ಕೇರಳಿಗರು ಕಪ್ಪ ಎನ್ನುವ ಟ್ಯಾಪಿಯೋಕ. ಕೇರಳದಲ್ಲಿ ಭೀಕರ ಬರಗಾಲ ಬಂದಾಗ ೧೮೮೦ರಲ್ಲಿ ತಿರುವಾಂಕೂರ್ ರಾಜರ ಕಿರಿಯ ಸಹೋದರ ವಿಶಾರಾಮ ತಿರುಮಲ ರಾಮವರ್ಮ ರಾಜ್ಯಕ್ಕೆ ಪರಿಚಯಿಸುತ್ತಾರೆ. ಅನ್ನಕ್ಕೆ ಪರ್ಯಾಯ ಉಪ್ಪಿಟ್ಟು ಚಿಪ್ಸ್ ಸಾಮೆ ಅಕ್ಕಿ ಸ್ಟಾರ್ಚ್ ವೋಡ್ಕಾ ತಯಾರಿಸುತ್ತಾರೆ. ಅರುಣ್ ಪ್ರಸಾದ್ ಅವರ ಈ ಮರಗೆಣಸಿನ ರುಚಿಯ ಹಿಂದಿರುವ ಕತೆಯನ್ನು ತಪ್ಪದೆ ಓದಿ…
ಮರಗೆಣಸು ಬೆಳೆದವರು ತಂದು ಕೊಟ್ಟಿದ್ದನ್ನು ಅದರ ಸಿಪ್ಪೆ ನಿವಾರಿಸಲು ಕುಳಿತಾಗ ತಟ್ಟೆ ಚಾಕು ಶಬ್ದ ಮತ್ತು ಅದರ ವಾಸನೆ ಗ್ರಹಿಸಿ ನನ್ನ ಪ್ರೀತಿಯ ಶಂಭೂರಾಮ ನನ್ನ ಬದಿಗೆ ಬಂದು ಕುಳಿತ.
ನಾವು ತಿನ್ನುವ ಎಲ್ಲಾ ತರಕಾರಿ ತಿನ್ನುವ ಈ ರಾಟ್ ವೀಲರ್ ಶಂಭೂರಾಮನಿಗೆ ಈವರೆಗೆ ಇದನ್ನು ಕೊಟ್ಟಿರಲಿಲ್ಲ, ನಾನು ಮಲೆಯಾಳಿ ಗೆಳೆಯ ಕುಟ್ಟೀಚನ್ ಹೇಳಿಕೊಟ್ಟ ಸುಲಭ ವಿಧದಲ್ಲಿ ಮರಗೆಣಸಿನ ದಪ್ಪ ಸಿಪ್ಪೆ ನಿವಾರಿಸಿ ತೆಗೆದ ನಂತರ ಶಂಭೂರಾಮನಿಗೆ ನೀಡಿದೆ.
ಕಟುಂ – ಕುಟುಂ ಅಂತ ಮರಗೆಣಸು ತನ್ನ ಬಲಿಷ್ಟ ದವಡೆಯಲ್ಲಿ ತುಂಡರಿಸಿ ಕರ0-ಕುರಂ ಅಂತ ಚಪ್ಪರಿಸಿ ನುಂಗಿ ರಿಪೀಟ್ ದಿ ಕೋರ್ಸ್ ಅಂದ!…

ಬ್ರಿಜಿಲ್ ಮೂಲದ ಈ ಬೆಳೆ ಪೋರ್ಚುಗಿಸರಿಂದ ಟ್ಯಾಪಿಯೋಕ ಎಂಬ ಹೆಸರಾಯಿತು. ಕಪ್ಪಾ ಅಂತ ಕೇರಳದವರು ಕರೆಯುವ ಕನ್ನಡಿಗರ ಬಾಯಲ್ಲಿ ಮರಗೆಣಸು ಆಗಿರುವ ಇದರ ಮೂಲ ಬ್ರಿಜಿಲ್, ಅತಿ ಕಡಿಮೆ ಮಳೆ ಆಶ್ರಿತ ಬೆಳೆ, ಹೆಚ್ಚು ಪೈಬ್ರಾಯಿಡ್ ಹೊಂದಿದೆ.

1880 – 85 ರಲ್ಲಿ ದಕ್ಷಿಣ ಕೇರಳ ಟ್ರೂವೆಂಕೂರ್ ರಾಜ್ಯದಲ್ಲಿ ಬೀಕರ ಬರಗಾಲ ಬಂದಾಗ ಅಲ್ಲಿನ ರಾಜನ ಕಿರಿಯ ಸಹೋದರ ವಿಶಾ ರಾಮ್ ತಿರುಮಲ ರಾಮ ವಮಾ೯ ಇದನ್ನು ಕೇರಳಕ್ಕೆ ಪರಿಚಯಿಸುತ್ತಾರೆ. ಸ್ವತಃ ಸಸ್ಯಶಾಸ್ತ್ರಜ್ಞರಾದ ಇವರು ರಾಜನಿಂದ ಸ್ಟತಃ ಅಡಿಗೆ ಮಾಡಿ ತಿಂದು ತೋರಿಸಿದ್ದರಿಂದ ಜನ ದೈಯ೯ದಿಂದ ಬೆಳೆದು ಬೆಳೆಸಿ ತಿನ್ನುತ್ತಾರಂತೆ.
ಎರಡನೇ ಮಹಾಯುದ್ಧದಲ್ಲಿ ಸೌತ್ ಈಸ್ಟ್ ಏಷಿಯಾದಲ್ಲಿ ಬಹಳಷ್ಟು ನಿರಾಶ್ರಿತರು ಇದರಿಂದ ಬದುಕಿದ ಇತಿಹಾಸ ಇದೆ.
ಬೇಕಾಗುವ ಸಾಮಗ್ರಿಗಳು :
- ಮರಗೆಣಸು
- ಕೊಬ್ಬರಿ ಎಣ್ಣೆ
- ಒಗ್ಗರಣೆ ಸಾಮಗ್ರಿಗಳು
ಮರಗೆಣಸಿನ ಸಿಪ್ಪೆ ತೆಗೆದು ಉಪ್ಪಿನೊ೦ದಿಗೆ ಬೇಯಿಸಿ ಅದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಇಷ್ಟದ ಒಗ್ಗರಣೆ ಹಾಕಬೇಕು. ಅದಕ್ಕೆ ಬೆಂದ ಮರಗೆಣಸು ಸೇರಿಸಿ ಸ್ಮಾಷ್ ಮಾಡಿ ನಂತರ ಲಿಂಬೆ ರಸ ಹಿಂಡಿ ತಯಾರಿಸಿದ ಮರಗೆಣಿಸಿನ ಉಪ್ಪಿಟ್ಟಿನ ರುಚಿಗೆ ಸರಿ ಸಾಟಿಯಾದ ತಿಂಡಿ ಇನ್ನೊಂದಿಲ್ಲ.

ಇದರ ಜೊತೆ ಮೀನಿನ ಸಾರು, ಕೋಳಿ ಸಾರು ಸೇರಿಸಿದರೆ ಅದಕ್ಕಿಂತ ರುಚಿಯ ಲಂಚ್/ ಡಿನ್ನರ್ ಇರಲಿಕ್ಕಿಲ್ಲ. ಸಸ್ಯಹಾರಿಗಳು ಅವರ ಇಷ್ಟದ ತರಕಾರಿ,ದಾಲ್, ಮೊಸರು ಸೇರಿಸಿ ಹೊಸ ರೆಸಿಪಿಯೂ ಮಾಡಬಹುದು.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು, ಪ್ರಗತಿಪರ ಚಿಂತಕರು
