ರೀಲ್ಸ್ ನಾಯಕಿ ಬದುಕಿನಲ್ಲಿ ಒಂದು ಹುಡುಗ ಬಂದ. ಅವನ ಜೊತೆ ಪ್ರೀತಿ ಹುಟ್ಟಿತು. ಇಬ್ಬರೂ ಸೇರಿ ರೀಲ್ಸ್ ಮಾಡಲು ಶುರುಮಾಡಿದರು, ಮುಂದೇನಾಯಿತು ಗುರು ಮೂರ್ತಿ ಅವರ ಈ ಕತೆಯನ್ನು ರೀಲ್ಸ್ ನಾಯಕ, ನಾಯಕಿಯರು ತಪ್ಪದೆ ಓದಲೇಬೇಕು.
ಐವತ್ತು ಸಾವಿರದ ಮುನ್ನೂರ ಇಪ್ಪತ್ತೆರಡು ಫಾಲೋವರ್ಸ್ ಕೂಗಿ, ಕುಣಿದಳು ಸಾನ್ವಿ. ಸಾಮಾಜಿಕ ಜಾಲತಾಣಗಳ ಮೂಲಕ ಫೇಮಸ್ ಆಗಿದ್ದಳು. ಸಾನ್ವಿಯ ರೀಲ್ಸ್ ಅಂದ್ರೆ ಮುಗಿ ಬೀಳುತ್ತಿದ್ದರು. ಕ್ಷಣಾರ್ಧದಲ್ಲಿ ಸಾವಿರಾರು ಲೈಕ್ ಗಳು ಮುದ್ರಿತವಾಗುತ್ತಿದ್ದವು. ಇನ್ ಸ್ಟಾಗ್ರಾಂ ನಲ್ಲಿ. ಎಲ್ಲಡೆಯೂ ರೀಲ್ಸ್ ನಟಿ ಎಂದೇ ಪ್ರಸಿದ್ದಿ ಹೊಂದಿದ್ದಳು ಸಾನ್ವಿ.
ಫೇಸ್ ಬುಕ್ ಖಾತೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಫ್ರೇಂಡ್ಸ್ ಹೊಂದಿದ ಸಾನ್ವಿಗೆ ತನ್ನ ಮೇಲೆ ತಾನೆ ಅಭಿಮಾನ ಹೊಂದಿದ್ದಳು. ರೀಲ್ಸ್ ನಾಯಕಿ ಎಂದು ತನ್ನ ಊರಿನಲ್ಲಿ ಮಾತ್ರವಲ್ಲದೆ ರಾಜ್ಯದ್ಯಾಂತ ಪ್ರಸಿದ್ದ ಹೊಂದಿದ್ದಳು. ಸಾನ್ವಿ ರೀಲ್ಸ್ ಪ್ರಪಂಚದಲ್ಲಿ ಮುಳುಗಿ ಹೋದ ಸಾನ್ವಿಗೆ ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾದ ಬಿನೋಯ್.
ಬಿನೋಯ್ ಕೂಡ ರೀಲ್ಸ್ ನ ನಾಯಕ. ಒಂದು ಲಕ್ಷ ಫಾಲೋವಾರ್ಸನ ಹೊಂದಿದ್ದ. ದಿನವಿಡಿ ರೀಲ್ಸ್ ಮಾಡೊದರಲ್ಲಿ ಕಾಲ ಕಳೆಯುತ್ತಿದ್ದ ಬಿನೋಯ್. ಹಾಡು, ಕುಣಿತ, ತಮಾಷೆಗಳಿಂದ ತನ್ನ ಫಾಲೋವಾರ್ಸ್ ನನ್ನು ರಂಜಿಸುತ್ತಿದ್ದ. ಆಕಸ್ಮಿಕವೆಂಬಂತೆ ಈ ಇಬ್ಬರ ನಡುವೆ ಸ್ನೇಹದ ಮಿಂಚು ಹರಿಯಿತು. ಇಬ್ಬರು ಕೆಲವೆ ಕೆಲವು ದಿನಗಳಲ್ಲಿ ಒಳ್ಳೆಯ ಸ್ನೇಹಿತರಾದರು. ಇಬ್ಬರು ರೀಲ್ಸ್ ಕಲಾವಿದರೆ, ಇಬ್ಬರು ಒಟ್ಟಿಗೆ ರೀಲ್ಸ್ ಮಾಡಿದರು. ಜನ ಮೆಚ್ಚುಗೆ ಗಳಿಸಿತು ಇವರ ರೀಲ್ಸ್. ದ್ವಿಗುಣವಾಯಿತು ಇವರ ಫಾಲೋವಾರ್ಸ.
