ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕವಯಿತ್ರಿ

ಪ್ರಭಾ ಬೋರಗಾಂವಕರರವರು ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆಯಾಗಿ, ಬೆಳಗಾವಿ ಜಿಲ್ಲಾ ಕನ್ನಡ ಲೇಖಕಿಯರ ಸಂಘದ ಅಥಣಿ ತಾಲೂಕು ಘಟಕದ ಅಧ್ಯಕ್ಷೆಯಾಗಿ, ಅಥಣಿಯ ಸಾಂಸ್ಕೃತಿಕ ಸಾಹಿತ್ಯ ಸಂಘದ ಸದಸ್ಯೆಯಾಗಿ, ಸಾಹಿತ್ಯ ಸೇವೆ ಮಾಡುತ್ತಿದ್ದಾರೆ ಅವರ ಸಾಹಿತ್ಯ ಸೇವೆಯ ಕುರಿತು ಲೇಖಕರಾದ ನಾರಾಯಣಸ್ವಾಮಿ .ವಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಶತಮಾನಗಳಿಂದಲೂ ಹೆಣ್ಣು ಶೋಷಿತಳಾಗಿಯೇ ನಲುಗಿ ಹೋದಳು. ಈ ಪುರುಷ ಪ್ರಧಾನವಾದ ಸಮಾಜದಲ್ಲಿ ಅವಳು ಹೂವಾಗಿ ಬಾಡಿದವಳು. ಹೆಣ್ಣು ಪುರುಷ ಪ್ರಧಾನ ಸಮಾಜದಲ್ಲಿ ಭೂಮಿಗೆ ಬಿದ್ದ ಬೀಜವಾಗಿ ಮೊಳಕೆಯೊಡೆದು ಸಸಿಯಾಗಿ ಮರವಾಗಿ ಬೆಳೆದು ಇನ್ನೊಬ್ಬರಿಗೆ ನೆರಳಿನಂತೆ ತಂಪನು ನೀಡಲು ಅಂಬೇಡ್ಕರ್ ರವರು ಬರೆದ ಸಂವಿಧಾನ ಕಾರಣವಾಯಿತು, ಸಂವಿಧಾನದಲ್ಲಿ ಮಹಿಳೆಯರಿಗಾಗಿ ಸಿಕ್ಕಂತಹ ವಿಶೇಷವಾದ ಹಕ್ಕುಗಳನ್ನು ಸದುಪಯೋಗ ಪಡೆದುಕೊಂಡ ಹೆಣ್ಣುಮಕ್ಕಳು ಇಂದು ವಿದ್ಯಾವಂತರಾಗಿ ಸಾಹಿತಿಗಳಾಗಿ ರಾಜಕಾರಣಿಗಳಾಗಿ ಪುರುಷನಿಗೆ ಸಮಾನವಾಗಿ ನಿಂತಳು.

ಕುಟುಂಬದ ತುಂಬಾ ಸುಶಿಕ್ಷಿತರು ಸಾಹಿತ್ಯ ಆರಾಧಕರು ಇದ್ದರೆ ಅದು ಕುಟುಂಬದ ಸದಸ್ಯರ ಮೇಲೆ ಪ್ರಭಾವ ಬೀರುವುದು ಸಹಜ… ಇಂತಹ ಪ್ರಭಾವದಿಂದಲೇ ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿ ಕವಯತ್ರಿಯಾಗಿ ಅನುವಾದಕಿಯಾಗಿ ಗುರುತಿಸಿಕೊಳ್ಳುತ್ತಿರುವ ಪ್ರತಿಭೆಯೇ ಶ್ರೀಮತಿ ಪ್ರಭಾ ಬೋರಗಾಂವಕರ.

ಶ್ರೀಮತಿ ಪ್ರಭಾ ಬೋರಗಾಂವಕರರು ರವರು ಬಾಳಕೃಷ್ಣ ರಾಧಾಬಾಯಿರವರ ಮಗಳಾಗಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ೨೮ ಮೇ 1968 ರಲ್ಲಿ ಜನಿಸಿದರು. ಸಂಕೇಶ್ವರದ ಸಕಾ೯ರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿ ನಂತರ ಅಕ್ಕಮಹಾದೇವಿ ಕನ್ಯಾ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು, ಹೆಬ್ಬಾಳದ ಡಿ ಎಲ್ ಖೋತ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿ ನಂತರ ಇಂಟನ೯ಶಿಪ್ ಕೋಸ್೯, ಸಂಕೇಶ್ವರದ ಶ್ರೀ ದುರ ದುಂಡೀಶ್ವರ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಿಜ್ಞಾನ ಮಹಾ ವಿಶ್ವವಿದ್ಯಾನಿಲಯದಲ್ಲಿ 1990ರಲ್ಲಿ ಬಿಎ (ಕನ್ನಡ ಮೇಜರ್) ಪದವಿಯನ್ನು ಪಡೆದು.ಉನ್ನತ ಶಿಕ್ಷಣದತ್ತ ಮನಸ್ಸು ಮಾಡಿದ ಶ್ರೀಮತಿ ಪ್ರಭಾ ಬೋರಗಾಂವಕರರವರು ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದಿಂದ 1993ರಲ್ಲಿ ಎಂ ಎ ಸ್ನಾತಕೋತ್ತರ ಪದವಿಯನ್ನು ಪಡೆದು ನಂತರದಲ್ಲಿ ಡಾ. ಶಾಲಿನಿ ರಘುನಾಥ್ ಭಟ್ ಅವರ ಮಾರ್ಗದರ್ಶನದಲ್ಲಿ ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ ನಿಡಸೋಸಿ_ ಒಂದು ಅಧ್ಯಯನಯೆಂಬ ವಿಷಯದಲ್ಲಿ 1994ರಲ್ಲಿ ಎಂ ಫಿಲ್ ಪದವಿಯನ್ನು ಗಳಿಸಿದರು.

 

ಉನ್ನತ ಶಿಕ್ಷಣವನ್ನು ಮುಗಿದ ಶ್ರೀಮತಿ ಪ್ರಭಾ ಬೋರಗಾಂವಕರರವರು ವೃತಿ ಜೀವನದ ಕಡೆಗೆ ಪಯಣವನ್ನು ಆರಂಭಿಸಿ ಹೆಬ್ಬಾಳದ ಶ್ರೀ ಎಲ್ ಕೆ ಖೋತ್ ಮಹಾವಿದ್ಯಾಲಯದಲ್ಲಿ ಎರಡು ವರ್ಷ ಮತ್ತು ಯಾದಗೂಡದ ರಾಜಾ ಲಖಮಗೌಡ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ 1996 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇವರು ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಆಯ್ಕೆಯಾದರು. ರಾಯಭಾಗದ ಕೋಳಿಗುಡ್ಡ ಗ್ರಾಮದ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸೇವೆ ಆರಂಭಿಸಿದರು. 2009ರಲ್ಲಿ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆ ಹೊಂದಿ ಸೇವೆಯನ್ನು ಮುಂದುವರಿಸಿದ್ದಾರೆ.

ಶ್ರೀಮತಿ ಪ್ರಭಾ ಬೋರಗಾಂವಕರ ರವರ ಪತಿ ಡಾ. ಜೆ ಸಿ ದೊಡಮನಿಯವರು ಅನುವಾದ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರನ್ನು ಗಳಿಸಿದವರು. ಹಲವಾರು ಮರಾಠಿ ಬೃಹತ್ ಗ್ರಂಥಗಳನ್ನು ಕನ್ನಡ ಅನುವಾದಿಸಿ ಖ್ಯಾತ ಅನುವಾದಕರೆಂದೆ ಗುರುತಿಸಿಕೊಂಡವರು. ಇವರ ಸಾಹಿತ್ಯದ ಒಡನಾಡಿಯಾದ ಶ್ರೀಮತಿ ಪ್ರಭಾ ಬೋರಗಾಂವಕರರವರು ಸಾಹಿತ್ಯವನ್ನು ಪ್ರವೃತ್ತಿಯಾಗಿ ಬೆಳಸಿಕೊಂಡು ತಮ್ಮನ್ನು ಕೂಡ ಅನುವಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡರು ಮತ್ತು ಕನ್ನಡ ಬರವಣಿಗೆಯಲ್ಲಿ ನಿರತರಾಗಿ ಮೊದಲಿಗೆ ಎಮ್ ಫಿಲ್ ಪದವಿಗಾಗಿ ಬರೆದಂತಹ ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ ನಿಡಸೋಸಿ_ ಒಂದು ಅಧ್ಯಯನ.ಎಂಬ ಕೃತಿಯನ್ನು ಪ್ರಕಟಿಸಿದರು. ನಂತರದಲ್ಲಿ ನಿನ್ನೊಲವೊಂದೆ ಸಾಕೆಂದು (ಕವನ ಸಂಕಲನ) ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಯಿತ್ರಿಯಾಗಿ ಗುರುತಿಸಿಕೊಂಡರು. ನಂತರ ಅನುವಾದ ಕ್ಷೇತ್ರದತ್ತ ಮುಖ ಮಾಡಿದ ಇವರು ಕರ್ಮವೀರ ಬಾವೂರಾವ ಪಾಟೀಲ್ ಎಂಬ ಮರಾಠಿ ಭಾಷೆಯಲ್ಲಿದ್ದ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದರು. ಈ ಕೃತಿಯ ಮರಾಠಿ ಮೂಲದ ಲೇಖಕರು ಪ್ರೊಫೆಸರ್ ಡಿ. ಬಿ ಪಾಟೀಲ್ ರವರು. ನಂತರ ರಮಾಬಾಯಿ ಅಂಬೇಡ್ಕರ್ ಎಂಬ ಮತ್ತೊಂದು ಮರಾಠಿ ಭಾಷೆಯ ಕೃತಿಯನ್ನು ಅನುವಾದ ಮಾಡಿದರು. ಈ ಮರಾಠಿ ಮೂಲದ ಕೃತಿಯ ಲೇಖಕರು ಬಾಳಸಾಹೇಬ ಕಾಂಬ್ಳೆ. ಮತ್ತು ರಾಣಿ ಅಹಿಲ್ಯಬಾಯಿ ಹೋಳಕರ ಎಂಬ ಮರಾಠಿ ಭಾಷೆಯ ಕೃತಿಯನ್ನು ಕನ್ನಡ ಭಾಷೆಗೆ ಅನುವಾದ ಮಾಡಿ ಲೋಕಾರ್ಪಣೆ ಮಾಡಿದರು. ಈ ಕೃತಿಯ ಮರಾಠಿ ಮೂಲದ ಲೇಖಕರು ವಿಠಲ್ ರಾಯ ಭಟ್.

ಶ್ರೀಮತಿ ಪ್ರಭಾ ಬೋರಗಾಂವಕರರವರು ಹಲವಾರು ಸಾಹಿತ್ಯದ ಗುಂಪುಗಳಲ್ಲಿ ನಿವಾ೯ಹಕಿಯಾಗಿಯೂ ಕೆಲಸ ಮಾಡುತ್ತಾ ಹಲವಾರು ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ಮರಾಠಿ ಭಾಷೆ ಪ್ರಭುತ್ವವಿರುವ ಪ್ರದೇಶದಲ್ಲಿ ಕನ್ನಡದ ಭಾಷೆಯನ್ನು ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಮತ್ತು ಕಲಾಪ್ರತಿಭೆಯನ್ನು ಗಮನಿಸಿ ಹಲವಾರು ಸಂಘಸಂಸ್ಥೆಗಳು ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಿವೆ. 2012ರಲ್ಲಿ ಡಾ. ಸ. ಜ ನಾಗಲೋಟಿ ಮಠ ಪ್ರತಿಷ್ಠಾನದ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ. 2014ರಲ್ಲಿ ಡಾ. ಸ. ಜ ನಾಗಲೋಟಿ ಮಠ ಪ್ರತಿಷ್ಠಾನದ ರಾಜ್ಯಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ.

2017 ರಲ್ಲಿ ಕರ್ಮವೀರ ಭಾವೂ ರಾವ ಪಾಟೀಲ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಶಾಂತಿಲಾಲ್ ದತ್ತಿ ನಿಧಿ ಪ್ರಶಸ್ತಿ. 2017ರಲ್ಲಿ ಕರ್ಮವೀರ ಭಾವೂರಾವ ಪಾಟೀಲ ಕೃತಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರತಿಷ್ಠಾನದಿಂದ ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿ ನಿಧಿ ಪ್ರಶಸ್ತಿ. 2017 ರಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕದಿಂದ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ .ಕೋಲಾರದ ಸಾಹಿತ್ಯ ಶಿಕ್ಷಕರ ಪರಿಷತ್ತು ಇವರಿಂದ ಮಹಿಳಾ ಚೈತನ್ಯ ರತ್ನ ಪ್ರಶಸ್ತಿ ೨೦೨೩. ಸಿದ್ಧಗಂಗಾ ಗಂಗಾ ಸೇವಾ ರತ್ನ ಪ್ರಶಸ್ತಿ ೨೦೨೩. ೨೦೨೩ ರಲ್ಲಿ ಗುರುಕುಲ ವಿದ್ಯಾ ರತ್ನ ಪ್ರಶಸ್ತಿ ಪಡೆದಿದ್ದಾರೆ.

ಶ್ರೀಮತಿ ಪ್ರಭಾ ಬೋರಗಾಂವಕರರವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹಲವಾರು ಸಂಘಸಂಸ್ಥೆಗಳಲ್ಲಿ ಕಾರ್ಯವನ್ನು ನಿವ೯ಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆಯಾಗಿ, ಬೆಳಗಾವಿ ಜಿಲ್ಲಾ ಕನ್ನಡ ಲೇಖಕಿಯರ ಸಂಘದ ಅಥಣಿ ತಾಲೂಕು ಘಟಕದ ಅಧ್ಯಕ್ಷೆಯಾಗಿ, ಅಥಣಿಯ ಸಾಂಸ್ಕೃತಿಕ ಸಾಹಿತ್ಯ ಸಂಘದ ಸದಸ್ಯೆಯಾಗಿ, ಅಖಿಲ ಭಾರತ ವೀರಶೈವ ಮಹಾಸಭಾ ಅಥಣಿ ತಾಲೂಕು ಘಟಕದ ಸದಸ್ಯೆಯಾಗಿ, ಸಾವಿತ್ರಿ ಬಾಯಿ ಪುಲೆ ಮಹಿಳಾ ಜಾಗೃತಿ ವೇದಿಕೆ ಅಥಣಿಯ ಅಧ್ಯಕ್ಷೆಯಾಗಿ, ಸಂಘಟನೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರ ಬರಹಗಳು ನಾಡಿನ ಹಲವಾರು ಖ್ಯಾತ ಪತ್ರಿಕೆ ಮ್ಯಾಗ್ಝಿನ್ ಗಳಲ್ಲಿ ಪ್ರಕಟವಾಗುತ್ತಿದ್ದು ಮತ್ತೊಂದು ಕೃತಿಯನ್ನು ಹೊರತರುವ ಪ್ರಯತ್ನದಲ್ಲಿ ಸಾಗುತ್ತಿದ್ದಾರೆ.

ಇವರ ಸಾಹಿತ್ಯ ಕೃಷಿಯು ಹೀಗೆಯೇ ಸಾಗಲಿ, ಸಾಂಸ್ಕೃತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯಲೋಕಕ್ಕೆ ಬರಹದ ಮೂಲಕ ಇನ್ನಷ್ಟು ಸೇವೆಯನ್ನು ಸಲ್ಲಿಸಲಿ, ಮುಂಬರುವ ಸಾಹಿತ್ಯವು ನೊಂದ ಮಹಿಳೆಯರ, ಧಮನಿತರ ತಲ್ಲಣಗಳ ಬರಹಗಳನು ಬರೆಯಲಿ, ಇವರು ಲೇಖಕಿಯಾಗಿ ಕರುನಾಡಿನಲ್ಲಿ ಗುರುತಿಸಿಕೊಂಡು ಇನ್ನಷ್ಟು ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಹಾರೈಸುತ್ತೇನೆ.


  • ನಾರಾಯಣಸ್ವಾಮಿ .ವಿ – ವಕೀಲರು ಮತ್ತು ಲೇಖಕರು, ಮಾಸ್ತಿ ಕೋಲಾರ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW