ಸಂಗೊಳ್ಳಿರಾಯಣ್ಣನ ಕ್ರಾಂತಿಯ ‘ಶಿಲ್ಪವನ’

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ ರಾಕ್ ಗಾರ್ಡನ್‍ಗೆ ಒಳಗೆ ಒಮ್ಮೆ ಪ್ರವೇಶಿಸಿದರೆ ಮುಗಿಯಿತು ಒಂದು ರೀತಿ ರೋಮಾಂಚನಕಾರಿ ಅನುಭವ ನೆನಪಿಸುತ್ತದೆ. ಹಾವೇರಿ ಜಿಲ್ಲೆಯ ಗೋಟಗೋಡಿಯ ಶಿಲ್ಪಕಲಾ ಕುಟೀರದ 150ಕ್ಕೂ ಹೆಚ್ಚು ಕಲಾವಿದರು ಸತತ 3 ವರ್ಷಗಳಿಂದ ಶಿಲ್ಪಗಳನ್ನು ಸುಂದರಗೊಳಿಸುವಲ್ಲಿ ಇವರ ಪರಿಶ್ರಮವು ಇದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಶಿವಕುಮಾರ್ ಅವರು ಲೇಖನಿಯಲ್ಲಿ ಸಂಗೊಳ್ಳಿರಾಯಣ್ಣನ ಕ್ರಾಂತಿಯ ಶಿಲ್ಪವನ.ತಪ್ಪದೆ ಮುಂದೆ ಓದಿ…

ಕಿತ್ತೂರು ಎಂದ ತಕ್ಷಣ ಎಲ್ಲರ ಮನದಲ್ಲಿ ಬರುವುದು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಚನ್ನಮ್ಮ ಮತ್ತು ರಾಯಣ್ಣ ನೆನಪಿಗೆ ಬರುವುದು ಸಹಜ, ಅವರ ಹೋರಾಟದ ಸಂಘರ್ಷವನ್ನು ಮತ್ತು ಅವರ ಜೀವನ ಕುರಿತು ನೋಡಬೇಕಾದರೆ ನೀವು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಬೇಕು ಅಲ್ಲಿನ ಶಿಲ್ಪವನವನ್ನು ಸುತ್ತಬೇಕು ರಾಯಣ್ಣನ ಪರಾಕ್ರಮವನ್ನು ನೋಡಿದರೆ ಎಂಥವರು ಸಹ ಮನದಲ್ಲಿ ರಾಯಣ್ಣನನ್ನು ನೆನೆಯುವುದು ಸಹಜ.

ಈ ಶಿಲ್ಪವನವನ್ನು ಪ್ರವೇಶ ಮಾಡಿದರೆ ರಾಯಣ್ಣನ ಚರಿತ್ರೆ ಬಿಂಬಿಸುವು ಅನೇಕ ಕಲಾಕೃತಿಗಳು ನಮ್ಮ ಗಮನಸೆಳೆಯುತ್ತವೆ. ಒಟ್ಟು 15 ಕೋಟಿ ವೆಚ್ಚದಲ್ಲಿ 10 ಎಕರೆ ವಿಶಾಲ ಪ್ರದೇಶದಲ್ಲಿ ಈ ವನ ನಿರ್ಮಾಣಗೊಂಡಿದೆ. ಸುಮಾರು ಸಾವಿರಾರು ಕಲಾಕೃತಿಗಳು ಸಿಮೆಂಟು, ಕಬ್ಬಿಣ, ಹಾಗೂ ಕೆಂಪು ಇಟ್ಟಿಗೆಗಳಿಂದ ಸಿದ್ದಪಡಿಸಿರುವ ಕಲಾಕೃತಿಗಳು ರಾಯಣ್ಣನ ಕಥೆ ಹೇಳುತ್ತಾ ಸಾಗುತ್ತದೆ ಈ ವನ.

 

ಕಿತ್ತೂರು ಸಂಸ್ಥಾನದಿಂದ ನಡೆದ ಯುದ್ದದ ಸನ್ನಿವೇಶಗಳು, ರಾಯಣ್ಣನನ್ನು ಗಲ್ಲಿಗೇರಿಸುವ ದೃಶ್ಯ, ರಾಯಣ್ಣ ಹುಲಿಯನ್ನು ಹೊಡೆದು ತರುವಂತಹ ಸನ್ನಿವೇಶ, ರಾಯಣ್ಣ ಕುಸ್ತಿಯಲ್ಲಿ ಜಯ ಸಾಧಿಸಿದ ಸನ್ನಿವೇಶ, ಡೋರಿ ಹಳ್ಳದಲ್ಲಿ ರಾಯಣ್ಣನನ್ನು ಸೆರೆ ಹಿಡಿಯುವ ದೃಶ್ಯ, ಯುದ್ದಸಾಮಾಗ್ರಿಗಳನ್ನು ತಯಾರಿಸುವ ಸನ್ನಿವೇಶ, ಗುಹೆಯಲ್ಲಿ ಚನ್ನಮ್ಮಳನ್ನು ಬಂಧಿಸಿದ ದೃಶ್ಯ, ಕಿತ್ತೂರು ಆರಮನೆಯ, ಧಾರವಾಡ ಕೇಂದ್ರ ಕಾರಾಗೃಹ, ಕಿತ್ತೂರು ಸಂಸ್ಥಾನದ ದೊರೆ ವೀರಪ್ಪ ದೇಸಾಯಿ ಅವರು ರಾಯಣ್ಣನ ಅಜ್ಜ ರೋಗಪ್ಪ ಅವರಿಗೆ ಭೂಮಿ ನೀಡಿ ಗೌರವಿಸುವ ಕ್ಷಣ ಗರಡಿ ಮನೆಯಲ್ಲಿ ಪಳಗುವ ಸನ್ನಿವೇಶ, ಇಂಥಹದೊಂದು ರಮ್ಯಲೋಕ ಸೃಷ್ಠಿಯಾಗಿರುವುದು ನೈಜತೆಗೆ ಕನ್ನಡಿ ಹಿಡಿದಿವೆ. ಸಂಗೋಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಎಷ್ಟು ಸವಾಲುಗಳನ್ನು ಎದುರಿಸಿದ್ದಾರೂ ಅದಕ್ಕಿಂತಲೂ ಹೆಚ್ಚು ಅವರಲ್ಲಿಯ ಸ್ವಾತಂತ್ರ್ಯದ ಕಿಚ್ಚು ನಿಗೂಡತೆಯಿಂದ ಕೂಡಿವೆ. ಆ ದಿನಗಳ ಸನ್ನಿವೇಶಗಳನ್ನು ಹಾವೇರಿ ಜಿಲ್ಲೆಯ ಗೋಟಗೋಡಿಯ ಶಿಲ್ಪಕಲಾ ಕುಟೀರದ 150 ಕ್ಕೂ ಹೆಚ್ಚು ಕಲಾವಿದರು ಸತತ 3 ವರ್ಷಗಳಿಂದ ಶಿಲ್ಪಗಳನ್ನು ಸುಂದರಗೊಳಿಸುವಲ್ಲಿ ಇವರ ಪರಿಶ್ರಮವು ಇದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ ರಾಕ್ ಗಾರ್ಡನ್‍ಗೆ ಒಳಗೆ ಒಮ್ಮೆ ಪ್ರವೇಶಿಸಿದರೆ ಮುಗಿಯಿತು ಒಂದು ರೀತಿ ರೋಮಾಂಚನಕಾರಿ ಅನುಭವ ನೆನಪಿಸುತ್ತದೆ. ನೈಜತೆಗೆ ತೀರಾ ಹತ್ತಿರವಾದಂತೆ ಶಿಲ್ಪದಲ್ಲಿ ಕಿತ್ತೂರು ಮತ್ತು ರಾಯಣ್ಣನ ಶೌರ್ಯದ ಬದುಕನ್ನು ಕಟ್ಟಿಕೊಡಲಾಗಿದೆ.

ಇಲ್ಲಿನ ಒಂದೊಂದು ಕಲಾಕೃತಿಗಳು ಒಂದೊಂದು ಕಥೆಗಳನ್ನು ಹೇಳುತ್ತವೆ ಇಲ್ಲಿನ ವನದಲ್ಲಿ ನಡೆದಾಡುತ್ತಾ ಸಾಗಿದರೆ ರಾಯಣ್ಣನ ಶೌರ್ಯ ಪರಾಕ್ರಮ ನೋಡಿ ನಾವು ಇಂತಹ ಸನ್ನಿವೇಶದಲ್ಲಿ ಭಾಗವಹಿಸಬೇಕಿತ್ತು ಎನ್ನುವ ಮನಸ್ಸು ಬರುತ್ತದೆ. ರಾಯಣ್ಣನ ಜೊತೆ ಸೇರಿಕೊಳ್ಳಬೇಕಿತ್ತು ಎನ್ನುವ ಮನದಲ್ಲಿ ಭಾವನೆ ಬರುದೆ ಇರದು. ಕಿತ್ತೂರಿನ ಸುತ್ತ ಮುತ್ತಲಿನ ವೀರ ಕಲಿಗಳ ಹೋರಾಟದ ಕಿಚ್ಚನ್ನು ಶಿಲ್ಪಗಳಲ್ಲಿ ಬಿಂಬಿಸಿರುವ ದೃಶ್ಯಗಳಂತೂ ಮನಮೋಹಕವಾಗಿವೆ. ಕೇವಲ ಮಾತಿನ ಮೂಲಕ ರಾಯಣ್ಣನ ಜೀವನ ಚರಿತ್ರ ಕೇಳುವುದಕ್ಕಿಂತ ಕಲಾಕೃತಿಗಳ ಮೂಲಕ ಅವರ ಬದುಕನ್ನು ಕಟ್ಟಿಕೊಟ್ಟಿರುವುದು ತುಂಬಾ ಸಂತೋಷದ ವಿಷಯ ರಾಯಣ್ಣನನ್ನು ಕುರಿತು ಇನ್ನಷ್ಟು ಆಧ್ಯಯನ ಆಗಬೇಕು ಅವರ ಇತಿಹಾಸ ಎಲ್ಲರಿಗೂ ತಿಳಿಯಬೇಕು ಎನ್ನುವ ಉದ್ದೇಶದಿಂದ ಈ ಶಿಲ್ಪವನ ನಿರ್ಮಾಣವಾಗಿದೆ ಎನ್ನುತ್ತಾರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹೊರಪೇಟೆ ಮಲ್ಲೇಶಪ್ಪ. ಬನ್ನಿ ಬರುವಾಗ ನಿಮ್ಮ ಮಕ್ಕಳನ್ನು ಕರೆ ತನ್ನಿ ಮಕ್ಕಳಿಗೆ ರಾಯಣ್ಣನ ಸಾಹಸ ಕೆಚ್ಚೆದೆಯ ಹೋರಾಟದ ಕಿಚ್ಚನ್ನು ಮಕ್ಕಳಿಗೆ ಪರಿಚಯಿಸಿ.

ಬೆಳಗಾವಿಯಿಂದ 50 ಕಿ.ಮೀ, ಧಾರವಾಡದಿಂದ 45, ಬೈಲಹೊಂಗಲದಿಂದ 16 ಕಿ ಮೀ, ಕಿತ್ತೂರಿನಿಂದ 15 ಕಿ ಮೀ ಇದೆ ಈ ಶಿಲ್ಪವನ.


  • ಟಿ.ಶಿವಕುಮಾರ್ – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಲ್ವೇಯಲ್ಲಾಪೂರ (ತಾ) ಹಾನಗಲ್ಲ, (ಜಿ) ಹಾವೇರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading