ದಾರಿ ತಪ್ಪಿದಾಗ ಸರಿ ದಾರಿ ತೋರುವ ಸ್ನೇಹಿತರಿರಬೇಕು ಜೀವನಕ್ಕೊಂದು ಪಾಠವನ್ನು ಯಶು ಅವರ ಕತೆಯಲ್ಲಿ ಕಾಣಬಹುದು ತಪ್ಪದೆ ಓದಿ…
ಸ್ನೇಹ ಮತ್ತು ಪ್ರೀತಿ ಆತ್ಮೀಯ ಗೆಳತಿಯರು. ಬಾಲ್ಯದಿಂದಲೂ ಇದ್ದಂತ ಗೆಳತನ ದೊಡ್ಡವರಾದರೂ ಮುಂದುವರೆದಿತ್ತು. ಪ್ರೀತಿ, ಸಲುಗೆ, ನಂಬಿಕೆ ಎಲ್ಲಾ ತರಹದಲ್ಲೂ ಅವರ ಸ್ನೇಹ ಗಟ್ಟಿಯಾದ ಬಂಧವಾಗಿತ್ತು. ಸ್ನೇಹ ಮಧ್ಯಮ ವರ್ಗದ ಕುಟುಂಬದವಳು. ಪ್ರೀತಿ ಶ್ರೀಮಂತ ಕುಟುಂಬದವಳಾದರು ಸ್ವಲ್ಪವೂ ಅಹಂಕಾರವಿರಲಿಲ್ಲ. ಸ್ನೇಹಳನ್ನು ಬಹಳ ಅಕ್ಕರೆಯಿಂದ ತಂಗಿಯೆಂಬ ಭಾವನೆಯಿಂದ ನೋಡಿಕೊಳ್ಳುತ್ತಿದ್ದಳು.
ಸ್ನೇಹಳ ಅಮ್ಮ ಟೈಲರಿಂಗ್ ಕಾಯಕ ಮಾಡುತ್ತಿದ್ದರೆ, ಅಪ್ಪ ಸಣ್ಣದೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಸ್ನೇಹಳ ಅಪ್ಪ ಅಮ್ಮ ಕಷ್ಟಪಟ್ಟು ಕಾಸಿಗೆ ಕಾಸು ಕೂಡಿಸಿಕೊಂಡು ಓದಿಸುತ್ತಿದ್ದರು.
ಸ್ನೇಹ ಮತ್ತು ಪ್ರೀತಿ ಕಾಲೇಜ್ಗೆ ಸೇರುವಾಗ ಅವರುಗಳ ಆಸೆಪಟ್ಟಂತೆ ಓದಲು ಬೇರೆ ಬೇರೆ ಕಾಲೇಜುಗಳ ಅಯ್ಕೆ ಮಾಡಿಕೊಂಡರು.ಅವರು ದಿನನಿತ್ಯವೂ ಫೋನಿನಲ್ಲಿ ಮಾತಾಡುವುದೆಯಾಗಲಿ, ಭೇಟಿಯಾಗುವುದಾಗಲಿ ಮರೆಯುತಿರಲಿಲ್ಲ. ಹೀಗಿರುವಾಗ ಸ್ನೇಹಳಿಗೆ ವಿವೇಕ್ ಎಂಬುವರ ಜೊತೆ ಸ್ನೇಹ ಬೆಳೆಯಿತು. ಕಾಲಕ್ರಮೇಣ ಪ್ರೀತಿಯಾಗಿ ಬದಲಾಯಿತು.ಇದ್ಯಾವುದನ್ನೂ ಸ್ನೇಹ ಪ್ರೀತಿಯ ಹತ್ತಿರ ಹೇಳಿರಲಿಲ್ಲ.
ಸ್ನೇಹಳನ್ನು ವಿವೇಕ್ ಮನೆ ಬಿಟ್ಟು ಬಾ ಎಂದು ಒತ್ತಾಯ ಮಾಡುತ್ತಿದ್ದನು. ಅವನ ಒತ್ತಾಯಕ್ಕೆ ಮಣಿದ ಸ್ನೇಹ ಮನೆಯಲ್ಲಿ ಕಾಲೇಜ್ ಗೆ ಹೋಗುತ್ತಿರುವನೆಂದು ಹೇಳಿ ಮನೆ ಬಿಟ್ಟು ಬಂದಳು.
ಸ್ನೇಹ ಆತುರದಲ್ಲಿ ಬರುತ್ತಿರುವಾಗ ಅಪಘಾತವಾಯಿತು. ಅಲ್ಲಿ ಇದ್ದಂತವರು ಹಾಸ್ಪಿಟಲ್ ಗೆ ಸ್ನೇಹಳನ್ನು ಸೇರಿಸಿದರು.ಹಾಸ್ಪಿಟಲ್ ಗೆ ಕಟ್ಟುವಷ್ಟು ಹಣವಿಲ್ಲದೆ ವಿವೇಕ್ ಗೆ ತಿಳಿಸಿದಳು. ದುಡ್ಡು ಕಟ್ಟಿ ನನ್ನನ್ನ ಕರೆದುಕೊಂಡು ಹೋಗು ಬಾ ಎಂದು ಕರೆದಳು.
ಸ್ನೇಹ ಪದೆಪದೆ ಫೋನ್ ಮಾಡುತ್ತಿದ್ದರಿಂದ ವಿವೇಕ್ ಗೆ ದುಡ್ಡು ಕಟ್ಟಲು ಮನಸಿಲ್ಲದೆ ಸ್ನೇಹಳ ಕಾಲ್ ಸ್ವೀಕರಿಸಲಿಲ್ಲ. ಕೊನೆಗೆ ಫೋನ್ ನ್ನು ಸ್ವಿಚ್ ಆಫ್ ಮಾಡಿದನು. ಹಾಸ್ಪಿಟಲ್ ನವರು ದುಡ್ಡು ಕಟ್ಟಿ ಎಂದು ಪದೆ ಪದೆ ಹೇಳುತ್ತಿದ್ದರಿಂದ ಪ್ರೀತಿಗೆ ಫೋನ್ ಮಾಡಿ ಹೇಳಿದಳು.
ಸ್ನೇಹಳ ಕರೆಗೆ ಓಗೊಟ್ಟು ಹಾಸ್ಪಿಟಲ್ ಗೆ ಬಂದ ಪ್ರೀತಿ ಇದೆಲ್ಲಾ ಹೇಗಾಯಿತು ಅಪ್ಪ ಅಮ್ಮನಿಗೆ ಗೊತ್ತಾ ಎಂದು ಕೇಳಿದಳು.ಸ್ನೇಹ ನಡೆದ ಸಂಗತಿಗಳನ್ನೆಲ್ಲಾ ಹೇಳಿದಳು. ಎಲ್ಲ ವಿಷಯಗಳನ್ನು ಹೇಳುತ್ತಿದ್ದೆ ಈ ವಿಚಾರ ಏಕೆ ಮುಚ್ಚಿಟ್ಟೆ ಎಂದು ಸ್ನೇಹಳಿಗೆ ಬೈದಳು. ನಂತರ ಸ್ನೇಹಳ ತಂದೆ ತಾಯಿಗೆ ವಿಷಯ ತಿಳಿಸಿದಳು.
ವಿಷಯ ತಿಳಿದ ಸ್ನೇಹಳ ತಂದೆ ತಾಯಿ ಗಾಬರಿಯಿಂದ ಹಾಸ್ಪಿಟಲ್ ಗೆ ಬಂದು ಮಗಳ ಆ ಸ್ಥಿತಿಯನ್ನು ಕಂಡು ಇಬ್ಬರ ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದನ್ನ ಕಂಡು ಸ್ನೇಹಳಿಗೆ ದುಃಖವಾಗಿ ಅಳುತ್ತಿದ್ದಳು.
ಪ್ರೀತಿ ಸ್ನೇಹಳ ಅಪ್ಪ ಅಮ್ಮನಿಗೆ ನಾನು ಡಿಸ್ ಚಾರ್ಜ್ ಮಾಡಿಸಿಕೊಂಡು ಬರುವೆ ಎಂದು ಹೇಳಿ ಅಪ್ಪ ಅಮ್ಮನನ್ನು ಮನೆಗೆ ಕಳಿಸಿದಳು. ಅವರು ಹೋದಮೇಲೆ ಪ್ರೀತಿ ಸ್ನೇಹಳಿಗೆ ಬುದ್ದಿಮಾತು ಹೇಳಿದಳು.ನಾನು ಫೋನ್ ಮಾಡಿದ ತಕ್ಷಣ ಓಡಿ ಬಂದ ಅಪ್ಪ ಅಮ್ಮನ ಪ್ರೀತಿ ಹೆಚ್ಚಾ ಅಥವಾ ನೀನು ಫೋನ್ ಮಾಡಿದ ಮೇಲೆ ಸ್ವಿಚ್ ಆಫ್ ಮಾಡಿಕೊಂಡು ಬರದವನ ಮೇಲೆ ಪ್ರೀತಿ ಹೆಚ್ಚಾ ಯೋಚಿಸು ಎಂದು ಬುದ್ದಿಮಾತನ್ನು ಹೇಳಿದಳು.
ಕೆಲವು ದಿನಗಳಾದರೂ ವಿವೇಕ್ ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸ್ನೇಹಳಿಗೆ ತನ್ನ ತಪ್ಪಿನ ಅರಿವಾಗಿ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡಳು. ನಮ್ಮ ಜೊತೆ ಸ್ನೇಹಿತರು ಇರಬೇಕು ಎಂತವರು ಎಂದರೆ ತಪ್ಪು ದಾರಿಯಲ್ಲಿ ನಡೆಯುತ್ತಿರುವಾಗ ಸರಿ ದಾರಿಗೆ ತರುವಂತವರು. ಹಳ್ಳಕ್ಕೆ ನೂಕಿ ಮಜ ತೆಗೆದುಕೊಳ್ಳುವರಲ್ಲ….
- ಯಶು