ಇನ್ ಸ್ಟಾಗ್ರಾಂನಲ್ಲಿ ರಾಜ-ರಾಣಿಯರಂತೆ ಮೆರೆದರು. ಸಾಮಾಜಿಕ ಜಾಲ ತಾಣವೆಂಬ ವಿಶಾಲವಾದ ಬಾನಿನಲ್ಲಿ ತಾರೆಗಳಂತೆ ಮಿಂಚಿದರು. ಈ ಇಬ್ಬರ ರೀಲ್ಸ್ ಗಳು ಉನ್ನತದಲ್ಲಿರುವಾಗಲೇ ಅಘಾತವೊಂದಾಯಿತು. ಬಿನೋಯ್ ಮತ್ತು ರಚಿತಾರ ರೀಲ್ಸ್ ವೊಂದು ಈ ಇಬ್ಬರಿಕ್ಕಿಂತ ಹೆಚ್ಚಿನ ಫಾಲೋವರ್ಸ್ ಪಡೆಯಿತು. ರಚಿತಾಳ ಜೊತೆಗಿನ ರೀಲ್ಸ್ ಹೆಚ್ಚು ಹೆಚ್ಚು ಮನ್ನಣೆ ಪಡೆಯುತ್ತಿದ್ದಂತೆ, ಸಾನ್ವಿಯ ರೀಲ್ಸ್ ಗಳು ಇಳಿಮುಖ ವಾಗತೊಡಗಿದವು. ಸದಾ ತನ್ನ ಹಿಂದೆ ನೆರಳಂತೆ ಸುತ್ತುತ್ತಿದ್ದ ಬಿನೋಯ್ ಈಗ ರಚಿತಾಳ ನೆರಳಾದ.ಈ ಇಬ್ಬರ ರೀಲ್ಸ್ ಭರಾಟೆಯಲ್ಲಿ ಮಂಕಾದಳು ಸಾನ್ವಿ.
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಂಗಳು ದೂರವಾಗ ತೊಡಗಿದವು ಸಾನ್ವಿಗೆ. ತನ್ನ ರೀಲ್ಸ್ ಗೆ ಬೆಲೆ ಇಲ್ಲದಾಗ ಕುಗ್ಗಿ ಹೋದಳು ಸಾನ್ವಿ. ಬಿನೋಯ್ ಗೆ ಫೋನು ಮಾಡಿದಳು. ಅವನ ಬಳಿ ಹೋಗಿ ಮಾತನಾಡಿದಳು. ಮತ್ತೆ ರೀಲ್ಸ್ ಮಾಡಲು ಬೇಡಿದಳು ಸಾನ್ವಿ. ಯಾವುದಕ್ಕೂ ಬೆಲೆ ಕೊಡದೆ ನಿರ್ಲಕ್ಷಿಸಿದ ಬಿನೋಯ್. ತನ್ನ ಹಾಗು ಸಾನ್ವಿಯ ಸಂಬಂಧ ಮುಗಿದು ಹೋದ ಅಧ್ಯಾಯವೆಂದು ಸಾನ್ವಿಯ ದೂರವಿಟ್ಟ. ಮಾನಸಿಕವಾಗಿ ಕುಗ್ಗಿ ಹೋದಳು ಸಾನ್ವಿ.
ತನ್ನ ರೀಲ್ಸ್ ಗೆ ಬೆಲೆ ಇಲ್ಲದಾಗ ಅವಮಾನವೆಂದು ಭಾವಿಸಿದಳು. ಇನ್ ಸ್ಟಾಗ್ರಾಂ ಖಾತೆ ತೆಗೆದು ಹುಚ್ಚಿಯಂತೆ ಕೂಗಾಡಿದಳು. ಸಾನ್ವಿಯ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಬಿನೋಯ್ ಮತ್ತು ರಚಿತಾಳ ರೀಲ್ಸ್ ಗಳು ಅವಳನ್ನು ಚುಚ್ಚಿಚುಚ್ಚಿ ಕೊಲ್ಲತೊಡಗಿದವು. ಹಾಕಿದ ಅವಳ ಕೋಣೆಯ ಬಾಗಿಲು ಮಧ್ಯಾಹ್ನ ವಾದರು ತೆಗೆದಿರಲಿಲ್ಲ. ಮಗಳಿಗೇನಾಯಿತೆಂಬ ಆತಂಕದಲ್ಲಿ ಕೋಣೆಯ ಬಾಗಿಲನ್ನು ತಟ್ಟಿದರು ಮನೆಯವರು. ಹಾಕಿದ ಬಾಗಿಲನ್ನು ಒಡೆದು ತೆಗೆದರು.
ಮಂಚದ ಮೇಲಿನ ಫ್ಯಾನಿಗೆ ನೇತಾಡುತ್ತಿದ್ದಳು ಸಾನ್ವಿ. ನೇತಾಡುತ್ತಿದ್ದ ದೇಹವನ್ನು ಕೆಳಗಿಳಿಸಿದರು. ಡಾಕ್ಟರ್ ಗೆ ಫೋನು ಮಾಡಿದರು. ಡಾಕ್ಟರ್ ಬಂದು,She is No More ಎಂದು ಹೊರಟು ಹೋದರು. ಅವಳ ಸಾವಿನ ಚಿತ್ರಣವನ್ನು ಮಾಡುತಿತ್ತು ಒಂದು ಮೊಬೈಲ್. ರೀಲ್ಸ್ ನಾಯಕಿಯ ರಿಯಲ್ ಕಥೆ ಸಾವಿನೊಡನೆ ಅಂತ್ಯ ಕಂಡಿತು.
- ಗುರು ಮೂರ್ತಿ
