ಮಾನಸಿಕ ಅಸ್ವಸ್ಥೆಯರ ಪಾಲಿನ ಆಶಾಕಿರಣ ಸುಷ್ಮಾ ರವಿಕುಮಾರ್. ಮಾನಸಿಕ ಅಸ್ವಸ್ಥರು, ನಿರ್ಗತಿಕ ಮಹಿಳೆಯರಿಗಾಗಿ ಮೈಸೂರಿನ ಕೂರ್ಗಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ‘ಚಿಗುರು’ ಆಶ್ರಮವನ್ನು ಸ್ಥಾಪಿಸಿದ್ದಾರೆ. ಅವರ ಸಾಧನೆಯ ಕುರಿತು ಇನ್ನಷ್ಟು ಓದಿ…
ಇವರು ಹುಟ್ಟಿದ್ದು #ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗ್ರಾಮವೊಂದರಲ್ಲಿ. ಇವರ ತಂದೆ ಹೆಸರು ಸತೀಶ್, ತಾಯಿ ಹೆಸರು ಶಶಿಕಲಾ. ಪ್ರಾಥಮಿಕ ಶಿಕ್ಷಣ ಮುಗಿಸಿಕೊಂಡು ಹೆಚ್ಚಿನ ಶಿಕ್ಷಣಕ್ಕೆ ಮೈಸೂರು ಗೆ ಬರುತ್ತಾರೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ (ಎನ್.ಎಸ್.ಎಸ್) ಇವರು ಅತೀವ ಆಸಕ್ತಿಯಿಂದ ಭಾಗವಹಿಸಿದ್ದರು.
ಮೈಸೂರಿನಲ್ಲಿ MSW ನಲ್ಲಿ MA ಓದುತ್ತಾರೆ. MSW ಅಂದರೆ ಮಾಸ್ಟರ್ ಇನ್ ಸೋಷಿಯಲ್ ಸರ್ವೀಸ್. ಗ್ರಾಮಾಂತರ ಪ್ರದೇಶದಿಂದ ಬಂದಂತ ಈ ಮಹಿಳೆಗೆ NGO ಮಾಡಬೇಕು ಎನ್ನುವ ಆಸೆ ಇದ್ದರೂ, ಅದನ್ನು ತಾನು ನಡೆಸಬಲ್ಲನೇ ಎನ್ನುವ ಅನುಮಾನವಿತ್ತು. ಐದು ವರ್ಷಗಳ ಕಾಲ ವಿವಿಧ #NGO ಗಳಲ್ಲಿ ಕೆಲಸ ಮಾಡಿದರು. ನಂತರ ಈ ಜನ ಸೇವಾ ಟ್ರಸ್ಟ್ ನ ಅಡಿಯಲ್ಲಿ “#ಚಿಗುರು_ಆಶ್ರಮ” ಪ್ರಾರಂಭ ಮಾಡುತ್ತಾರೆ. ಈಗ 6 ವರ್ಷಗಳಿಂದ ಇದು ಮೈಸೂರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜನ ಸೇವಾ ಟ್ರಸ್ಟ್ ನಡೆಸುತ್ತಿರುವ ಚಿಗುರು ಆಶ್ರಮದ ಮುಖ್ಯಸ್ಥೆ ಶ್ರೀಮತಿ ಸುಷ್ಮಾ ರವಿಕುಮಾರ್.
೨೦೧೪ ರಲ್ಲಿ ಬೆಳವಾಡಿಯ ಚಾಮುಂಡೇಶ್ವರಿನಗರದಲ್ಲಿ ಚಿಗುರು ಆಶ್ರಮವನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಐವರು ಮಹಿಳೆಯರಿಗೆ ಆಶ್ರಯ ನೀಡಲಾಗಿತ್ತು. ಸದ್ಯ, ೩೦ ನಿರ್ಗತಿಕ, ಮಾನಸಿಕ ಅಸ್ವಸ್ಥ ಮಹಿಳೆಯರು ಇಲ್ಲಿ ಆಶ್ರಯ ಪಡೆದಿದ್ದಾರೆ. ಎಲ್ಲರಿಗೂ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ. ಇದೊಂದು ಸಂಪೂರ್ಣವಾಗಿ ಉಚಿತವಾಗಿ ನಡೆಸುವ ಆಶ್ರಮ ಆಗಿದೆ. ಒಬ್ಬ ಮನೋವೈದ್ಯರು, ಕೌನ್ಸಲರ್, ಇಲ್ಲಿಗೆ ಬಂದು ಅವರಿಗೆ ಸಹಾಯ ಮಾಡುತ್ತಾರೆ. ಒಬ್ಬರು ಸಹಾಯಕರು ಇದ್ದಾರೆ. ಮನೆಯ ಎಲ್ಲಾ ಕೆಲಸಗಳನ್ನು ಇಲ್ಲಿಯ ಆಶ್ರಮದ ವಾಸಿಗಳೇ ಮಾಡಿಕೊಳ್ಳುತ್ತಾರೆ.
ಅವರು ಪೇಪರ್ ಕವರ್ ಗಳನ್ನು ತಯಾರು ಮಾಡಿ ಹೊರಗಡೆ ಮಾರಾಟ ಮಾಡುತ್ತಾರೆ. ಅದೇ ತರಹ phenoil ತಯಾರು ಮಾಡಿ ಮಾರಾಟ ಮಾಡುತ್ತಾರೆ. ಹಕ್ಕಿಗಳು ಮತ್ತು ಮೊಲಗಳನ್ನು ಸಾಕಿದ್ದಾರೆ. ಅವುಗಳ ಮಧ್ಯೆ ಇದ್ದರೆ ಆಶ್ರಮದವಾಸಿಗಳಿಗೆ ಒಂಟಿತನ ಕಾಡುವುದು ಕಡಿಮೆ ಆಗುತ್ತದೆ. ಬೆಳಿಗ್ಗೆ ಯೋಗದ ತರಬೇತಿ, ವ್ಯಾಯಾಮ, ಪ್ರಾರ್ಥನೆ ಇರುತ್ತದೆ. ಆಶ್ರಮದಲ್ಲಿ ಅವರಿಗೆ ಬೇಕಾದ ಸೊಪ್ಪು ಮತ್ತು ತರಕಾರಿ ಬೆಳೆಯಲು ಕೂಡ ಕ್ರಮ ಕೈಗೊಂಡಿದ್ದಾರೆ. ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಾಯದಿಂದ ಈ ಸಂಸ್ಥೆ ನಡೆಸಲಾಗುತ್ತಿದೆ. ಯಾರಿಗೂ ಬೇಡವಾದ ವೃದ್ದ ಆಶಕ್ತ ಮಹಿಳೆಯರ ಮನದಲ್ಲಿ ಹೊಸ ಜೀವನ ಚಿಗುರು ಒಡೆಯಲು ದುಡಿಯುತ್ತಿರುವವರು.ಸುಷ್ಮಾರ ಅವರ ಈ ಕಾರ್ಯಕ್ಕೆ ಗಂಡ ರವಿಕುಮಾರ್ ಬೆಂಬಲವಾಗಿ ನಿಂತಿದ್ದಾರೆ.
ಚಿಗುರು ಆಶ್ರಮದ ಸುಷ್ಮಾ ರವರು ಈಗಿನ ಜನಾಂಗಕ್ಕೆ ರೋಲ್ ಮಾಡೆಲ್ ಆಗಿದ್ದಾರೆ. ಅವರು ನಮ್ಮ ಕರ್ನಾಟಕದ ಹೆಮ್ಮೆ.
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)
