ಸುಸಂಸ್ಕೃತ ವಾದ, ಶಾಂತಿಯುತವಾದ ವಿಧಾನಗಳೇ ಸಂವಿಧಾನ. ಈ ಸಂವಿಧಾನಗಳು ಪ್ರತಿಯೊಬ್ಬರ ಕರ್ತವ್ಯ. ಡಾ.ಬಿ. ಆರ್. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆ ಸಮನ್ವಯ ಸಿಗಲೆಂದು ಸಂವಿಧಾನವನ್ನು ತಂದರು. ಎಲ್ಲರೂ ಸಂವಿಧಾನದ ಮಹತ್ವ ತಿಳಿದು ತಮ್ಮ ತೊಂದರೆಗಳನ್ನು ಹೇಳುವಂತರಾಗಬೇಕು. ಕವನ ಸಂಧ್ಯಾ ಟಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ತಪ್ಪಿದ್ದರೆ ಶಿಕ್ಷೆ ಒಪ್ಪಿದ್ದರೆ ರಕ್ಷೆ. ಜನರ ನಡೆ ನುಡಿ ನೀತಿ, ನಿಯತ್ತಿನ ಸುಕ್ರಾಂತಿ ಪ್ರತಿಫಲಿಸುವಂತಾಗಬೇಕು. ಆಗ ಮಾತ್ರ ಭಾರತವು ಸರ್ವತೋಮುಖದ ವೈಭವ ಕಾಣುತ್ತದೆ. ಪರರಾಜ್ಯವನ್ನು ಗೆದ್ದವರಿಗಿಂತ ಆತ್ಮರಾಜ್ಯವನ್ನು ಗೆದ್ದವರೆ ಶ್ರೇಷ್ಠ. ಸಂವಿಧಾನ ಶಿಲ್ಪಿ ಎನಿಸಿಕೊಂಡರು ಅಂಬೇಡ್ಕರವರು. ಸತ್ಯ, ಅಹಿಂಸೆಯ ಪ್ರತಿಮೆ ಎನಿಸಿಕೊಂಡರು ಮಹಾತ್ಮ ಗಾಂಧಿ ಅವರು. ಗಣರಾಜ್ಯೋತ್ಸವದಲ್ಲಿ ಪ್ರತಿಯೊಬ್ಬರೂ ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರ ಮತ್ತು ನನ್ನ ಸಂಬಂಧ ಏನು? ನಾನು ಯಾರು? ಯೋಚಿಸಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದವರ ಸ್ಮರಿಸಿ ಫೋಟೋಗಳಿಗೆ ಪುಷ್ಪವೇರಿಸಿ ನಮಿಸಿ ಹೆಮ್ಮೆಯಿಂದ ತಲೆಯೆತ್ತಿ ನೋಡಿ ಭಾರತಾಬೆಗೆ ನಮಿಸುವದಿನ ಗಣರಾಜ್ಯೋತ್ಸವವು. ಜೈ ಭಾರತಮಾತೆ. ಜೈ ಕರ್ನಾಟಕ ಮಾತೆ…

ಪ್ರಕೃತಿ ಇರುವುದು ನಿನಗಾಗಿ
ನೀನೇನು ಮಾಡಿದಿ ಪ್ರಕೃತಿಗಾಗಿ
ಸುಕೃತಿಗೆ ಸಾಕ್ಷಿ ಸೂರ್ಯನು
ಕೃತಿ ಅರಿಯಲು ವಿಚಾರಿಸು ನೀನು
ಜ್ಞಾನ ಕರ್ಮ ಬುದ್ಧಿ ನಿನಗಾಗಿ
ಅಜ್ಞಾನ ಅಕರ್ಮ ದಾನವನಿಗಾಗಿ
ವಿಚಾರಿಸಿ ಆಚರಿಸು ಶಾಂತಿಗಾಗಿ
ಸಂಚರಿಸು ಹೆಮ್ಮೆಯ ಪುತ್ರನಾಗಿ
ಗಾಳಿಯು ಬೀಸುವುದು ಉಸಿರಿಗೆ
ಪಕ್ಷ ಪಾತ ಮಾಡದೇ ನಮಗೆ
ನೀ ಏನು ನೀಡುವಿ ಗಾಳಿಗಾಗಿ
ಸು ಮನ ಕೊಡು ಪ್ರಕೃತಿಗೆ
ಭರದಿ ಸಾಗುವವು ಸಮಯ ದಿನ
ಕರದಿ ಹಿಡಿಯೆ ಬಾರವು ಸವನ ದಿನ
ಸಾರುವವು ನಿನ್ನ ನಿಯತ ಗುಣ
ಬರುವವು ವಿಶ್ವಕೆ ಸತ್ಯಾಂಶ ಕಣ
ಪ್ರಕೃತಿಗೆ ಮುಟ್ಟುವುದು ನಿನ್ನ ನಮನ
ಕೃತಿಗೆ ಹರಿಸುವದು ವಿಶ್ವದ ಗಮನ
ಆಗಮ ಸಂಚಿತ ಪ್ರಾರಬ್ಧ ಭೋಗ
ನಿಗಮ ತರುವುದು ಸು ನೊಗ
- ಸಂಧ್ಯಾ ಟಿ
