ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉದಯೋನ್ಮುಖ ಲೇಖಕಿಯರಲ್ಲಿ ಸುಮಂಗಳ ಮೂರ್ತಿ ಅವರು ಕೂಡಾ ಒಬ್ಬರು. ಸದಾ ಓದಿನಲ್ಲಿ ತೊಡಗಿಸಿಕೊಂಡ ಇವರು ೨೦೧೩ರಲ್ಲಿ ಕನ್ನಡದಿಂದ ಇಂಗ್ಲಿಷ್ ಗೆ ಡಿಕ್ಷನರಿಯನು ಹೊರತಂದರು. ಸುಮಂಗಳ ಮೂರ್ತಿ ಅವರ ಪರಿಚಯವನ್ನು ಕವಿ ನಾರಾಯಣಸ್ವಾಮಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೋಲಾರ ಜಿಲ್ಲೆಯು ಹೋರಾಟ ಬೀಡು, ಕನ್ನಡ ಸಾಹಿತ್ಯದ ನಾಡು. ಹೋರಾಟಗಾರರಿಗೂ ಕವಿಗಳಿಗೂ ಲೇಖಕರಿಗೂ, ಕಾದಂಬರಿಕಾರರಿಗೂ, ನಾಟಕರಾರಿಗೂ ತವರೂರು ಕೋಲಾರ ಜಿಲ್ಲೆ. ಪ್ರಬುದ್ಧತೆಯ ಸಾಹಿತ್ಯವನ್ನು ರಚಿಸಿ, ಸಾಧಿಸಿ ಕನ್ನಡ ಸಾಹಿತ್ಯಲೋಕದಲ್ಲಿ ಬಹಳಷ್ಟು ಲೇಖಕರು ಲೇಖಕಿಯರು ಚಿರಪರಿಚಿತರಾಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಬರಹಗಾರರು ಬಹಳಷ್ಟು ಜನ ಇದ್ದರೂ, ಬರಹವನ್ನು ಪ್ರವೃತ್ತಿಯಾಗಿ ಬಳಸಿಕೊಂಡು ಬರವಣಿಗೆಯಲ್ಲಿ ತೊಡಗಿರುವ ಮಹಿಳಾ ಲೇಖಕಿಯರು ಮಾತ್ರ ವಿರಳ. ಪ್ರಬುದ್ಧತೆಯ ಬರಹಗಳಿಂದ ಕನ್ನಡ ಸಾಹಿತ್ಯದಲ್ಲಿ ಕವಿತೆ, ಗಜಲ್, ಕಥೆಗಳನ್ನು ಬರೆಯುತ್ತಾ ಉದಯೋನ್ಮುಖ ಲೇಖಕಿಯಾಗಿ ಗುರುತಿಸಿಕೊಂಡಿರುವವರೇ ಶ್ರೀಮತಿ ಸುಮಂಗಳ ಮೂರ್ತಿಯವರು.

ಶ್ರೀಮತಿ ಸುಮಂಗಳ ಮೂರ್ತಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಇತ್ತೀಚೆಗೆ ಪ್ರವಧ೯ಮಾನಕ್ಕೆ ಬರುತ್ತಿರುವ ಬರಹಗಾತಿ೯ಯರಲ್ಲಿ ಮೊದಲ ಲೇಖಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಶ್ರೀಮತಿ ಸುಮಂಗಳ ಮೂರ್ತಿ ರವರು ಮಾಸ್ತಿ ಕನ್ನಡದ ಅಸ್ತಿಯೆಂದು ಗುರುತಿಸಿಕೊಂಡಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು ಜನಿಸಿದ ಮಾಸ್ತಿಯ ಪಕ್ಕದ ಹಳ್ಳಿಯಾದ ಶಾಮಶೆಟ್ಟಿಹಳ್ಳಿ ಎಂಬ ಗ್ರಾಮದಲ್ಲಿ ಶ್ರೀ ಎಸ್. ಜಿ. ನಾಗರಾಜ್ ಮತ್ತು ಶ್ರೀಮತಿ ಅನಸೂಯಾ ರವರ ಒಡಲಿನಲಿ ಜನಿಸಿದರು.

ಶ್ರೀಮತಿ ಸುಮಂಗಳ ಮೂರ್ತಿ ರವರ ಪ್ರಾಥಮಿಕ ಶಿಕ್ಷಣ ಸಕಾ೯ರಿ ಪ್ರಾಥಮಿಕ ಪಾಠ ಶಾಲೆ ಮಾಸ್ತಿ ಮತ್ತು ಪ್ರೌಢ ಶಿಕ್ಷಣ – ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರೌಢಶಾಲೆ ಮಾಸ್ತಿಯಲ್ಲಿಯೇ ಮುಗಿಸಿ, ಪದವಿಪೂರ್ವ ಶಿಕ್ಷಣವನ್ನು ಸಕಾ೯ರಿ ಜೂನಿಯರ್ ಕಾಲೇಜು ಮಾಲೂರು ಮತ್ತು ಪದವಿಯನ್ನು ಮಾಲೂರಿನ ಪ್ರಥಮ ದಜೆ೯ ಕಾಲೇಜಿನಲ್ಲಿ ಪಡೆದರು. ಉನ್ನತ ವ್ಯಾಸಂಗವನ್ನು ಮುಂದುವರಿಸಿದ ಇವರು ಬೆಂಗಳೂರು ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದು ಈಗ ಶಿಕ್ಷಕಿಯಾಗಿ ಕತ೯ವ್ಯವನ್ನು ನಿವ೯ಹಿಸುತ್ತಿದ್ದಾರೆ.

ತಂದೆಯಾದ ಶ್ರೀ ಎಸ್ ಜಿ ನಾಗರಾಜ್ ರವರು ಶಿಕ್ಷಕರು ಮತ್ತು ಹವ್ಯಾಸಿ ರಂಗಕರ್ಮಿಯಾಗಿದ್ದರಿಂದ ಇವರಿಗೆ ಬಾಲ್ಯದಲ್ಲಿ ಜ್ಞಾನದ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳೆಯಿತು. ಬಾಲ್ಯದ ಹಳ್ಳಿಯ ವಾತಾವರಣದಲ್ಲಿ ಅಜ್ಜಿಯು ಹೇಳುತ್ತಿದ್ದ ಕಥೆಗಳು ಇವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿ ವಿಧ್ಯಾರ್ಥಿ ದಿಸೆಯಲ್ಲಿಯೇ ಕವಿತೆಗಳನ್ನು ಬರೆದು ಶಿಕ್ಷಕರ ಮೆಚ್ಚುಗೆ ಪಾತ್ರವಾಗುತ್ತಿದ್ದರು. ಅವರಿಗಿದ್ದ ಅಪಾರವಾದ ಸಾಹಿತ್ಯದ ಒಲವು ಬರಹಗಾತಿ೯ಯಾಗಲು ಸಹಕಾರಿಯಾಯಿತು.

ತುಳಸಿ ಮತ್ತು ತೇಜಸ್ವಿನಿ ಸುಮಾ ಕಾವ್ಯನಾಮದಿಂದ ಕವಿತೆ ಗಜಲ್ ಬರೆಯಲು ಆರಂಭಿಸಿದ ಶ್ರೀಮತಿ ಸುಮಂಗಳ ಮೂರ್ತಿರವರು ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿಕೊಂಡು, ಸದಾ ಓದಿನಲ್ಲಿ ತೊಡಗಿಸಿಕೊಂಡ ಇವರು 2013 ರಲ್ಲಿ ಕನ್ನಡದಿಂದ ಇಂಗ್ಲಿಷ್ ಗೆ ಡಿಕ್ಷನರಿಯನು ಹೊರತಂದರು. ಇದು ಹಳ್ಳಿಗಾಡಿನಲಿ ಓದುವ ಕಲಿಯುವ ವಿಧ್ಯಾರ್ಥಿಗಳಿಗೆ ಬಹು ಉಪಯುಕ್ತವಾದ ಕೃತಿಯಾಯಿತು. ಕನ್ನಡ ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು 2019 ರಲ್ಲಿ ಖಾಲಿ ಹಾಳೆಯೆಂಬ ಚೊಚ್ಚಲ ಕವನಸಂಕಲನವನ್ನು ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯಲೋಕದಲ್ಲಿ ಕವಯಿತ್ರಿಯಾಗಿ ಗುರುತಿಸಿಕೊಂಡರು. ಈ ಕೃತಿಯು ಓದುಗರ ಗಮನ ಸೆಳೆದು ಜನ ಮನ್ನಣೆಯನ್ನು ಪಡೆಯಿತು.

ಶಾಲೆಯ ಶಿಕ್ಷಕಿಯಾಗಿ ಕಾಯ೯ವನ್ನು ನಿವ೯ಹಿಸುತ್ತಾ, ಬಡ ಮಕ್ಕಳಿಗೆ ಉಚಿತವಾಗಿ ಮನೆಪಾಠವನ್ನು ಮಾಡುತ್ತಾ ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿರುವ ಶ್ರೀಮತಿ ಸುಮಂಗಳ ಮೂರ್ತಿರವರು, ಸಹೃದಯ ಬರಹಗಾರ ಕವಿಗಳು ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿವ೯ಹಿಸುವ ಪರಶಿವಮೂತಿ೯ರವರನ್ನು ವಿವಾಹವಾಗಿ ಇಬ್ಬರೂ ಅಪ್ರತಿಮ ಪ್ರತಿಭೆಗಳಾದ ಎರಡು ಹೆಣ್ಣುಮಕ್ಕಳ ಜೊತೆಯಲ್ಲಿ ಮಾಲೂರಿನಲ್ಲಿ ವಾಸವಾಗಿದ್ದಾರೆ.

ರಾಜ್ಯಮಟ್ಟದ ಹಲವಾರು ಕನ್ನಡದ ಕಾಯ೯ಕ್ರಮಗಳಲ್ಲಿ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಸಾಹಿತ್ಯದ ಪ್ರತಿಭೆಯನ್ನು ಕಂಡು ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಾರೆ. ಪ್ರಜಾವಾಣಿ ಪತ್ರಿಕೆಯವರು ಪ್ರತಿವರ್ಷ ಯುವ ಸಾಧಕರಿಗೆ ಪ್ರಶಸ್ತಿಯನ್ನು ಕೊಡುತ್ತಿದ್ದು 2020ನೇ ಸಾಲಿನಲ್ಲಿ ಶ್ರೀಮತಿ ಸುಮಂಗಳ ಮೂತಿ೯ಯವರು ಪ್ರಜಾವಾಣಿ ಯುವ ಸಾಧಕ ಪ್ರಶಸ್ತಿ ಪಡೆದಿದ್ದಾರೆ.

ಮುಂದಿನ ದಿನಗಳಲ್ಲಿ ಗಜಲ್ ಸಂಕಲನ ಮತ್ತು ಕಥಾಸಂಕಲನದ ಬಿಡುಗಡೆಗೆ ಸಿದ್ದತೆಯಲ್ಲಿ ತೊಡಗಿರುವ ಶ್ರೀಮತಿ ಸುಮಂಗಳ ಮೂತಿ೯ ರವರಿಗೆ ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನಷ್ಟು ಕೃತಿಗಳನ್ನು ಹೊರತರಲಿ ಮತ್ತು ಬರೆವ ಬರಹಗಳು ಮಹಿಳೆಯರ ಪರವಾದ ಕಾವ್ಯ ಸಂವೇದನೆಯನು ಚಿಂತಿಸುವ ಕೃತಿಗಳಾಗಲಿ, ಕನ್ನಡ ಸಾಹಿತ್ಯದ ಬರವಣಿಗೆಯಿಂದ ಅವರಿಗೆ ಗೌರವ, ಪ್ರಶಸ್ತಿ ಪುರಸ್ಕಾರಗಳು ಸಿಗಲಿ ಎಂದು ಆಶಿಸುವೆ ಶುಭವಾಗಲಿ.

ಹಿಂದಿನ ಸಂಚಿಕೆಗಳು :


  • ನಾರಾಯಣಸ್ವಾಮಿ (ನಾನಿ) – ವಕೀಲರು ಮತ್ತು ಲೇಖಕರು, ಬಂಡಹಟ್ಟಿ ಮಾಸ್ತಿ ಮಾಲೂರು ತಾಲ್ಲೂಕು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW