ಹುಲಿಗಳ ಆಯಸ್ಸು ಎಷ್ಟು ವರ್ಷ? – ಡಾ. ಯುವರಾಜ್ ಹೆಗಡೆ



ಹುಲಿಗಳ ಆಯಸ್ಸು ಎಷ್ಟು ವರ್ಷ ಬಲ್ಲಿರಾ ?೫೦ -೭೦ ವರ್ಷನಾ?…ಬನ್ನಿ ತಿಳಿಯೋಣ, ಪಶುವೈದ್ಯರಾದ ಯುವರಾಜ್ ಹೆಗಡೆ ಅವರಿಂದ ಒಂದು ಲೇಖನ.ಮುಂದೆ ಓದಿ…

ನೈಸರ್ಗಿಕ ಅರಣ್ಯದಲ್ಲಿ #ಹುಲಿಗಳ ಆಯಸ್ಸು ಎಷ್ಟು ವರ್ಷ? ಹುಲಿಗಳು ಅನಾದಿ ಕಾಲದಿಂದಲೂ ಬದುಕಿರುವ ಪಶ್ಚಿಮ ಘಟ್ಟ, ಉದೆರೆಲೆ ಕಾಡುಗಳ ಸುತ್ತಲಿನ ಊರುಗಳಲ್ಲಿ ಗ್ರಾಮಸ್ಥರನ್ನು ಈ ಕುರಿತಾಗಿ ವಿಚಾರಿಸಿ ನೋಡಿ. ಸಾಮಾನ್ಯವಾಗಿ ಅವರು “ನಮ್ಮೂರಲ್ಲಿ ಹೆಬ್ಬುಲಿ ನಮ್ಮ ತಾತನ ಕಾಲದಿಂದಲೂ ಇದೆ” ಅಂತಾರೆ. ಅದರ ಘರ್ಜನೆ ನಾವು ಚಿಕ್ಕಂದಿನಿಂದಲೂ ಆಗಾಗ್ಗೆ ಕೇಳುತ್ತಿದ್ದೇವೆ ಎನ್ನುವವರೂ ಇದ್ದಾರೆ. ಅಂದರೆ ಅವರ ಪ್ರಕಾರ ಸುಮಾರು 50-70 ವರ್ಷದಿಂದ ಇದೆ ಎಂಬಂತೆ ತಿಳಿದವರೇ ಹೆಚ್ಚು. ಆದರೆ ವಾಸ್ತವದಲ್ಲಿ ಹುಲಿಗಳ ಆಯಸ್ಸು ನೈಸರ್ಗಿಕ ಅರಣ್ಯದಲ್ಲಿ 8 ರಿಂದ 15 ವರ್ಷಗಳು, ಸರಾಸರಿ 11 ವರ್ಷಗಳು ಮಾತ್ರ ಎಂದರೆ ಹಲವರಿಗೆ ಆಶ್ಚರ್ಯ ಆಗಬಹುದು . ಅದೇ ಮೃಗಾಲಯ , ಮತ್ತಿತರೆಡೆ ಆಹಾರ , ರಕ್ಷಣೆ, ಅವುಗಳ ಆರೋಗ್ಯದ ಸುರಕ್ಷತೆ ನೀಡಿ ಸಂರಕ್ಷಿಸಲ್ಪಟ್ಟ( Captivity) ಕಡೆಗಳಲ್ಲಿ ಅವು 25 ವರ್ಷಗಳ ವರೆಗೆ ಬದುಕಬಲ್ಲವು.

 

ಫೋಟೋ ಕೃಪೆ : wallpaperflar

ಸಾಮಾನ್ಯವಾಗಿ ಅರಣ್ಯದಲ್ಲಿ ಅವುಗಳಿಗೆ ರೋಗಗಳು,ವಿವಿಧ ಕಾರಣಗಳಿಗೆ ಪರಸ್ಪರ ಕಾದಾಟ, ಆಹಾರದ ಕೊರತೆ, ಹವಾಮಾನ ವೈಪರೀತ್ಯ, ಅನಧಿಕೃತ ಬೇಟೆ, #ಅರಣ್ಯ_ನಾಶದಿಂದ ವಾಸಸ್ಥಳದ ಕೊರತೆ ಮುಂತಾದ ಕಾರಣಗಳಿಂದ ಅವುಗಳು 8-15 ( ಸರಾಸರಿ 11 ವರ್ಷ) ಮಾತ್ರ ಬದುಕಲು ಸಾದ್ಯ. ಈ ಅಲ್ಪಾವದಿಯಲ್ಲಿಯೇ ಅವುಗಳು ಸಂತಾನಾಭಿವೃದ್ದಿ ಹೊಂದಿ,ತನ್ನ ಮುಂದಿನ ಪೀಳಿಗೆಯನ್ನು ಮುಂದುವರೆಸಬೇಕಿರುತ್ತದೆ.

ಫೋಟೋ ಕೃಪೆ : youtube

ಹೆಣ್ಣು ಹುಲಿಗಳು ಪ್ರೌಡಾವಸ್ಥೆ ತಲುಪಲು 3 ರಿಂದ 4 ವರ್ಷಗಳು ತಗಲುತ್ತದೆ. ಬೆದೆಗೆ ಬಂದು ಗಂಡಿನೊಂದಿಗೆ ಸಂಪರ್ಕಕ್ಕೆ ಬಂದ ಮೂರೂವರೆ ತಿಂಗಳ ( 93-112 ದಿನಗಳು) ಗರ್ಭಾವಸ್ಥೆಯನ್ನು ಪೂರೈಸಿ 2 ರಿಂದ 4 ಮರಿಗಳಿಗೆ ಜನ್ಮ ನೀಡಬಲ್ಲವು. ಹೀಗೆ ಜನಿಸಿದ ಮರಿಗಳು ಶೇಕಡ 50% ರಷ್ಟು ಎರಡು ವರ್ಷ ತಲುಪುವುದರೊಳಗೆ ವಿವಿಧ ಕಾರಣಗಳಿಂದಾಗಿ ಮರಣ ಹೊಂದುತ್ತವೆ.



ಡಾರ್ವಿನ್ನನ ವಾದದಂತೆ ದುರ್ಬಲ ಮರಿಗಳು ನಾಶಹೊಂದಿ, ಶಕ್ತಿಶಾಲಿಯಾದವು ಮಾತ್ರ ಪ್ರಕೃತಿಯಲ್ಲಿ ಉಳಿಯಲು ಸಾದ್ಯ ಎಂಬ ನಿಯಮ ಇವುಗಳಿಗೂ ಅನ್ವಯಿಸುವುದು ಸಹಜವೇ ಆಗಿದೆ. ಅರಣ್ಯದಲ್ಲಿ ಹೆಣ್ಣು ಹುಲಿ ಅಂದಾಜಿಗೆ ಎರಡು ವರ್ಷಗಳಿಗೊಮ್ಮೆ ಗರ್ಭ ಧರಿಸಿ ಮರಿಗಳನ್ನು ನೀಡುತ್ತವೆ. ಅಂದರೆ ಹುಲಿ ನೈಸರ್ಗಿಕ ಅರಣ್ಯದಲ್ಲಿ ತನ್ನ ಜೀವಿತಾವದಿಯಲ್ಲಿ 3 ರಿಂದ 5 ಭಾರಿ ಮಾತ್ರ ಮರಿಗಳನ್ನು ಹಾಕಬಲ್ಲದು. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಅವುಗಳ ಸಂರಕ್ಷತೆ, ಸುರಕ್ಷತೆ, ಸ್ವಾಭಾವಿಕ ವಾಸಸ್ಥಾನವಾದ ಉದುರೆಲೆ ಹಾಗೂ ಪಶ್ಚಿಮ ಘಟ್ಟ ಅರಣ್ಯವನ್ನು ಉಳಿಸುವ ಜವಾಬ್ದಾರಿ ನಮ್ಮದಾಗಲಿ.


  • ಡಾ. ಯುವರಾಜ್ ಹೆಗಡೆ  (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW