‘ಕಾವ್ಯ ಕನ್ನಿಕೆ’ ಕವನ – ಹೆಚ್. ಪಿ. ಕೃಷ್ಣಮೂರ್ತಿ

ನಿನ್ನ ಬಳುಕೇ ಹಂಸ ನಡಿಗೆಯಾಗಿರಲು ಹಂಸಗಳ ಜಾಡೇಕೆ ನನಗೆ!…ಹೆಚ್. ಪಿ. ಕೃಷ್ಣಮೂರ್ತಿ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ನಿನ್ನ ದೇಹವೇ ಶೃಂಗಾರ ಕಾವ್ಯವಾಗಿರಲು
ಬೇರೆ ಕಾವ್ಯದ ಹಂಗೇಕೆ ನನಗೆ!

ನಿನ್ನ ಮಾಧಕ ಕಂಗಳೇ ಅಮಲಿನ ಸುರಿಯಾಗಿರಲು
ದೇವ ಸುರೆ ಏಕೆ ನನಗೆ!

ನಿನ್ನ ಅಧರಗಳೆ ಮಧು ತುಂಬಿದ ಪಾತ್ರೆಯಗಿರಲು
ಜೇನ ಸುಧೆ ಏಕೆ ನನಗೆ!

ನಿನ್ನ ಮುಖಾರವಿಂದವೇ ಹಾಲ್ಬೆಳದಿಂಗಳ ಪ್ರಭೆಯಾಗಿರಲು
ಚಂದ್ರಿಕೆಯ ಹಂಬಲವೇಕೆ ನನಗೆ!

ನಿನ್ನುಲ್ಲಿಯೇ ಕೋಗಿಲೆಯ ಹಾಡಾಗಿರಲು
ಕೋಗಿಲೆಯ ಜಾಡೇಕೆ ನನಗೆ!

ನಿನ್ನ ನೂಪುರವೇ ಸಂಗೀತವಾಗಿರಲು
ಗಂಧರ್ವ ಗಾನದ ಗುಂಗೇಕೆ ನನಗೆ!

ನಿನ್ನ ಬಳುಕೇ ಹಂಸ ನಡಿಗೆಯಾಗಿರಲು
ಹಂಸಗಳ ಜಾಡೇಕೆ ನನಗೆ!

ನಿನ್ನ ಚಲುವೇ ಒಂದು ನಂದನವಾಗಿರಲು
ಇಂದ್ರನ ನಂದನದಾಸೆ ಏಕೆ ನನಗೆ!


  • ಹೆಚ್. ಪಿ. ಕೃಷ್ಣಮೂರ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading