ಅರಣ್ಯದಲ್ಲಿ ಬೆಂಕಿ ಕಂಡಾಗ ನೀವು ಮಾಡಬೇಕಾದ್ದು ಇಷ್ಟೇ ೧೯೨೬ ಗೆ ಕರೆಮಾಡಿ…ನಿಮ್ಮ ಸಮಯ ಪ್ರಜ್ಞೆಯಿಂದ ಅರಣ್ಯ ನಾಶವಾಗದಂತೆ ಕಾಪಾಡಬಹುದು. ಬನ್ನಿ…ನಮ್ಮ ಸುತ್ತಮುತ್ತಲಿನ ಅರಣ್ಯವನ್ನು ಬೆಂಕಿಯಿಂದ ರಕ್ಷಿಸಿಕೊಳ್ಳೋಣ…
ನಿರೀಕ್ಷೆಗೂ ಮೀರಿ ಮಳೆ ಚೆನ್ನಾಗಿ ಆದಾಗ, ಕೆರೆಕಟ್ಟೆಗಳು ತುಂಬಿದಾಗ ಮನಸ್ಸಿಗೆ ಎಲ್ಲಿಲ್ಲದ ಆನಂದ, #ಬೆಟ್ಟಗುಡ್ಡಗಳಲ್ಲಿ ಪ್ರಕೃತಿಯ ಹಸಿರಿನ ಹೊದಿಕೆ ಬೇರೊಂದು ಲೋಕವನ್ನು ಕಣ್ಣಿಗೆ ಸೃಷ್ಟಿಸಿಕೊಳ್ಳುತ್ತದೆ. ಆದರೆ ಅರಣ್ಯದ ಸಂರಕ್ಷಣೆಯ ಹೊಣೆ ಹೊತ್ತ ಅರಣ್ಯ ಇಲಾಖೆಗೆ ಮಾತ್ರ ಖುಷಿಯ ಜೊತೆಗೆ ಆತಂಕವೂ ಸೃಷ್ಟಿಯಾಗಬೇಕು. ಕಾರಣ ಇಷ್ಟೇ ಮಳೆ ಚೆನ್ನಾಗಿ ಆದಾಗ ಅರಣ್ಯದಲ್ಲಿ ಹುಲ್ಲಿನ ಜಾತಿಯ ಸಸ್ಯಗಳು ಸಹ ಸೊಂಪಾಗಿ, ದಟ್ಟವಾಗಿ ಬೆಳೆದು ನಿಲ್ಲುತ್ತವೆ. ಅಷ್ಟೇ ಬೇಗ ಬೇಸಿಗೆಯಲ್ಲಿ ಒಣಗಿಹೋಗುತ್ತವೆ ಇದರಿಂದ ಅತಿವೃಷ್ಟಿ-ಅನಾವೃಷ್ಟಿ ತರಹವೇ ಮಳೆಯಷ್ಟೇ ಬೆಂಕಿಯು
ಸಹ ತನ್ನ ಪ್ರಬಲತೆಯನ್ನು ಖಾತರಿಪಡಿಸಿಕೊಳ್ಳುವ ಸಂದರ್ಭ. ಕ್ಷಣ ಮಾತ್ರದಲ್ಲಿಯೇ ಇಡಿ ಅರಣ್ಯವನ್ನು ಬೆಂಕಿ ತನ್ನ ತೆಕ್ಕೆಗೆ ತೆಗೆದುಕೊಂಡು ಬಸ್ಮಾ ಮಾಡಿಬಿಡುತ್ತದೆ.
ನಮ್ಮ ಭಾಗದಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಸಂಭವಿಸಲು ಸಾಧ್ಯವೇ ಇಲ್ಲ. ಆದರೂ ಬೇಸಿಗೆಯಲ್ಲಿ ಅರಣ್ಯ ಪ್ರದೇಶಗಳಿಗೆ ಪ್ರತಿವರ್ಷವೂ ಬೆಂಕಿ ಬೀಳುವುದು ಹೆಚ್ಚು ಕಂಡುಬರುತ್ತಿದ್ದು ಇದಕ್ಕೆ ಮೂಲಕಾರಣ ತಂಬಾಕು ವ್ಯಸನಿಗಳು, ಕಿಡಿಗೇಡಿಗಳು ಹಾಗೂ ನಷ್ಟದ ಅರಿವಿಲ್ಲದ ಕೆಲ ಜನರು.

ಪ್ರತಿ ವರ್ಷವೂ ಸಹ ದೊಡ್ಡಬಳ್ಳಾಪುರ ತಾಲೂಕಿನ ಮೀಸಲು ಅರಣ್ಯ ಪ್ರದೇಶಗಳಾದ ಮಾಕಳಿದುರ್ಗ, ಉಜ್ಜನಿ, ಮುದ್ದೇನಹಳ್ಳಿ, ಘಾಟಿ ಸುಬ್ರಹ್ಮಣ್ಯ, ಹುಲುಕುಡಿ, ದೇವರ ಬೆಟ್ಟ, ಗಂಡರಗೊಳಿಪುರ ಅರಣ್ಯದ ಸುತ್ತಮುತ್ತಲಿನಲ್ಲಿ, ಕಲ್ಲು ಕೋಟೆಯೂ ಸೇರಿದಂತೆ ಸುಮಾರು 5000 ಎಕರೆ ಗಳಿಗಿಂತಲೂ ಹೆಚ್ಚು ಅರಣ್ಯ ಪ್ರದೇಶವು ಬೆಂಕಿಯಲ್ಲಿ ಸಿಲುಕಿ ಸುಟ್ಟು ಕರಕಲಾಗಿವೆ. ಒಂದು ತಾಲೂಕಿನಲ್ಲಿಯೇ ಇಷ್ಟು ನಷ್ಟವಾದರೆ ಇಡೀ ರಾಜ್ಯದಲ್ಲಿ ಬೆಂಕಿಯಿಂದ ಆಗುವ ಅನಾಹುತವನ್ನು ಕಲ್ಪಿಸಿಕೊಳ್ಳಿ.
ಬೆಂಕಿ ನಂದಿಸುವಲ್ಲಿ ಅರಣ್ಯ ಇಲಾಖೆಯ ಕಾರ್ಯವೈಖರಿಗಳು ಈ ರೀತಿ ಇವೆ. ಅರಣ್ಯದ ಮಧ್ಯೆಯೇ ಫೈಯರ್ ಕಂಟ್ರೋಲಿಂಗ್ ರೂಮ್ ಗಳನ್ನು ನಿರ್ಮಿಸಿರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂಜಾಗ್ರತ ವಾಗಿ ಅರಣ್ಯದಲ್ಲಿ ತಂಗಿದ್ದು ಬೆಂಕಿ ಕಂಡಕೂಡಲೆ ನಿಯಂತ್ರಿಸುವ ಕೆಲಸ ಮಾಡಲು ಇದು ಸಹಕಾರಿಯಾಗಿದೆ.

- ಬೆಂಕಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುವುದನ್ನು ತಡೆಯುವುದಕ್ಕೆ ಹಾಗೂ ಜನರು ಧೂಮಪಾನ ಮಾಡಿ ಬೀಸಾಡುವ ಸಿಗರೇಟ್, ಬೀಡಿಯ ಕಿಡಿಹೊತ್ತಿ ಬೆಂಕಿ ತಗಲುವ ಸಾಧ್ಯತೆಗಳೇ ಹೆಚ್ಚಿರುವುದರಿಂದ. ಅರಣ್ಯದಲ್ಲಿ ಈ ರೀತಿ ಏಕಾಏಕಿ ಉಂಟಾಗುವ ಬೆಂಕಿಯನ್ನು ತಡೆಯುವ ಅಥವಾ ದೂರದವರೆಗೆ ವ್ಯಾಪಿಸದಂತೆ ಬೆಂಕಿ ರೇಖೆ (ಫೈರ್ ಲೈನ್) ತಂತ್ರ ಬಳಕೆ ಮಾಡಲಾಗುತ್ತದೆ. ಅರಣ್ಯ ಪ್ರದೇಶದ ಮೂಲಕ ಸಾಗುವ ರಸ್ತೆಗಳ ಅಕ್ಕ-ಪಕ್ಕ, ಕಾಡಿನ ಕಾಲು ದಾರಿಗಳು, ಬೆಂಕಿ ಸ್ಥಳಗಳನ್ನು ಗುರುತಿಸಿ ನಂತರ ಮೂರು ಮೀಟರ್ ಅಗಲದ ಅಂತರದಲ್ಲಿ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಒಣಗಿದ ಹುಲ್ಲು, ತರಗು ಗಿಡಗಳನ್ನು ಸುಟ್ಟು ನಾಶಪಡಿಸುತ್ತಾರೆ.
- ಅರಣ್ಯವನ್ನು ಬೆಂಕಿಯಿಂದ ರಕ್ಷಣೆ ಮಾಡಲು ಅಗ್ನಿಶಾಮಕ ಸಾಧನಗಳ ಜೊತೆಗೆ ಮಾನವನ ಶಕ್ತಿಯು ಸಹ ತುಂಬಾ ಮುಖ್ಯ ಆದಕಾರಣ ಅರಣ್ಯ ಇಲಾಖೆಯು ಆತ್ಮೀಯ ನಾಗರಿಕರಲ್ಲಿ ಬೆಂಕಿಯನ್ನು ಪತ್ತೆಹಚ್ಚಲು, ನಿಯಂತ್ರಿಸಲು ಹಾಗೂ ನಂದಿಸಲು ಸಹಾಯ ಮಾಡುವುದಕ್ಕೆ ಮುಂದೆ ಬಂದು ಸ್ವಯಂಸೇವಕರಾಗಿ ಈ ಮಹತ್ಕಾರ್ಯಕ್ಕೆ ಅರಣ್ಯ ಇಲಾಖೆಯ ಆಭಾರಿಯಾಗಲಿದೆ.
ಈ ಮೇಲಿರುವ ಅಂಶಗಳ ಕರ್ತವ್ಯವನ್ನು ನಿಮ್ಮ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಇಲಾಖೆಯು ಮಾಡದಿದ್ದಲ್ಲಿ ದಯಮಾಡಿ ಅವರನ್ನು ಎಚ್ಚರಿಸಿ ಜೊತೆಗೆ ಕಾಡಿನ ಸುತ್ತಮುತ್ತಲಿನಲ್ಲಿ #ಬೆಂಕಿ ಕಂಡುಬಂದಲ್ಲಿ ದಯವಿಟ್ಟು ಕೂಡಲೇ ಅರಣ್ಯ ಇಲಾಖೆಯ ಸಹಾಯವಾಣಿ 1926ಗೆ ಕರೆ ಮಾಡಿ.

ಬೆಂಕಿಯೂ ಸಣ್ಣಪ್ರಮಾಣ ಪ್ರಾರಂಭದ ಹಂತದಲ್ಲಿ ಇದ್ದಾಗ ನಂದಿಸುವ ಪ್ರಯತ್ನವೂ ಹಾಗುವ ದೊಡ್ಡ ಅನಾಹುತವನ್ನು ತಡೆಯುತ್ತದೆ. ಅನುಭವವಿದ್ದಲ್ಲಿ ನಂದಿಸುವ ಪ್ರಯತ್ನಪಡಿ, ಇಲ್ಲದಿದ್ದರೆ ಕೂಡಲೇ #ಅರಣ್ಯ_ಇಲಾಖೆಯ ಸಹಾಯವಾಣಿಗೆ ತಿಳಿಸಿ. ಈ ಸಣ್ಣ ಕಾರ್ಯವು ಅನೇಕ ಸಸ್ಯ ಸಂಕುಲ, ಪ್ರಾಣಿ ಸಂಕುಲ ಹಾಗೂ ಮಾನವ ಸಂಕುಲಕ್ಕೆ ಒಳಿತಾಗುತ್ತದೆ.
- ಚಿದು ಯುವ ಸಂಚಲನ (ಪರಿಸರವಾದಿ, ಲೇಖಕರು) ದೊಡ್ಡಬಳ್ಳಾಪುರ
