ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋಲೆಬಸವ ಆಡಿಸುವವರನ್ನು ಕಾಣಬಹುದು. ಈ ಜನಾಂಗದವರು ಕೃಷಿಯ ಜೊತೆ ಈ ಕುಲಕಸುಬನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರು ರಾಮನನ್ನು ಕುಲದೈವನೆನ್ನುತ್ತಾರೆ.‘ಕೋಲೆ ಬಸವ’ ‘ಕೋಲೆಬಸವ ಆಡಿಸುವವರು’ ಅವರ ಕುರಿತು ಶಿಕ್ಷಕರಾದ ಟಿ.ಶಿವಕುಮಾರ್ ಅವರು ಓದುಗರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇಂದಿನ ಯಾಂತ್ರಿಕ ಬದುಕಿನಲ್ಲಿ ಅನೇಕ ಜಾನಪದ ಆಟಗಳು, ಆಚರಣೆಗಳು ಒಂದೊಂದಾಗಿ ತೆರೆಮರೆಗೆ ಸರಿಯುತ್ತಿವೆ. ಇಂತಹ ಕಲೆಗಳಲ್ಲಿ ಕೋಲೆಬಸವ ಆಟವು ಒಂದು. ಗ್ರಾಮೀಣ ಜನರು ಬಹು ಹಿಂದಿನಿಂದಲೂ ಬಸವನನ್ನು ದೈವತ್ವಭಾವನೆಯಿಂದ ಆರಾಧಿಸುತ್ತಾ ಬಂದಿದ್ದಾರೆ. ಬಸವನಿಗೆ ತರಬೇತಿಯನ್ನು ನೀಡಿ ಆಟವಾಡಿಸುತ್ತಾ ಹೊಟ್ಟೆ ಹೊರೆದುಕೊಳ್ಳುವ ವೃತ್ತಿಕಾರರನ್ನು ‘ಕೋಲೆಬಸವ ಆಡಿಸುವವರು’ ಎಂದೇ ಕರೆಯಲಾಗುತ್ತದೆ.
ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋಲೆಬಸವ ಆಡಿಸುವವರನ್ನು ಕಾಣಬಹುದು ಈ ಜನಾಂಗದವರು ಕೃಷಿಯ ಜೊತೆ ಈ ಕುಲಕಸುಬನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರು ರಾಮನನ್ನು ಕುಲದೈವನೆನ್ನುತ್ತಾರೆ. ಆದ್ದರಿಂದ ಈ ಬಸವನಿಗೆ ರಾಮತಾತಾ ಎಂದು ಕರೆಯುತ್ತಾರೆ.

ವಿವಿಧ ಅಲಂಕಾರಗಳಿಂದ ಶೃಂಗಾರ ಮಾಡಿದ ಗೋವುಗಳನ್ನು ಈ ಆಟಕ್ಕೆ ಕರೆತರಲಾಗುತ್ತದೆ ಈ ಬಸವಗಳು ಯಾಜಮಾನ ಹೇಳಿದಂತೆ ಆಟವಾಡುತ್ತವೆ. ಕಾಲೂರಿ ನಮಸ್ಕರಿಸುತ್ತವೆ ಕಾಲುಮೇಲೆ ಕಾಲೂರಿ ನಿಲ್ಲುತ್ತವೆ.ಯಾಜಮಾನ ಹೇಳಿದ ಹಾಗೇ ಕತ್ತನ್ನು ಆಡಿಸುತ್ತಾ ಹೇಳಿದಂತೆ ಕೇಳುತ್ತದೆ. ಸೂತ್ರದಾರನ ಎದೆಯ ಮೇಲೆ ಕಾಲಿನ ಮೇಲೆ ನಿಂತು ಕುಣಿಯುತ್ತವೆ. ಹೀಗೆ ಯಾಜಮಾನ
ಹೇಳಿದ ಮಾತನ್ನು ಕೇಳುತ್ತಾ ನೆರೆದ ಜನರೇದರು ತನ್ನ ಚಮತ್ಕಾರವನ್ನು ಚಾಚು ತಪ್ಪದೇ ಪಾಲಿಸುತ್ತದೆ. ಬಸವ ಹೊರಿಗೆ ರಾಮನೆಂದು ಕರುವುಗೆ ಸೀತೆ ಎಂದು ಕರೆಯುವ ಇವರು ವೈವಾಹಿಕ ಸಂಬಂಧದ ಬಗ್ಗೆ ಮಾತುಕಥೆ ನಡೆಸಿ ಇಬ್ಬರಿಗೂ ವಿವಾಹ ಮಾಡಿಸುವ ಆಟದ ಮೂಲಕ ಜನರಿಗೆ ಸೀತಾರಾಮ ಕಲ್ಯಾಣದ ಕಥೆಯನ್ನು ತುಂಬಾಸೊಗಸಾಗಿ ನಿರೂಪಿಸುತ್ತಾರೆ ಈ ಆಟ ನಡೆಯುವಾಗ ಹಿನ್ನೆಲೆಯಲ್ಲಿನ ಡೋಲು ನಾಗಸ್ವರ ಓಲಗ ಮುಂತಾದ ವಾದ್ಯಗಳ ಇಂಪಾದಧ್ವನಿ ಜನರನನ್ನು ರಂಜಿಸುತ್ತದೆ.

ಮೂಕ ಪ್ರಾಣಿಗಳಿಗೆ ಆಟವಾಡುವ ತರಬೇತಿ ನೀಡುವುದು ಸುಲಭದ ಮಾತಲ್ಲ ಇಂತಹ ಕಲೆಯನ್ನು ಕರಗತ ಮಾಡಿಕೊಂಡಿರುವ ಕೋಲೆಬಸವನನ್ನು ಆಡಿಸುವವರು ಅಪರೂಪವಾಗುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ನಗರ ಪ್ರದೇಶಗಳಲ್ಲಿ ಇಂತಹ ಕೋಲೆಬಸವವನನ್ನು ನೋಡುವವರೇ ಇಲ್ಲ ಆದರೆ ಹಳ್ಳಿ ಪ್ರದೇಶಗಳಲ್ಲಿ ಈ ಬಸವ ಬಂದಿದ್ದಾನೆ ಎಂದರೆ ಯಾರು ಹಾಗೇ ಕಳುಹಿಸುವುದಿಲ್ಲ ಅತನಿಗೆ ತಮ್ಮ ಕೈಲಾದಷ್ಟು ಹಣವನ್ನು ಇಲ್ಲ ಅಂದರೆ ಅಕ್ಕಿ ಜೋಳ ರಾಗಿ ಭತ್ತವನ್ನು ನೀಡಿ ಕಳುಹಿಸುತ್ತಾರೆ. ಊರಿಂದ ಊರಿಗೆ ಅಲೆಯುವ ಇವರು ಊರ ಹೊರಗಡೆ ಶಾಲಾಕಟ್ಟೆ, ದೇವಸ್ಥಾನ, ಇಲ್ಲವೇ ಯಾವುದಾದರು ಬೀಳು ಜಾಗ ಸಿಕ್ಕರೆ ಸಾಕು ಅದೇ ಇವರಿಗೆ ಅರಮನೆ. ಹಗಲು ಊರು ಊರು ಅಲೆದು ರಾತ್ರಿ ಸಮಯದಲ್ಲಿ ಬಸವನನ್ನು ಕಟ್ಟಿ ಮಲಗಿದರೆ ಮುಗಿಯಿತು ಬೆಳ್ಳಗ್ಗೆ ಎದ್ದು ಬಸವನನ್ನು ಸಿಂಗರಿಸಿಕೊಂಡು ಮತ್ತೇ ಇವರ ಪ್ರಯಾಣ ಪ್ರಾರಂಭ. ಇವರು ಬರುವಾಗ ಸಂಸಾರ ಸಮೇತರಾಗಿ ಬರುವ ಇವರು ಸರ್ಕಾರ ಶಿಕ್ಷಣದ ಬಗ್ಗೆ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಂಡರು ಇವರು ಮಾತ್ರ ಶಿಕ್ಷಣದಿಂದಲೂ ದೂರ ಉಳಿದಿದ್ದಾರೆ.

ಈ ಕೋಲೆಬಸವನಿಗೆ ಹಿಂದಿನಿಂದಲೂ ಅವುಗಳಿಗೆ ದೈವತ್ವ ಸ್ವರೂಪ ನೀಡುತ್ತಿದ್ದರು. ಆದರಿಂದು ಇಂತಹ ಗೋವುಗಳನ್ನು ಕಸಾಯಿ ಖಾನೆಗೆ ತಳ್ಳುವ ಹೀನ ಸಂಸ್ಕ್ರತಿ ನಮ್ಮಲ್ಲಿ ಬೆಳೆಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಅಲ್ಲವೇ?
- ಟಿ.ಶಿವಕುಮಾರ್ – ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಲ್ವೇಯಲ್ಲಾಪೂರ (ತಾ) ಹಾನಗಲ್ಲ (ಜಿ) ಹಾವೇರಿ
