ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ‘ಸಖಿಗೀತ’ ವನ್ನು ತಪ್ಪದೆ ಮುಂದೆ ಓದಿ…
ನೆನಪುಗಳ
ಮೆರವಣಿಗೆ, ಸಖಿ
ಉತ್ಸವ ಮೂರ್ತಿ
*
ಸವಿನೆನಪ
ಬುತ್ತಿ, ಬಾಳಿನ ತುಂಬ
ಸಿಹಿಯ ತುತ್ತು
*
ಪ್ರೀತಿ ಸಾಗರ
ತೀರದಿ, ಅವಳದೇ
ನೆನಪಿನಲೆ
*
ತುಂಬು ಚಂದಿರ
ಹೊಳಪಿನಲ್ಲಿ,ನಲ್ಲೆ
ನಗೆ ಚಂದ್ರಿಕೆ
*
ಹರಿವ ನದಿ
ಕಲರವದಿ, ಚೆನ್ನೆ
ನೆನಪ ಧ್ವನಿ.
*
ಏನಿದ್ದರೇನು
ಬದುಕಲ್ಲಿ,ಆದೀತೆ
ನಿನ್ನಂತೆ ಸಖಿ
*
ಸುತ್ತಲೂ ಸುಮ
ಘಮಘಮ,ಸಂಗಾತಿ
ಬರುವ ಹೊತ್ತು
*
ರಂಗವಲ್ಲಿಯ
ಚೆಲುವಲ್ಲೂ, ಅವಳ
ನಗು ಮೊಗವು
*
ಬಾಳ ತಪದಿ
ಪ್ರಿಯಸಖಿಯ ಧ್ಯಾನ,
ನಾನೀಗ ಸಂತ
*
ಅವಳ ಪ್ರೀತಿ,
ನೆನಪಿನಂಗಳದ
ಹೊಳೆವ ತಾರೆ.
- ಮಲ್ಲಿಕಾರ್ಜುನ ಶೆಲ್ಲಿಕೇರಿ
