ಎಷ್ಟು ಕನ್ನಡ ಸಿನಿಮಾಗಳಲ್ಲಿ ಎಷ್ಟು ಶೇಕಾಡಾ ಕನ್ನಡ ಪದ ಬಳಕೆ ಮಾಡಲಾಗುತ್ತದೆ, ಮಧ್ಯೆ ಮಧ್ಯೆದಲ್ಲಿ ಆಂಗ್ಲ, ಹಿಂದಿ ಸೇರಿ ಶುದ್ಧ ಕನ್ನಡ ಇಲ್ಲದಂತೆಯಾಗಿದೆ. ಮೊದಲು ನಮ್ಮ ಭಾಷೆ, ನಮ್ಮ ಸಂಸ್ಕೃತಿಯನ್ನು ಗೌರವಿಸೋಣ, ಪ್ರೀತಿಸೋಣ…
ಹೇರಿಕೆ ಅದು ಯಾವುದೇ ಆಗಲೀ, ಅದು ಅಸಹನೀಯ. ಸಮಾಜಕ್ಕೆ ಘಾತುಕ.
ಮಾದಕ ದ್ರವ್ಯಗಳು ಇನ್ನೊಬ್ಬರ ಒತ್ತಾಯದಿಂದ ಸೇವಿಸಿ, ಕೊನೆಗೆ ಒಂದು ವ್ಯಸನವಾಗುತ್ತದೆ, ಅದರ ಗುಲಾಮರಾಗುತ್ತೇವೆ. ದೇಹದೊಳಗೆ ಸೇರಿದರೆ ಅದರಿಂದ ದೇಹ ಹಾಳಾಗುವುದಲ್ಲದೆ ನಾವೂ ಅದಿಲ್ಲದೆ ಆಗಲ್ಲ ಎಂಬ ಅಡಿಯಾಳಾಗುತ್ತೇವೆ. ಇಂದು ಕೆಲವು ಆಹಾರ ಪದಾರ್ಥಗಳಲ್ಲಿ ನಮಗರಿಯದೇ ಮಾದಕ ಪದಾರ್ಥ ಸೇರಿಸುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆ ಅಂತಹಾ ಆಹಾರ ನಮ್ಮ ಕೈಯಿಂದಲೇ ಸೇವಿಸಿ ಅನಾರೋಗ್ಯದ ಬೀಡಾಗುತ್ತಿದ್ದಾರೆ.ಇವತ್ತು ಮಾಡಿದ ದೋಸೆ ಆರು ತಿಂಗಳಿನವರೆಗೆ ಹಾಳಾಗದೆ ತಿನ್ನಬಹುದೇ? ಆದರೆ ಮಾರುಕಟ್ಟೆಯಲ್ಲಿ. “Best before SIX month” ಎಂದು ಲೇಪನ ಹಾಕಿ ಮಾರಾಟ ಮಾಡುವುದರಲ್ಲಿ ಎಷ್ಟು ಮಾದಕ ರಾಸಾಯನಿಕ ಇರಬಹುದು?
ಒಂದು ಗುಡಿಸಲಿನೊಳಗೆ ನನ್ನ ಸತ್ಯಾಮಚಿಕ್ಕಮ್ಮ(ತಾಯಿಯ ಮೂರನೇ ತಂಗಿ) ಗೋವಲ ಚಿಕ್ಕಪ್ಪ ಜೀವಿಸುತ್ತಿದ್ದರು. ಅವರ ಹಳ್ಳಿಯ ಆಲದ ಮರದ ಕೆಳಗೆ ಚಿಕ್ಕಪ್ಪ ಬೀಡಿ ಕಟ್ಟಿ ಸಂಪಾದಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಅವರಿಗೆ. ಅವರ ಹಳ್ಳಿಯಿಂದ ಸ್ವಲ್ಪ ದೂರದ ಗ್ರಾಮದಲ್ಲಿ ಒಂದು ಹೋಟೆಲ್ ಬಂತು. ಏನೋ ಒಂದು ಬದಲಾವಣೆ ಇರಲಿ ಎಂದು ಚಿಕ್ಕಪ್ಪ ಒಂದು ಗಂಟೆ ದೂರ ನಡೆದು ಆ ಗ್ರಾಮ ತಲುಪಿ ಆ ಹೋಟೆಲಿನಿಂದ ಒಂದ್ಸಲ ತಿಂಡಿ ತಂದು ಚಿಕ್ಕಮ್ಮ ಹಾಗೂ ಮಕ್ಕಳಿಗೆ ಹಂಚಿ ತಿಂದರು.

ಫೋಟೋ ಕೃಪೆ : foodfitnessbeautyandmore
ಮಾರನೇ ದಿನ ತರಲಿಲ್ಲ , ಅಂದು ಮಕ್ಕಳು ಹಠ ಮಾಡಿದ್ದರಿಂದ ಕೆಲಸ ಮುಗಿದು ಗ್ರಾಮಕ್ಕೆ ನಡೆದು ತಿಂಡಿ ತಂದರು. ನಂತರ ಮಕ್ಕಳ ಹಠಕ್ಕೆ ಮಣಿದು ದಿನ ಬಿಟ್ಟು ದಿನ ತರತೊಡಗಿದರು. ಕೆಲ ದಿನಗಳಲ್ಲಿ ಚಿಕ್ಕಮ್ಮ ಇದನ್ನು ವಿರೋಧಿಸತೊಡಗಿದರು. ಮೂರು ವಾರವಾದಾಗ ಚಿಕ್ಕಪ್ಪನಿಗೆ ಸಾಲ ಮಾಡುವ ಸ್ಥಿತಿ ತಲುಪಿತು. ಎರಡನೇ ತಿಂಗಳು ಸಾಲ ತೀರಿಸಲು ಆಗದ ಸಂದಿಗ್ದತೆ ಆಯಿತು. ನನ್ನ ತಂದೆಗೆ ಪತ್ರ ಬರೆದರು. ಅಪ್ಪಾ ಅಮ್ಮಾ ಅವರ ಊರಿಗೆ ಹೋದರು. ಹೋಗುವಾಗ ಅಮ್ಮನ ಗೆಳತಿ ಶಾರದ/ ಶಾರ್ದಾಂಟಿ ಹಾಗೂ ಅವರ ಗಂಡ ಜೊತೆಗೆ ಹೋದರು.
ಅಪ್ಪ ಸ್ವಲ್ಪ ಹಣ ಸಹಾಯ ಮಾಡಿ, ಶಾರ್ದಂಟಿವರ ಗಂಡನ ಜೊತೆ ಅಂದೇ ಪುತ್ತೂರಿಗೆ ಮರಳಿ ಬಂದರು. ತಾಯಿ ಮತ್ತು ಅವರ ಗೆಳತಿ ಶಾರದ ಅಲ್ಲೇ ನಾಲ್ಕು ದಿನ ತಂಗಿದರು. ಶಾರ್ದಾಂಟಿ ಹಲವಾರು ತಿಂಡಿ ತಯಾರಿಸುವುದರಲ್ಲಿ ಎತ್ತಿದ ಕೈ, ಅವರ ತಾಯಿ ಮಂಗಳೂರಿನ ಹೋಟೆಲೊಂದರಲ್ಲಿ ಕೆಲಸಕ್ಕಿದ್ದರು ಅಂತೆಯೇ ಇವರೂ ಕಲಿತಿದ್ದರು. ಶಾರ್ದಾಂಟಿ , ಸತ್ಯಾಮ ಚಿಕ್ಕಮ್ಮನಿಗೆ ಕೆಲವು ತಿಂಡಿಗಳನ್ನು ತಯಾರಿಸುವುದು ಹೇಳಿ ಕೊಟ್ಟರು. ಹೋಟಿಲಿಗಿಂತ ಕಮ್ಮಿ ಖರ್ಚಿನಲ್ಲಿ ಮನೆಯಲ್ಲೇ ತಯಾರಿಸುವುದು ಕಲಿತ ಮೇಲೆ ಆ ಮಕ್ಕಳು ಹೋಟೇಲು ತಿಂಡಿಯ ಹಠ ಮರೆತರು.
ನಮ್ಮ ಮನೆಯೊಳಗೆ ನಮ್ಮ ಒಲೆ, ಪಾತ್ರೆ ಇರುವಾಗ ನಾವೇ ತಯಾರಿಸಿ ತಿನ್ನಬಹುದು , ಅವಶ್ಯಕವಾದಾಗ ಯಾವಾಗಲಾದರೂ ಒಮ್ಮೆ ಹೊರಗೆ ಹೋಗಿ ಸೇವಿಸಬಹುದು. ಯಾವಾಗಲೂ ಹೊರಗಿನಿಂದಲೇ ಸೇವಿಸಿದರೆ ನಾವು ಎಲ್ಲವೂ ಕಳೆದುಕೊಳ್ಳುತ್ತೇವೆ.
ನಮ್ಮ #ಮಾತೃ_ಭಾಷೆ ನಮ್ಮ ಬೆವರಿನ ರುಚಿ, ನಮ್ಮ ರಕ್ತದ ಸುಖ ಅಲ್ಲವೇ? ರಾಜ್ಯ ಒಂದು ಮನೆ ಆ ಮನೆಯೊಳಗೆ, ಮನೆಯ ಸಂಪಾದನೆಯ ತಾಯಿಯ ಅಡುಗೆಯೇ ನಮಗೆ ಮೊದಲು ಆದ್ಯತೆಯಾಗಬೇಕು. ನಮ್ಮ ಪೂರ್ವಜರು ಸಂಪಾದಿಸಿ ಕೊಟ್ಟ ಕನ್ನಡ, ನಮ್ಮ ರಾಜ್ಯದೊಳಗೆ ಆದ್ಯತೆಯಾಗಬೇಕು.
ಟೈಪ್ ರೈಟಿಂಗ್, ಶಾರ್ಟ್ ಹ್ಯಾಂಡ್… ಮುಂತಾದ ತರಬೇತಿ ಖಾಸಗಿಯಾಗಿ ಬಾಹ್ಯವಾಗಿ ಪಡೆಯುವಂತೆ, ಅನ್ಯ ಭಾಷೆಯನ್ನು ಖಾಸಗಿಯಾಗಿ ಕಲಿಯಲಿ. ಆದರೆ ಅದನ್ನು ಬಲಾತ್ಕಾರವಾಗಿ ಹೇರಿಸುವುದು ಹೇಯತನ.
ಎಷ್ಟು ಕನ್ನಡ ಸಿನಿಮಾಗಳಲ್ಲಿ ಎಷ್ಟು ಶೇಕಾಡಾ ಕನ್ನಡ ಪದವಿದೆ? ಇರೋದು ಆಂಗ್ಲ ಪದ ಸ್ವಲ್ಪ ಹಿಂದಿ ಸೇರಿಸಿ…. ಅದರ ಮಧ್ಯೆ ಕನ್ನಡ!!!!!
ಎಷ್ಟು ವಾರ್ತಾ ಮಾಧ್ಯಮಗಳು(ಕೆಲ ರೇಡಿಯೋ ವಾರ್ತೆ, ಚಂದನ ವಾರ್ತೆ ಬಿಟ್ಟು) ಎಷ್ಟು ಶೇಕಡಾ ಕನ್ನಡ ಪದ ಬಳಕೆ ಮಾಡುತ್ತಿವೆ? ಜಾಸ್ತಿ ಹಿಂದಿ ಇಂಗ್ಲೀಷ್ ಅದರ ಮದ್ಯೆ ಕನ್ನಡ!!!!!
ಕನ್ನಡ ಪ್ರೇಕ್ಷಕರಿಗೆ ಅನ್ಯ ಭಾಷೆ ಹೇರಿಸುತ್ತಾ ಹೋಗುವುದು ಕಂಡೂ ಕಾಣದಂತಿರುವ …….
ನಿಮ್ಮವ ನಲ್ಲ
*ರೂಪು*
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು) ಬೆಂಗಳೂರು.
