
ಚಾರಣಿಗರಿಗೆ ಸೌಕರ್ಯವನ್ನು ನೀಡದೆ ಅರಣ್ಯ ಇಲಾಖೆ ಶುಲ್ಕ ವಸೂಲಿ ಮಾಡುತ್ತಿರುವುದರ ವಿರುದ್ಧ ಚಾರಣಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪರಿಸರವಾದಿ ಚಿದು ಯುವ ಸಂಚಲನ ಅವರು ಏನು ಹೇಳುತ್ತಾರೆ ಎನ್ನುವುದನ್ನು ತಪ್ಪದೆ ಈ ಲೇಖನವನೊಮ್ಮೆ ಓದಿ …
ಚಾರಣ ಎಂದರೆ ಅದೊಂದು ಉಲ್ಲಾಸ, ನೆಮ್ಮದಿ, ಶ್ರಮದ ಬದುಕು, ಹೊಸ ಕಲಿಕೆಗಳ ದಾರಿ, ಈಗ ಇವೆಲ್ಲ ಸಿಗಬೇಕೆಂದರೆ ದುಬಾರಿ ಶುಲ್ಕವೇ ಬೇಕು. ಸರ್ಕಾರದ ಉದ್ದೇಶಗಳು ಎಷ್ಟೇ ಸೊಗಸಾಗಿದ್ದರು ಅನುಷ್ಠಾನಕ್ಕೆ ಬರುವುದೇ ಬೇರೆ ಎಂಬುದಕ್ಕೆ ಇದು ಸಹ ಒಳ್ಳೆಯ ಉದಾಹರಣೆ.

ಜೀವ ವೈವಿಧ್ಯತೆಯ ರಕ್ಷಣೆ, ಅರಣ್ಯ ರಕ್ಷಣೆ, ಚಾರಣಿಗರ ಹಿತರಕ್ಷಣೆ, ಎಂದೆಲ್ಲಾ ಹೇಳಿ ಶುಲ್ಕ ವಿಧಿಸಲು ಪ್ರಾರಂಭ ಮಾಡಿದವರು ಈಗ ಇವನಲ್ಲ ಮರೆತು ದುಬಾರಿ ಶುಲ್ಕವನ್ನು ವಸೂಲಿ ಮಾಡುವ ಕಾರ್ಯಗಳಲ್ಲಿ ಮಾತ್ರ ತೊಡಗಿರುವುದು ವಿಪರ್ಯಾಸವೇ ಸರಿ. ಇದರಿಂದ ಜನ ಬುದ್ಧಿ ಕಲಿಯುವುದು ಸಹ ಇದೆ ಏಕೆಂದರೆ ಚಾರಣಕ್ಕೆ ಬಂದವರು ತಮ್ಮ ಅಧಿಕಾರವನ್ನು ಚಲಾಯಿಸಿ ಪ್ಲಾಸ್ಟಿಕ್ ಬಿಸಾಕುವುದು, ಅರಣ್ಯದಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುವುದು, ನೈಸರ್ಗಿಕ ಸಂಪನ್ಮೂಲವನ್ನು ಹಾನಿ ಮಾಡುವುದು, ಬೆಂಕಿ ಹಚ್ಚುವುದು ಕುಡಿದು ಬಾಟಲನ್ನು ಹೊಡೆದು ಹಾಕುವುದು, ಜೊತೆಗೆ ಸೆಲ್ಫಿ ಗಿಳಿಗಾಗಿ ಪ್ರಾಣ ಕಳೆದುಕೊಳ್ಳುವುದು, ದಾರಿತಪ್ಪಿ ಜೀವಕ್ಕೆ ಕಂಡಕ ತಂದುಕೊಳುವುದು, ಮಾಡಬಾರದ ಸಾಹಸಗಳನ್ನು ಮಾಡಲು ಹೋಗಿ ಆಪತ್ತಿಗೆ ಸಿಲುಕಿಕೊಳ್ಳುವುದು ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಇಲಾಖೆಯೂ ಸಹ ಇದನ್ನೆಲ್ಲಾ ತಡೆಯುವ ಉದ್ದೇಶಗಳನ್ನೇ ಮುಂದಿಟ್ಟುಕೊಂಡು ಶುಲ್ಕವನ್ನು ನಿಗದಿ ಮಾಡಲು ಮುಂದಾಗಿದ್ದು. ಇದರಲ್ಲಿ ಕೆಲವು ಉದ್ದೇಶಗಳು ಮಾತ್ರ ಕಾರ್ಯರೂಪಕ್ಕೆ ಬಂದಿದೆ. ಆದರೆ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ ಕಾರಣ ಸೇವಾ ಮನೋಭಾವವನ್ನು ಬಿಟ್ಟು ದುಡ್ಡು ಮಾಡುವ ಮನಸ್ಥಿತಿಗಳಿಗೆ ಎಲ್ಲಾ ಪ್ರವಾಸಿ ತಾಣಗಳು ಸಹ ಒಳ್ಳೆಯ ಅನುಕೂಲವಾಗಿದೆ.

ಪ್ರಕೃತಿ ಮಡಿಲಿನಲ್ಲಿ ಪರಿಸರವಾದಿ ಚಿದಾನಂದ ಯುವ ಸಂಚಲನ
ಬೆಂಗಳೂರಿನಲ್ಲಿ ದುಡ್ಡಿರುವವರು ಬರುತ್ತಾರೆ, ಎಷ್ಟು ಬೇಕಾದರೂ ದುಡ್ಡುಕೊಟ್ಟು ನೋಡುತ್ತಾರೆ ಎಂಬೆಲ್ಲ ಯೋಚನೆಯನ್ನು ಹೊರತುಪಡಿಸಿ ಸಾಮಾನ್ಯರು ಸಹ ಚಾರಣಕ್ಕೆ ಹೋಗುವಂತೆ ಶುಲ್ಕವನ್ನು ನಿಗದಿ ಮಾಡುವ ಬಗ್ಗೆ ಇಲಾಖೆಯು ಗಮನಹರಿಸಬೇಕಾಗಿದೆ. ಹಣ ಮಾಡುವ ಬರದಲ್ಲಿ ಇಂದಿಗೂ ಸಹ ಇಲಾಖೆಯಿಂದ ಚಾರಣ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಚರ್ ಗೈಡ್ ಗಳಿಗೆ ಮೂಲಸೌಕರ್ಯವನ್ನು ಒದಗಿಸಲು ಮುಂದಾಗದವರಿಗೆ ಇನ್ನು ಚಾರಣಿಗರಿಗೆ ಇನ್ಯಾವ ರೀತಿಯ ಭದ್ರತೆ ನೀಡುತ್ತಾರೆಂಬ ಅನುಮಾನವೂ ಸದಾ ಕಾಡುತ್ತದೆ.
- ಚಿದು ಯುವ ಸಂಚಲನ – ಪರಿಸರವಾದಿಗಳು, ಲೇಖಕರು, ದೊಡ್ಡಬಳ್ಳಾಪುರ.
