸ್ಫೂರ್ತಿಯಿಂದ ರಮೇಶ್
  • ಫೇಸ್ ಬುಕ್ ಚೌ ಚೌ ಬಾತ್
  • ಪಿಸು ಮಾತು ತುಸು ಮೌನ
  • ‘ಅಭಿಮಾನ’ದ ಬಾಲಣ್ಣ  ನಾ ಕಂಡಂತೆ ಅವರಿವರು
  • ಮೂರು ನಕ್ಷತ್ರಗಳು

ರಜತ ತೆರೆಯ ರಾಜಯೋಗಿ : ರಾಜ ಬಸವ! ಇವುಗಳಲ್ಲಿ ಎರಡು ಪುಸ್ತಕಗಳು ಮುಂದಿನ ತಿಂಗಳು ಲೋಕಾರ್ಪಣೆಯಾಗಲಿದೆ. ಉಳಿದ 8 ಪುಸ್ತಕಗಳು 2022ರಲ್ಲೇ ಬಿಡುಗಡೆ ಭಾಗ್ಯ ಕಾಣಲಿದೆ! ಇವುಗಳಲ್ಲಿ ತುರ್ತಾಗಿ ಸಿದ್ದಗೊಳ್ಳುತ್ತಿರುವ ಪುಸ್ತಕ : ರಜತ ತೆರೆಯ ರಾಜಯೋಗಿ ‘ರಾಜ ಬಸವ’ – ಇದು ನನ್ನ ಮಹತ್ವಾಕಾಂಕ್ಷೆಯ ಸಂಶೋಧನಾ ಕೃತಿ. ಈ ಕೃತಿಗಾಗಿ ನಾನು ಪಟ್ಟ ಪಾಡು ಆ ದೇವರಿಗೇ ಪ್ರೀತಿ. ಸರಿ ಸುಮಾರು 18 ವರ್ಷಗಳ ಶ್ರಮ ಈ ಕೃತಿಯ ಹಿಂದಿದೆ! ಅಂದಹಾಗೆ, ಇದು ಕನ್ನಡ ಚಿತ್ರರಂಗದ ಲೆಜೆಂಡ್ ಆಗಿರುವ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮಾಲೀಕರಾದ ಎಂ. ಎನ್.ಬಸವರಾಜಯ್ಯನವರ ಪವಾಡ ಸದೃಶ ಬದುಕಿನ ರೋಮಾಂಚಕ ಘಟನೆಗಳ ಬಯೋಗ್ರಫಿ…

ವಾಸ್ತವವಾಗಿ ಈ ಗ್ರಂಥ ಬಸವರಾಜಯ್ಯನವರ ಸೋದರಿ ಎಂ.ಎನ್.ಶಾರದಮ್ಮ ಅವರ ಕನಸಿನ ಕೂಸು. ನಾನು ವಿಜಯ ಕರ್ನಾಟಕ ಪತ್ರಿಕೆಯಲ್ಲಿದ್ದಾಗ ಮೈಸೂರಿಗೆ ಕರೆಸಿ ನನ್ನ ಕೈಗೆ ನೀಡಿರುವ ಪ್ರಾಜೆಕ್ಟ್ ಇದು. ಆ ಹಿರಿಯ ಚೇತನ ಆಡಿರುವ ಅಣಿಮುತ್ತುಗಳನ್ನು ಟೇಪ್ ರೆಕಾರ್ಡರ್’ಗಳಲ್ಲಿ ಪೋಣಿಸಿ, ಅದಕ್ಕೆ ಅಕ್ಷರ ರೂಪ ನೀಡಿರುವ ಸಾಹಸದ ಕಥೆಯಿದು. ಎಲ್ಲವೂ ರೆಡಿಯಾಗಿತ್ತು, ಆಕೆಯ ಒಪ್ಪಿಗೆಯೂ ಸಿಕ್ಕಿತ್ತು. ಆದರೆ ಕಾಲ ಕಾಯಲಿಲ್ಲ. ಈ ಉಪಯುಕ್ತ ಗ್ರಂಥ ಪ್ರಿಂಟಿಗೆ ಹೋಗುವ ಮೊದಲೇ ಶಾರದಮ್ಮ ಕಾಲವಾದರು! ಅಂದು ನಿಂತು ಹೋಗಿರುವ ಕೆಲಸಕ್ಕೆ ಈಗ ಚಾಲನೆ ಸಿಕ್ಕಿದೆ.

ಪ್ರೀಮಿಯರ್ ಬಸವರಾಜಯ್ಯ ಅಂದರೆ ಅದೊಂದು ಬರಿಯ ಹೆಸರಲ್ಲ. ಕನ್ನಡ ಚಿತ್ರೋದ್ಯಮವನ್ನು ಮದರಾಸಿನಿಂದ ಕರ್ನಾಟಕಕ್ಕೆ ಎಳೆದು ತಂದ ಸಾಹಸಿ ಎಂ.ಎನ್. ಬಸವರಾಜಯ್ಯ! – ಇದು ಜಸ್ಟ್ ಇಂಟ್ರಡಕ್ಷನ್. ಬಸವರಾಜಯ್ಯನವರ ಬದುಕಿನ ಒಳತಿರುಳುಗಳ ಮಹತ್ವ ಬೇರೆಯದ್ದೇ ಆಗಿದೆ. ಸ್ವಲ್ಪವೇ ಸ್ವಲ್ಪ ಕಾಯಬೇಕಷ್ಟೇ… ಹಾಂ ಇದು ನನ್ನ 30ನೇ ಕೃತಿ.

‘ಅಮ್ಮ ಪ್ರಕಾಶನ’ದ 20ನೇ ಕೃತಿ…ಮೂರು ವರ್ಷಗಳ ಹಿಂದೆ ಲೋಕಾರ್ಪಣೆಯಾಗಿರುವ ‘ಶುಭಂ’ ಗ್ರಂಥ 25ನೇ ಕೃತಿ…


  • ಗಣೇಶ್ ಕಾಸರಗೋಡು  (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW