ಹಾವು ಹಿಡಿಯುವ ಸರಳ ಉಪಕರಣ

ಪ್ರತಿ ಮನೆಯಲ್ಲೂ ಇರಬೇಕಾದದ್ದು ಹಾವು ಹಿಡಿಯುವ ಸರಳ ಉಪಕರಣ ಸ್ನೇಕ್ ಕ್ಯಾಚರ್, ಸ್ನೇಕ್ ಕ್ಯಾಚರ್ ಸ್ಟಿಕ್, ಟಾಂಗ್ ಇತ್ಯಾದಿ. ಈ ಉಪಕರಣ ಕುರಿತು ಅರುಣ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸ್ನೇಕ್ ಕ್ಯಾಚರ್, ಸ್ನೇಕ್ ಕ್ಯಾಚರ್ ಸ್ಟಿಕ್, ಟಾಂಗ್ ಇತ್ಯಾದಿ ಹೆಸರಲ್ಲಿ ಕರೆಯುವ ಈ ಸರಳ ಉಪಕರಣ ಅನಪೇಕ್ಷಿತ ಅತಿಥಿಗಳಾಗಿ ಮನೆಯ ಒಳಗೆ ಬರುವ ಅಥವ ಮನೆ ಸುತ್ತಲ ಕೈ ತೋಟಗಳಲ್ಲಿ ತನ್ನ ಅಹಾರಕ್ಕಾಗಿ ಹೊಂಚಿ ಕುಳಿತುಕೊಳ್ಳುವ ಹಾವುಗಳನ್ನು ನಿವಾರಿಸಲು ಅತ್ಯಂತ ವೈಜ್ಞಾನಿಕವಾದ ಸರಳವಾದ ಮತ್ತು ಸುರಕ್ಷಿತ ಉಪಕರಣ.

ಹೆಚ್ಚಿನ ಸಂದರ್ಭದಲ್ಲಿ ಹಾವುಗಳು ಕಂಡಾಗ ಅದನ್ನು ಹಿಡಿದೊಯ್ದು ಕಾಡಿಗೆ ಬಿಡುವ ಹಾವು ಸಂರಕ್ಷರನ್ನು ಸಂಪರ್ಕಿಸಿದರೆ ಅವರು ತಕ್ಷಣ ಬರಲಾಗದಂತ ಸಂದಭ೯ಗಳಲ್ಲಿ ಹಾವಿನ ಜೊತೆ ಆತಂಕದಿಂದ ದಿನ ಕಳೆಯಬೇಕಾಗುತ್ತದೆ, ಇಂಥಹ ಸಂದರ್ಭ ರಾತ್ರಿ ಆದರೆ ದೇವರೇ ಗತಿ.

ಕೆಲವೊಮ್ಮೆ ವಿಷಪೂರಿತ ಹಾವು, ಕೆಲವೊಮ್ಮೆ ವಿಷ ಇಲ್ಲದ ಹಾವು ಕೂಡ ಇರುತ್ತದೆ, ಮೊದಲೆಲ್ಲ ಹಾವು ಹಿಡಿದು ಹಾವಾಡಿಸಿ ಜೀವನ ಮಾಡುತ್ತಿದ್ದ ಹಾವಾಡಿಗರು ಈ ವೃತ್ತಿಯಿಂದ ಬಿಡುಗಡೆ ಪಡೆಯುತ್ತಿದ್ದಾರೆ.

ಸ್ಥಳಿಯ ಆಪತ್ಕಾಲದ ಬಾಂಧವ್ಯರಾಗಿ ಹಾವು ಹಿಡಿದು ದೂರ ಬಿಡುವವರೂ ಈಗಿಲ್ಲ, ಹಾವು ಹೊಡೆದರೆ ನಾಗರ ಶಾಂತಿಗೆ ಕೆಲ ಸಾವಿರ ಖರ್ಚಾಗುತ್ತೆ ಅಂತೆಲ್ಲ ಭಯಾ ಕೂಡ.
ಹಾವು ಸಂರಕ್ಷಣೆ ಮಾಡಲು ದೂರದಿಂದ ಬರುವವರಿಗೆ ಕನಿಷ್ಟ ಎರಡರಿಂದ ಮೂರು ಸಾವಿರ ಹಣ ಕೊಡಲೇ ಬೇಕು ಆದ್ದರಿಂದ ಆರು ಅಡಿ ದೂರದಿಂದ ಸುರಕ್ಷಿತವಾಗಿ ಈ ಕ್ಲಿಪ್ ನಂತ ಉಪಕರಣದಿಂದ ಹಾವು ಹಿಡಿದು ಮನೆಯಿಂದ ದೂರ ಬಿಟ್ಟು ಬರಬಹುದಾದ ಈ ಉಪಕರಣ ಪ್ರತಿ ಒಬ್ಬರ ಮನೇನಲ್ಲಿ ಇಟ್ಟುಕೊಳ್ಳುವುದು ಅವಶ್ಯಕ. ಇದನ್ನು ಖರೀದಿಸಲು ಯೋಚಿಸುವುದು ನಂತರ ಮರೆಯುವುದು ಕೆಲವಷ೯ದಿಂದ ಆಗಿತ್ತು.

ಹೊಸಬಾಳೆ ಮಂಜುನಾಥರ ಸಲಹೆ ಮೇರೆಗೆ ಎರೆಡು ತಿಂಗಳ ಹಿಂದೆ ಪಾಲ್ಕನ್ ಕಂಪನಿಗೆ ಆರ್ಡರ್ ಮಾಡಿ ರೂ 1950 ಪಾವತಿ ಮಾಡಿದ್ದೆ ಆದರೆ ಸ್ಟಾಕ್ ಇಲ್ಲದ್ದರಿಂದ ವಿಳಂಬ ಆಗಿತ್ತು ನಿನ್ನೆ ಕೋರಿಯರ್ ನಲ್ಲಿ ಬಂದಿದೆ.


  • ಅರುಣ ಪ್ರಸಾದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading