ಸೋಲದಂತೆ ಮುನ್ನಡೆಸುವವರು ಬೇಕಾಗಿದ್ದಾರೆ…!

ಸೋತಾಗ ಸಾಂತ್ವನ ಹೇಳುವವರಿಗಿಂತಲೂ ಸೋಲದಂತೆ ಮುನ್ನಡೆಸುವವರು ಬೇಕಾಗಿದ್ದಾರೆ !…ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ಅವರ ಕವನವನ್ನು ತಪ್ಪದೆ ಮುಂದೆ ಓದಿ…

ಬಿದ್ದಾಗ ಎತ್ತಿ ಹಿಡಿಯುವವರಿಗಿಂತಲೂ
ಬೀಳದಂತೆ ಕೈ ಹಿಡಿದು ನಡೆಸುವವರು ಬೇಕಾಗಿದ್ದಾರೆ !

ಸೋತಾಗ ಸಾಂತ್ವನ ಹೇಳುವವರಿಗಿಂತಲೂ
ಸೋಲದಂತೆ ಮುನ್ನಡೆಸುವವರು ಬೇಕಾಗಿದ್ದಾರೆ !

ಜನರ ನಿಂದನೆ, ಅಪಮಾನಗಳಿಂದ ಕುಗ್ಗಿ ಹೋದಾಗ
ನಾನಿದ್ದೇನೆ ಅಂಜದಿರು ಎಂದು ಧೈರ್ಯ ತುಂಬುವ ಸ್ನೇಹಿತರು ಬೇಕಾಗಿದ್ದಾರೆ !

ಕೆಲಸದಲ್ಲಿ ಆಲಸಿಯಾದಾಗ
ನನ್ನನ್ನು ಹುರಿದುಂಬಿಸುವವರು ಬೇಕಾಗಿದ್ದಾರೆ !

ವಯಸ್ಸಾಗಿ ಕೆಲಸ ನೀಗದೆ ಕೈಚೆಲ್ಲಿ ಕುಳಿತಾಗ
ಬಳಲದಿರು ಮನವೇ ಎನ್ನುವವರು ಬೇಕಾಗಿದ್ದಾರೆ !

ಸಂಸಾರ ಭಾರ ಹೆಚ್ಚಾದಾಗ
ಸಕಲರನ್ನು ಸಲಹುವವನು ದೇವರಿದ್ದಾನೆ ಎನ್ನುವರು ಬೇಕಾಗಿದ್ದಾರೆ !

ಎಲ್ಲೆಡೆ ಕತ್ತಲೆ ತುಂಬಿದಾಗ
ಕೋಲ್ಮಿಂಚಿನಂತೆ ಬೆಳಕು ನೀಡುವವರು

ಬೇಕಾಗಿದ್ದಾರೆ !
ನನ್ನನ್ನು ದುರುಪಯೋಗ ಮಾಡಿಕೊಳ್ಳುವವರಿಗಿಂತಲೂ
ನಾನು ದುರುಪಯೋಗವಾಗದಂತೆ ತಡೆಯುವವರು ಬೇಕಾಗಿದ್ದಾರೆ !

ನನ್ನನ್ನು ಒವರ್ಟೇಕ್ ಮಾಡುವವಗಿಂತಲೂ
ನನ್ನೊಂದಿಗೆ ಸಮನಾಗಿ ಹೆಜ್ಜೆ ಹಾಕುವರು ಬೇಕಾಗಿದ್ದಾರೆ !

ಒಳಗೊಂದು ಹೊರಗೊಂದು ಮಾತನಾಡಿ
ಜಗಳ ಹಚ್ಚಿ ಮೋಜ ನೋಡುವವರಿಗಿಂತಲೂ
ಶುದ್ಧ ಹೃದಯವಂತರು ಬೇಕಾಗಿದ್ದಾರೆ !


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW