ಶೃಂಗಾರ ವೆಂದರೆ ಕಾಮವಲ್ಲ… ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಶೃಂಗಾರ ಕಾವ್ಯವನ್ನು ತಪ್ಪದೆ ಓದಿ…
ಆ ಇಬ್ಬರೂ ಸಹ ಮಹಾ ಕವಿಗಳೇ
ರಸಿಕತೆಯಲ್ಲಿ
ಆ ಬೆಳದಿಂಗಳಿರುಳ
ಆ ಉಸುಕಿನ ಪಲ್ಲಂಗದ ಮೇಲೆ
ಹೊರಳಾಡುತ
ಬರೆದು ಕೊಂಡರು ಪರಸ್ಪರ
ಅವನ ಬೆನ್ನಮೇಲವಳು
ಅವಳೆದೆಯ ಮೇಲವನು
ಶೃಂಗಾರ ಕಾವ್ಯವನು!
* * *
ಆ ರಸಗಳಿಗೆಯಲ್ಲಿ
ಅವಳು
ಅವನ ಬೆನ್ನ ಮೇಲೆ
ಗೀಚಿದ ಕಾವ್ಯವೇ
ಜಗತ್ತಿನ ಅದ್ಭುತ
ರೊಮ್ಯಾಂಟಿಕ್ ಕಾವ್ಯ!
* * *
ಶ್ವೇತ ಪುಟದ ಮೇಲೆ
ಲೇಖನಿಯಿಂದ ಶೃಂಗಾರ ಕವಿತೆ
ಬರೆ ಬರೆದು ಸಾಕಾಗಿದೆ
ಈಗ ಶ್ವೇತ ವರ್ಣದ ನಿನ್ನ ತನು ಪುಟದ ಮೇಲೆ
ತುಟಿ ಲೇಖನಿಯಿಂದ
ಬರೆಯಬೇಕೆನಿಸಿದೆ!
* * *
ಶೃಂಗಾರ ವೆಂದರೆ
ಕಾಮವಲ್ಲ
ಹದಿನಾರು ಸಾವಿರ
ಸಖಿಯರ ಜತೆ
ತುಂಟ ಕೃಷ್ಣ ಆಡಿದ ಸರಸ ಸಲ್ಲಾಪದ ಪ್ರೇಮ
ಕಾವ್ಯ!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
