ಎದ್ದೇಳಿ ಭಾರತೀಯರೆ, ತಾಯಿ ಕರೆಯುತಲಿಹಳು, ಸ್ವಾತಂತ್ರ್ಯ ರಥವ…ತೊಡಗಬೇಕಿದೆ ಅರಸಿ ವಿಜಯನಾಥ…ಎಪ್ಪತ್ತೇಳನೇ ಸ್ವತಂತ್ರ ಗಣರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು, ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಜಡವ ಕೊಡವಿ ಸೆಟೆದೃದ್ದು ನಿಲ್ಲಿ
ತಾಯಿ ಭಾರತಿಯ ಕೂಗು ಕೇಳಿಸದೆ ನಿಮಗೆ…
ಕಡೆಗಣಿಸಿದೆವು
ನಮ್ಮ ಹೆಮ್ಮೆಯ ಸ್ವಾತಂತ್ರ್ಯವ
ಮೈಮರೆತು ವಿಲಾಸ ಭೋಗದಲಿ
ಜೀವದಾಯಿನಿ ಇವಳು, ಸ್ವಾತಂತ್ರ್ಯದಾಯಿನಿ, ಸೌಭಾಗ್ಯ ದಾಯಿನಿ ಮೋಕ್ಷದಾಯಿನಿ ಮಾತೆ
ಭರತಭೂಮಿ
ಎನಿತು ಜೀವರ ಬೆಲೆಯ ತೆತ್ತು
ನೀಡಿದಳು ಸ್ವಾತಂತ್ರ್ಯ ಸುಧೆಯನು ನಾಡಿಗೆ…..
ಹರಣವಾಯಿತು ಹೋಮ ದೇಶಭಕ್ತರ ನೆತ್ತರಲ್ಲಿ ಅರಳಿ ನಕ್ಕಿತು ಸ್ವಾತಂತ್ರ್ಯದ ಕೆಂದಾವರೆ
ಸಂಭ್ರಮದಿ ಮೈಮರೆತೆವು ನಾವು
ಅನುಭವಿಸುತ ಸುಖವ ಸ್ವೇಚ್ಛೆಯಾಗಿ
ಘನ ಸಂವಿಧಾನದ ಆಶಯವ ಮರೆತು
ತನ್ನ ಹಕ್ಕುಗಳ ಪ್ರತಿಷ್ಠಾಪಿಸುತಲಿ
ಮತ್ತೊಂದು ಮುಖವನ್ನೇ ಮರೆತು ಕುಳಿತೆವು ನಾವು….
ಕರ್ತವ್ಯದ ಹೊಣೆಯ ಮರೆತು
ನಿರಂಕುಶವಾಗಿದೆ ಆಡಳಿತವಿಂದು ಅಲ್ಲಲ್ಲಿ
ನಮ್ಮ ಹೊಣೆಗೇಡಿತನದ
ಲಾಭ ಪಡೆದು..
ಭ್ರಷ್ಟಾಚಾರದ ಕೂಪವಾಗಿದೆ ಸ್ವಾರ್ಥಿಗಳ ಕಪಿ ಮುಷ್ಠಿಯಲಿ ಅವಕಾಶವಾದಿಗಳ ಕಪಿಮುಷ್ಠಿಯಲ್ಲಿ
ನ್ಯಾಯ,ಸಮಾನತೆಯ ಹಕ್ಕುಗಳ
ಜಾಣಗಿವುಡರಂತೆ ತಳ್ಳಿ ಪಟ್ಟಭದ್ರತೆಯಲ್ಲಿ ಕುಳಿತು
ವಿಶ್ವಮಾನ್ಯ ಸಂಸ್ಕೃತಿಯ ಹಿರಿಮೆ ಮರೆತು…
ಎದ್ದೇಳಿ ಭಾರತೀಯರೆ,
ತಾಯಿ ಕರೆಯುತಲಿಹಳು…
ಯೋಧರು ರೈತರು…ಮಾತ್ರವಲ್ಲ ಮಕ್ಕಳು
ದೇಶದಭಿವೃದ್ಧಿಯಲಿ ಸಮಪಾಲಿದೆ ಹೊಣೆಯಲ್ಲಿ ನಾವೆಲ್ಲ ಒಂದಾಗಿ ಎಳೆಯಬೇಕಿದೆ
ಸ್ವಾತಂತ್ರ್ಯ ರಥವ…ತೊಡಗಬೇಕಿದೆ ಅರಸಿ ವಿಜಯನಾಥ…
ಎಪ್ಪತ್ತೇಳನೇ ಸ್ವತಂತ್ರ ಗಣರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು..
- ಶಿವದೇವಿ ಅವನೀಶಚಂದ್ರ –ಶಿಕ್ಷಕರು, ಕೊಡಗು.
