‘ಸಿಂಹದ ಹಾದಿ’ ಟೆಲಿಚಿತ್ರ

‘ಸಿಂಹದ ಹಾದಿ’ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ದಾದಾ ಸಹೇಬ್ ಪಾಲ್ಕೆ ಜೊತೆ ಇತರ 15 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅದ್ಭುತ ಭಾವನಾತ್ಮಕ ಟೆಲಿಚಿತ್ರ. ‘ಸಿಂಹದ ಹಾದಿ’ ಯ ಕುರಿತು ಕವಿಗಳಾದ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಿರ್ದೇಶನ : ಜಿಕೆ ಶಶಿ ರಾಜ್ ದೊರೆ
ನಿರ್ಮಾಪಕರು : ವೀರಕಪುತ್ರ ಶ್ರೀನಿವಾಸ್
ತಾರಾಗಣ : ಸಾಯಿ ಜ್ಯೋತಿ ,ಸವಿತಕ್ಕ ,ಪಲ್ಲವಿ ರಾವ್, ಸಂಶಿಕ, ಪ್ರಕೃತಿ
ಛಾಯಾಗ್ರಹಣ: ಕರಣ್
ಸಂಕಲನ : ಗೋವಿಂದ್ ವಿಷ್ಣು
ಸಂಗೀತ : ಸಂದೇಶ್ ಬಾಬಣ್ಣ ಧನಂಜಯ ವರ್ಮ, ಶಿವ ಪ್ರಸಾದ್.

ದೇವ ದೇವರ ರೂಪ
ಹೂವ ಮನದವನೀತ
ಸಾವು ನೋವಲಿ ಕೈಯ ಹಿಡಿದ ದಾದ
ಭಾವದೊಳು ಸಹೃದಯಿಯು
ಗೋವಿನೊಳ ಚಿತ್ತದವ
ಜೀವನದಿ ಹಲವರಿಗೆ ದಾರಿದೀಪ.

ಸರ್ವ ಗುಣ ಸಂಪನ್ನ ಡಾ. ವಿಷ್ಣುವರ್ಧನ್ ರವರು ಕೊಡುಗೈ ದಾನಿಯಾಗಿ ಹಲವು ಜನರ ಬದುಕಿಗೆ ನೆರವಾದ ವಿಭಿನ್ನ, ವಿನೂತನ, ವಿಶೇಷ ಕನ್ನಡ ಟೆಲಿಚಿತ್ರ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ತೆರೆ ಮೇಲೆ ಬರುತ್ತಿದೆ.

ಡಾ. ವಿಷ್ಣು ಸರ್ ರವರ ಕಟ್ಟಾ ಅಭಿಮಾನಿ ಹಾಗು ಆರಾಧಕರಾದ ವೀರಕ ಪುತ್ರ ಶ್ರೀಯುತ ಎಂ ಶ್ರೀನಿವಾಸ್ ರವರ ನಿರ್ಮಾಣದಲ್ಲಿ ಶ್ರೀಯುತ ಶಶಿರಾಜ್ ದೊರೆ ರವರ ನುರಿತ ನಿರ್ದೇಶನದಲ್ಲಿ ಕಂಡು ಕೇಳರಿಯದ ವಿಶೇಷ ಪ್ರಯೋಗದಡಿ ಮೂಡಿ ಬಂದಿದೆ.

ಟೆಲಿ ಚಿತ್ರದ ಇತಿಹಾಸದಲ್ಲೆ ಮೊದಲ ಬಾರಿಗೆ ನೀರಿನೊಳಗಡೆ(ಅಂಡರ್ ವಾಟರ್) ಹಾಗು ಕಣ್ಮನ ಸೆಳೆಯುವ ಸುಮಾರು ಎಂಟು ರಾಷ್ಟ್ರಗಳಲ್ಲಿ ಚಿತ್ರಿಕರಣವಾಗಿದ್ದು ಒಂದೊಂದು ಭಾಗವು “ದೃಶ್ಯ ವೈಭವ”. ಹದಿನೇಳು ಗಾಯಕರ ವಿಭಿನ್ನ ಸುಮಧುರ ಕಂಠದಲ್ಲಿ ಹತ್ತು ಹಾಡುಗಳು ಚಿತ್ರಕ್ಕೆ ಮೆರುಗು ತಂದಿದ್ದು, ಎಲ್ಲವೂ ಕೇಳುಗರ “ಎದೆಯನ್ನು ಮುದ”ಗೊಳಿಸುತ್ತವೆ.

ಕಾಡಿನ ಮನಮೋಹಕ ಹಸಿರು ದೃಶ್ಯಗಳು, ವಿದೇಶಿ ನೆಲದ ಸೌಂದರ್ಯದ ನಡುವೆ ಕಥಾ ಪಾತ್ರಗಳು ವಿಶೇಷವಾಗಿ “ಮಂಗಳಮುಖಿ, ಅನಾಥ ಹುಡುಗಿ, ಕಾಡಿನ ಬಾಲೆಯ ಪಾತ್ರಗಳು ಎಲ್ಲರನ್ನು ಕಾಡುವುದು” ಹಾಗು ವಿಷ್ಣು ಸರ್ ರವರು ಇವರುಗಳ ಜೀವನಕ್ಕೆ ಹೇಗೆ ನೆರವಾದರೂ ಹಾಗು ಅವರಿಗೆ ಜೀವನ ಉತ್ಸಾಹವನ್ನು ತುಂಬಿ ಬದುಕು ಕಟ್ಟಿಕೊಟ್ಟಿದ್ದು ಇತಿಹಾಸವಾದ ಪರಿ ನಿಜಕ್ಕೂ ಉತ್ಸುಕತೆಯನ್ನು ಉಂಟು ಮಾಡುತ್ತವೆ.

ಈಗಾಗಲೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಂಹದ ಹಾದಿ ಆಯ್ಕೆಯಾಗಿದ್ದು ಛಾಯಗ್ರಾಹಕ ನುರಿತ ತಂತ್ರಜ್ಞರ ಹಾಗು ಈಗಾಗಲೇ ಪ್ರಖ್ಯಾತಿ ಹೊಂದಿರುವ ಕಿರುತೆರೆ ಹಾಗು ಹಿರಿ ತೆರೆಯ ಅನುಭವಿ ಕಲಾವಿದರ ಬಳಗ ಹಾಗು ವಿಶೇಷವಾಗಿ ನಿರ್ದೇಶಕರ ಅವಿರತ ಭಗಿರಥ ಪ್ರಯತ್ನದಿಂದ ಚಿತ್ರ ಉತ್ಕೃಷ್ಟವಾಗಿದ್ದು ತೆರೆಗಪ್ಪಳಿಸಿ ಯಶಸ್ಸು ಕಾಣುವುದರಲ್ಲಿ ಸಂಶಯವೇ ಇಲ್ಲ.
ಇಂತಹ ಜಗವೇ ನಿಬ್ಬೆರಗಾಗುವಂತಹ ಟೆಲಿಚಿತ್ರ ಕೊಟ್ಟ ಚಿತ್ರ ತಂಡಕ್ಕೆ ಆತ್ಮೀಯ ಅಭಿನಂದನೆಗಳು.

 

ಹುಟ್ಟು ಸಾವಿನ ನಡುವೆ
ಕೊಟ್ಟು ಹೋದದ್ದೆಷ್ಟು
ಕೊಟ್ಟಿದ್ದೆ ಬೆಟ್ಟದಷ್ಟು ನಮ್ಮ ವಿಷ್ಣು
ಕೆಟ್ಟ ಜನಗಳ ನಡುವೆ
ಕೊಟ್ಟು ನೊಂದಿಹ ಜನಕೆ
ತಟ್ಟನಾದನು ದೈವ ನಮ್ಮ ದಾದ.


  • ಚನ್ನಕೇಶವ ಜಿ ಲಾಳನಕಟ್ಟೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW