ಪತ್ರಕರ್ತ, ಲೇಖಕ ಮಾಕೋನಹಳ್ಳಿ ವಿನಯ್ ಮಾಧವ್ ಅವರ ಐದನೇಯ ಕೃತಿ ‘ಶೂನ್ಯದೆಡೆಗೆ’ ಪುಸ್ತಕ ಬಿಡುಗಡೆ ಇದೇ ಶನಿವಾರ ಬಿಡುಗಡೆಗೊಳ್ಳಲಿದೆ, ತಪ್ಪದೆ ಭಾಗವಹಿಸಿ….
ಪುಸ್ತಕ : ಶೂನ್ಯದೆಡೆಗೆ
ಲೇಖಕರು : ಮಾಕೋನಹಳ್ಳಿ ವಿನಯ್ ಮಾಧವ್
ದಿನಾಂಕ : ೦೯/೧೨/೨೦೨೩
ಸ್ಥಳ : ‘ಸಪ್ನ ಬುಕ್ಸ್’
I’m not an actor, I’m not a star,
And I don’t even have my own car,
But I’m hoping so much you’ll stay,
That you will love me anyway.
‘Michael Learns to Rock’ ಬ್ಯಾಂಡ್ನ ‘Actor’ ಹಾಡಿನ ಈ ಸಾಲುಗಳು ನನಗೆ ಏಕೆ ಇಷ್ಟ ಎನ್ನುವುದು ಬಹಳಷ್ಟು ಸಲ ಯೋಚಿಸಿದ್ದೇನೆ. ಒಂದೊಂದು ಸಲ ಒಂದೊಂದು ಥರ ಅರ್ಥೈಸಿಕೊಂಡಿದ್ದೇನೆ.
ನನ್ನ ಜೀವನದ ಬಹಳಷ್ಟು ಅವತಾರಗಳಲ್ಲಿ (ಅವಾಂತರ), ಸಾಹಿತ್ಯಕ್ಕೆ ಕೈ ಹಾಕಿದ್ದೂ ಒಂದು. ನಾನು ಹೇಗೆ ಆಕಸ್ಮಿಕ ಪತ್ರಕರ್ತನೋ, ಹಾಗೆಯೇ ಆಕಸ್ಮಿಕ ಬರಹಗಾರ. ಕನ್ನಡ ಸಾಹಿತ್ಯ ರಂಗದಲ್ಲಿ ಬಹಳಷ್ಟು ಅದ್ಭುತ ಬರಹಗಾರರಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನಾನು ಬರೆದಿರುವುದು ನಾಲ್ಕು ಪುಸ್ತಕ ಮಾತ್ರ. ಹಾಗೆಯೇ, ನನ್ನ ಪತ್ರಕರ್ತ ಜೀವನದ ಗುರುವಾಗಿದ್ದ ನಚ್ಚಿ ಅವರ ಸ್ಮರಣ ಸಂಚಿಕೆಯ ಸಂಪಾದಕೀಯ ಮಂಡಳಿಯ ಸದಸ್ಯನಾಗಿದ್ದೆ, ಅಷ್ಟೆ.
ಸಾಹಿತ್ಯ ಲೋಕದಲ್ಲಿ ಅಂಬೆಗಾಲಿಡುತ್ತಲೇ ಒಂದು ಹುಚ್ಚುತನ ಪ್ರದರ್ಶಿಸಿದ್ದೇನೆ. ನನ್ನ ನಾಲ್ಕನೇ ಪುಸ್ತಕ ‘ಒಂದಾನೊಂದು ಮಲೆನಾಡಲ್ಲಿ’ ಅನ್ನು ಟಿ ಎನ್ ಸೀತಾರಾಂ ಸರ್ ಬಿಡುಗಡೆ ಮಾಡಿದ ಒಂದು ತಿಂಗಳಲ್ಲೇ, ನನ್ನ ಐದನೇ ಪುಸ್ತಕ ‘ಶೂನ್ಯದೆಡೆಗೆ’ ಬಿಡುಗಡೆಗೆ ಸಿದ್ದವಾಗಿದೆ.

ಹೌದು… ‘ಸಪ್ನ ಬುಕ್ಸ್’ ಇದೇ ಶನಿವಾರ ಅಂದರೆ ಡಿಸೆಂಬರ್ ಒಂಬತ್ತನೇ ತಾರೀಖು ಬಿಡುಗಡೆ ಮಾಡುವ, ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಬರೆದಿರುವ ಅರವತ್ತೆಂಟು ಪುಸ್ತಕಗಳಮಧ್ಯದಲ್ಲಿ, ನನ್ನ ಪುಸ್ತಕಕ್ಊ ಒಂದು ಸ್ಥಾನ ಸಿಕ್ಕಿರುವುದು ನನಗೆ ವೈಯಕ್ತಿಕವಾಗಿ ಹೆಮ್ಮೆ.
ನುರಿತ ಮತ್ತು ಜನಪ್ರಿಯ ಬರಹಗಾರರು ಹೀಗೆ ಒಂದರ ಹಿಂದೊಂದು ಪುಸ್ತಕ ಹೊರ ತಂದರೆ ಪರವಾಗಿಲ್ಲ. ಆದರೆ ಅಂಬೆಗಾಲಿಡುವವರಲ್ಲ. ಹಾಗಾಗಿ, ಮೇಲಿನ ಪದ್ಯದ ಈ ಸಾಲುಗಳು ನನಗೆ ನೆನಪಿಗೆ ಬಂದವು.
ಯಥಾ ಪ್ರಕಾರ, ಈ ಪುಸ್ತಕವನ್ನು ಮೊದಲು ಓದಿ ಪ್ರೋತ್ಸಾಹಿಸಿದರು Jogi Girish Rao Hatwar ಈ ಪುಸ್ತಕಕ್ಕೆ ಚಂದವಾದ ಮುನ್ನುಡಿ ಬರೆದವರು ಗೋಪಾಲಕೃಷ್ಣ ಕುಂಟಿನಿಯವರು. ಇವರಿಬ್ಬರಿಗೂ ನನ್ನ ಹೃತ್ಪೂರ್ವಕ ವಂದನೆಗಳು.
ಹಾಗಂತ, ಈ ಪದ್ಯದಲ್ಲಿ ಮೂರನೇ ಸಾಲೊಂದಿದೆ. ‘But I’m so much you stay’ ಎಂದು. ನನ್ನ ಸಾಹಿತ್ಯ ಜಗತ್ತಿನ ಮುಂದಿನ ಪಯಣದ ಬಗ್ಗೆ ಯೋಚಿಸಿದರೆ, ಇದು ಆಗದೇ ಇರುವ ಸಾಧ್ಯತೆ ಹೆಚ್ಚು. ಪತ್ರಿಕಾರಂಗದ ಕೊನೆಯ ಘಟ್ಟದಲ್ಲಿರುವ ನಾನು, ಮುಂದೆ ಯಾವಾಗ ಮತ್ತು ಏನು ಬರೆಯುತ್ತೇನೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.ಏಕೆಂದರೆ, ರಾಬರ್ಟ್ ಫಾಸ್ಟರ್ ಹೇಳಿದಂತೆ:
‘Wood is lovely dark and deep
But I have promises to keep
Miles to before I sleep
And Miles to before I sleep
ಅದೇನೇ ಇರಲಿ…. ಶನಿವಾರ sapnabooks ಕಾರ್ಯಕ್ರಮದಲ್ಲಿ ನಮ್ಮ ಜೊತೆಗಿರುತ್ತೀರ ತಾನೇ?
- ಮಾಕೋನಹಳ್ಳಿ ವಿನಯ್ ಮಾಧವ್
