ಶೀಘ್ರದಲ್ಲೇ ಪ್ರಕಟವಾಗಲಿದೆ: ಕರ್ನಾಟಕ ದ್ವಿತೀಯ ಪಿಯು ಫಲಿತಾಂಶ 2023

 ಕರ್ನಾಟಕ ದ್ವಿತೀಯ ಪಿಯು ಫಲಿತಾಂಶ 2023,  ಶೀಘ್ರದಲ್ಲೇ ಪ್ರಕಟವಾಗಲಿದೆ. ಫಲಿತಾಂಶ ಮತ್ತು ಸ್ಕೋರ್ಕಾರ್ಡ್ ಪರಿಶೀಲಿಸುವುದು ಹೇಗೆ ಅನ್ನುವುದನ್ನು ತಪ್ಪದೆ ಮುಂದೆ ಓದಿ…

url karnataka 2nd puc result 2023 expected date and time know how to check 2nd puc result marksheet ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶ 2023ರ ನಿರೀಕ್ಷಿತ ದಿನಾಂಕ ಮತ್ತು ಸಮಯದ ಬಗ್ಗೆ ಈಗಾಗಲೇ ಪಾಲಕರು ಮತ್ತು ವಿದ್ಯಾರ್ಥಿಗಳ ನಡುವೆ ಚರ್ಚೆ ಶುರುವಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು pue.karnataka.gov.in ಗೆ ಲಾಗ್ ಇನ್ ಮಾಡುವ ಮೂಲಕ ಕರ್ನಾಟಕ 2 ನೇ ಪಿಯುಸಿ ಸ್ಕೋರ್‌ಕಾರ್ಡ್ ಅನ್ನು ಪರಿಶೀಲಿಸಬಹುದು.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಯಾವುದೇ ಸಮಯದಲ್ಲಿ ಕೂಡ ಪ್ರಕಟಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು. ಫಲಿತಾಂಶ ಪ್ರಕಟವಾದ ತಕ್ಷಣ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು pue.kar.nic.in / pue.karnataka.gov.in ಗೆ ಲಾಗ್ ಇನ್ ಮಾಡುವ ಮೂಲಕ ಕರ್ನಾಟಕ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಗಮನಿಸಬಹುದು.

ವಿದ್ಯಾರ್ಥಿಯ ಹೆಸರು, ಪಾಲಕರ ಹೆಸರು, ಶಾಲೆಯ ಹೆಸರು, ಬೋರ್ಡ್ ಹೆಸರು, ವಿಷಯಗಳು ಮತ್ತು ಸಬ್ಜೆಕ್ಟ್‍ ಕೋಡ್‌, ಪ್ರತಿ ವಿಷಯದಲ್ಲಿ ಪಡೆದ ಅಂಕಗಳು, ಪಡೆದ ಒಟ್ಟು ಅಂಕಗಳು ಮತ್ತು ಫಲಿತಾಂಶದ ಸ್ಥಿತಿಯನ್ನು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ರಲ್ಲಿ ಸೇರಿಕೊಂಡಿರುತ್ತದೆ. ಈ ವರ್ಷ, 2 ನೇ ಪಿಯುಸಿ ಪರೀಕ್ಷೆಯು ಮಾರ್ಚ್ 9 ರಿಂದ 29 ರವರೆಗೆ ನಡೆಯಿತು. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗೆ 7.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಕರ್ನಾಟಕ ದ್ವಿತೀಯ ಪಿಯು ಫಲಿತಾಂಶವನ್ನು ಡೌನ್‍ಲೋಡ್ ಮಾಡುವುದು ಹೇಗೆ? : 

1) ಕರ್ನಾಟಕದ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ (karresults.nic.in) ಗೆ ಭೇಟಿ ನೀಡಿ.
2) “ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ಡೌನ್‌ಲೋಡ್ ಮಾಡಿ (Download Karnataka 2nd PUC Result 2023)” ಎಂಬುದರ ಮೇಲೆ ಕ್ಲಿಕ್ ಮಾಡಿ.
3) ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಲಾಗ್-ಇನ್ ಆಯ್ಕೆಯನ್ನು ಕ್ಲಿಕ್ ಮಾಡಿ
4) ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶ 2023 ಪರದೆಯ ಮೇಲೆ ಕಾಣುತ್ತದೆ.
5) ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ಮತ್ತು ಮಾರ್ಕ್ ಶೀಟ್ ಅನ್ನು ಡೌನ್‌ಲೋಡ್ ಮಾಡಿ. ಭವಿಷ್ಯದ ಅಗತ್ಯಕ್ಕಾಗಿ ಪ್ರಿಂಟ್ ಮಾಡಿ ಇಟ್ಟುಕೊಳ್ಳಿ.


  • ಆಕೃತಿ ನ್ಯೂಸ್
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW