ಚರ್ಮ ತುರಿಕೆಗೆ ಚಿಕಿತ್ಸೆ : ಸುಮನಾ ಮಳಲಗದ್ದೆ

ಬಿಸಿಲಿಗೆ ಹೋದ ತಕ್ಷಣ ಮೈಯ ತುಂಬ ತುರಿಕೆ ಬರುತ್ತಿದ್ದರೆ ಏನ್ ಮಾಡಬೇಕು ಎನ್ನುವುದರ ಕುರಿತು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಮನೆ ಮದ್ದು ಹೇಳಿದ್ದಾರೆ, ತಪ್ಪದೆ ನೋಡಿ…

ನನ್ನ ಮಗಳ ಸಹಪಾಠಿಗೆ ಮದುವೆಯ ನಂತರ ಬಿಸಿಲಿನಲ್ಲಿ ಹೋದರೆ ಮಯ್ಯಿನ ತುಂಬ ತುರಿಕೆ ಆಗುತ್ತಿದೆ ಮತ್ತು ಸಣ್ಣ ಸಣ್ಣ ಕೆಂಪಗಿನ ಗುಳ್ಳೆಗಳಾಗುತ್ತದೆ. ಚರ್ಮರೋಗ ತಜ್ಞರ ಪ್ರಕಾರ ತುಂಬ SPF ಇರುವ ಪ್ರಸಾಧನವನ್ನು ಹಚ್ಚಲು ಹೇಳಿದ್ದಾರೆ. ಮದುವೆಗೆ ಮುಂಚೆ ಏನೂ ಆಗುತ್ತಿರಲಿಲ್ಲ. ಮದುವೆ ಆಗಿ ಈಗ ಮೂರು ತಿಂಗಳಾಗಿದೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. ಆಕೆಗೆ ಈಗ ಮೂವತ್ತು ವರ್ಷ ವಯಸ್ಸು. 

ಲಕ್ಷಣಗಳು :

ಬಿಸಿಲಿಗೆ ಹೋದ ತಕ್ಷಣ ಮೈಯ ತುಂಬ ತುರಿಕೆ, ಸಣ್ಣ ಸಣ್ಣ ಕೆಂಪು ಗುಳ್ಳೆಗಳು, ಮದುವೆಯ ನಂತರವೇ ಆರಂಭವಾದುದು – ಇದನ್ನು ಸಾಮಾನ್ಯವಾಗಿ Photosensitive skin reaction (ಸೂರ್ಯಕಿರಣ ಅಲರ್ಜಿ) ಅಥವಾ ಪಿತ್ತ–ರಕ್ತ ದೋಷ ಹೆಚ್ಚಳದ ಲಕ್ಷಣವಾಗಿ ನೋಡಬಹುದು.

ಮದುವೆಗೆ ಮುಂಚೆ ಇಲ್ಲದೆ, ಮದುವೆಯ ನಂತರ ಆರಂಭವಾಗಲು ಕೆಲವು ಆಂತರಿಕ ಕಾರಣಗಳು ಇರಬಹುದು.

ಕಾರಣಗಳು :

  • ಹಾರ್ಮೋನಲ್ ಬದಲಾವಣೆಗಳು
  • ಮದುವೆಯ ನಂತರ ದೇಹದಲ್ಲಿ ಸಹಜವಾಗಿ ಹಾರ್ಮೋನ್ ಸಮತೋಲನ ಬದಲಾಗುತ್ತದೆ.
  • ಪಿತ್ತ ದೋಷ ಹೆಚ್ಚಳ
  • ಹೊಸ ಆಹಾರ ಪದ್ಧತಿ, ಮಸಾಲೆ, ಎಣ್ಣೆ, ತಡವಾಗಿ ಊಟ, ಬಿಸಿಲಿನಲ್ಲಿ ಓಡಾಟ.
  • ರಕ್ತದ ಉಷ್ಣತೆ ಹೆಚ್ಚಾಗುವುದು
  • ಇದರಿಂದ ಚರ್ಮ ಅತಿಸಂವೇದನಶೀಲವಾಗುತ್ತದೆ.
  • ಹೊಸ ಸೌಂದರ್ಯ ಪ್ರಸಾಧನಗಳು / ಸುಗಂಧ ದ್ರವ್ಯಗಳು
  • ಮದುವೆಯ ನಂತರ ಬಳಸತೊಡಗಿದ ಕ್ರೀಮ್, ಸಾಬೂನು, ಪರ್ಫ್ಯೂಮ್.
  • ಸನ್‌ಸ್ಕ್ರೀನ್‌ಗೆ ತಾತ್ಕಾಲಿಕ ಪರಿಹಾರ ಮಾತ್ರ
  • SPF ಕ್ರೀಮ್ ಹೊರಗಿನಿಂದ ರಕ್ಷಣೆ ನೀಡುತ್ತದೆ, ಆದರೆ ಒಳಗಿನ ಕಾರಣ ಸರಿಪಡಿಸುವುದಿಲ್ಲ.
  • ಪಾರಂಪರಿಕ / ಆಯುರ್ವೇದ ದೃಷ್ಟಿಯಿಂದ ಪರಿಹಾರ
  • ಮೊದಲನೇಯ ದಾಗಿ ಆಹಾರ ನಿಯಂತ್ರಣ (ಅತಿ ಮುಖ್ಯ)
  • ತಪ್ಪಿಸಬೇಕಾದ ಅಹಾರ :  ಮೆಣಸು, ಖಾರದ ತಿಂಡಿ, ಫಾಸ್ಟ್ ಫುಡ್,  ಟೊಮೇಟೊ, ಬೆಣ್ಣೆ, ಪನೀರ್, ಫ್ರೈಡ್ ಆಹಾರ, ಕಾಫಿ, ಟೀ, ಶೀತಪಾನೀಯ.
  • ತೆಗೆದುಕೊಳ್ಳಬೇಕಾದವು ಹಿತವಾದ ಅಡುಗೆ, ಸಾದಾ ಅನ್ನ, ಬೂದು ಗುಂಬಳಕಾಯಿ, ಸೌತೆಕಾಯಿ, ದೋಸೆ ಸೊಪ್ಪು, ತುಪ್ಪ, ಹಾಲು, ಮೊಸರು, ಸಾಕಷ್ಟು ನೀರು (ಬಿಸಿಲಿನಲ್ಲಿ ಹೊರಗೆ ಹೋದ ಬಳಿಕ ವಿಶೇಷವಾಗಿ) ಒಳಗೆ ತಂಪು ನೀಡುವ ಮನೆಮದ್ದು.
  • ಕೊತ್ತಂಬರಿ ಬೀಜ – 1 ಚಮಚ
  • ಜೀರಿಗೆ – ½ ಚಮಚ
  • ರಾತ್ರಿ ನೀರಲ್ಲಿ ನೆನೆಸಿ, ಬೆಳಿಗ್ಗೆ ಕುದಿಸಿ ತಣ್ಣಗಾಗಿಸಿ ಕುಡಿಯಿರಿ 7–10 ದಿನ
  • ಚಂದನ + ಗುಲಾಬಿ ನೀರು
  • ಬಿಸಿಲಿಗೆ ಹೋಗುವ ಮೊದಲು ಹಚ್ಚಬಹುದು

ಅಲೋವೆರಾ ಜೆಲ್ ಮತ್ತು ತುಳಸಿ ಸೇರಿಸಿ ಹಚ್ಚಿ :

ಸ್ನಾನ ವಿಧಾನ :

ತುಂಬ ಬಿಸಿ ನೀರು ಬೇಡ. ನೀರಿನಲ್ಲಿ ಕಹಿ ಬೇವಿನ ಎಲೆಗಳನ್ನು ಹಾಕಿ ಕಷಾಯ ಮಾಡಿ ಸ್ನಾನ ಮಾಡಿ.

ಗಮನಿಸಬೇಕಾದ ಅಂಶಗಳು :

  • ಗುಳ್ಳೆಗಳು ನೀರು ತುಂಬಿಕೊಂಡಂತೆ ಆಗುತ್ತಿದೆಯೇ?
  • ಬಿಸಿಲಿಲ್ಲದಿದ್ದರೂ ತುರಿಕೆ ಇದೆಯೇ?
  • ಮಾಸಿಕ ಧರ್ಮದಲ್ಲಿ ಅಸಮತೋಲನ ಇದೆಯೇ?
  • ಇವುಗಳ ಮೇಲೆ ಪರಿಹಾರ ಬದಲಾಗುತ್ತದೆ.

    ಸಾರಾಂಶ :

    SPF ಕ್ರೀಮ್ ತಾತ್ಕಾಲಿಕ ರಕ್ಷಣೆ ಕೊಡಬಹುದು. ಆದರೆ ಮೂಲ ಕಾರಣ ಪಿತ್ತ–ರಕ್ತ ದೋಷ. ಒಳಗಿನ ಶುದ್ಧೀಕರಣ + ಆಹಾರ ನಿಯಂತ್ರಣ ಮಾಡಿದರೆ ಶಾಶ್ವತ ಪರಿಹಾರ ಸಾಧ್ಯ. ಕಾಯಿಲೆ ಆಳವಾಗಿದ್ದರೆ ಅಥವಾ ದಿನೇ ದಿನೇ ಹೆಚ್ಚಾಗುತ್ತಿದ್ದರೆ, ನನ್ನನ್ನು ಸಂಪರ್ಕಿಸಬಹುದು.


  •  ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW