ಸೆಪ್ಟೆಂಬರ್ 16, ರ ದಿನವನ್ನು ವಿಶ್ವದಾದ್ಯಂತ ವಿಶ್ವ ಕ್ಷೌರಿಕರ ದಿನವೆಂದು ಆಚರಿಸುತ್ತಾರೆ. ಕ್ಷೌರಿಕ ವೃತ್ತಿಬಾಂದವರಿಗೆ ವಿಶ್ವ ಕ್ಷೌರಿಕರ ದಿನದ ಶುಭಾಶಯಗಳು. ಮತ್ತು ಕ್ಷೌರಿಕರ 5000 ವರ್ಷಗಳ ಇತಿಹಾಸವನ್ನು ಹೋಟೆಲ್ ಉದ್ಯಮಿ, ಲೇಖಕರಾದ ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಕ್ಷೌರಿಕರಿಲ್ಲದ ಸಮಾಜ ಊಹಿಸಲೂ ಸಾಧ್ಯವಿಲ್ಲ. ಭಾರತೀಯ ಬಹು ಜಾತಿ ಪದ್ಧತಿ ವ್ಯವಸ್ಥೆಯಲ್ಲಿ ಅಸ್ಪ್ಪಶ್ಯರಿಗೆ ಕ್ಷೌರ ಮಾಡುವುದು ನಿಶೇಧ ಇತ್ತು. ಗಾಂಧೀಜಿ ಆತ್ಮಕಥೆ ಸತ್ಯಾನ್ವೇಷಣೆ ಬಾಲ್ಯದಲ್ಲಿ ಪ್ರಬಾವ ಬೀರಿತ್ತು. ಅವರ ಸ್ವಯಂ ಮಾಡಿಕೊಳ್ಳುತ್ತಿದ್ದ ಕ್ಷೌರದ ಪ್ರಯೋಗ 2020 ರ ಕೊರಾನಾ ಲಾಕ್ ಡೌನ್ ನಿಂದ ನನಗೆ ಅಭ್ಯಾಸವಾಯಿತು. ಇದು ಅಷ್ಟು ಸುಲಭವಲ್ಲ.
5 ನೇ ತರಗತಿಯಲ್ಲಿಯೇ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ ಗಾಂಧೀಜಿ ಆತ್ಮಚರಿತ್ರೆಯಲ್ಲಿ ಹೆಚ್ಚು ನೆನಪು ಉಳಿದಿದ್ದು ಗಾಂಧೀಜೀ ಅವರೇ ಅವರ ಕ್ಷೌರ ಮಾಡಿಕೊಳ್ಳುವುದು ಮತ್ತು ತಂದೆಯ ಜೇಬಿನಿಂದ ಹಣ ಕದ್ದ ಘಟನೆ, ನನಗೂ ಬಾಲ್ಯದಲ್ಲಿ ತಂದೆ ಜೇಬಿಗೆ ಕೈಹಾಕಿದ್ದು ತಪ್ಪು ಎಂಬ ಅರಿವು ಮೂಡಿಸಿತ್ತು. ಗಾಂಧೀಜಿ ಸತ್ಯಾನ್ವೇಷಣೆ.
ನನಗೆ ನನ್ನ ಬಾಲ್ಯದ ಕೆಟ್ಟ ಅನುಭವ ಆನಂದಪುರಂದ ಆ ಕಾಲದ ಆಧುನಿಕ ಕ್ಷೌರಿಕ ರಾಮಣ್ಣ ತಲೆ ಕೂದಲು ತೆಗೆಯಲು ಬಳಸುತ್ತಿದ್ದ ಇಂಗ್ಲೇಂಡ್ ಮೇಡ್ ಕಟಿಂಗ್ ಮೆಷಿನ್ (ಕ್ಲಿಪ್ಪರ್).
ನನ್ನ ರೋಲ್ ಮಾಡೆಲ್ ಸಿನಿಮಾ ಟಾಕೀಸಿನ ಗೇಟ್ ಕೀಪರ್ ಆಗಿದ್ದ ಡುಮಿ೦ಗಣ್ಣ ಗಟ್ಟಿಯಾಗಿ ನನ್ನ ತಲೆ ಹಿಡಿದುಕೊಳ್ಳುತ್ತಿದ್ದರು, ಇಂತಹ ಅನುಭವ ಆ ಕಾಲದ ಎಲ್ಲಾ ಮಕ್ಕಳಿಗೂ ಆಗಿರುತ್ತದೆ.

ಒಮ್ಮೆ ನಾನು ಗಾಂಧೀಜಿ ಆತ್ಮಕಥೆಯಿಂದ ಪ್ರೇರಪಿತನಾಗಿ ಗುಟ್ಟಾಗಿ ತಂದೆಯವರ ಸರ್ಜರಿ ಕತ್ತರಿಯಲ್ಲಿ ಕನ್ನಡಿ ನೋಡುತ್ತಾ ತಲೆ ಕ್ಷೌರ ಮಾಡಿಕೊಂಡಿದ್ದೆ. ಪರಿಣಾಮ ಇಡೀ ತಲೆ ಇಲಿ ಕೊದಲು ಕತ್ತರಿಸಿ ತಿಂದಂತೆ ಆಗಿತ್ತು. ಅದನ್ನು ಸರಿ ಮಾಡಲು ಪುನಃ ಆನಂದಪುರಂನ ಆ ಕಾಲದ ಮಾಡರ್ನ್ ಸೆಲೂನ್ ರಾಮಣ್ಣ ತನ್ನ ಕ್ಲಿಪ್ಪರ್ ಜೋರಾಗಿಯೆ ಬಳಸಿದ್ದು ಕಣ್ಣೀರು ತರಸಿತ್ತು.
2020 ಮಾರ್ಚ್ ನಲ್ಲಿ ಬಂದ ಕೊರಾನಾ ನಂತರ ಲಾಕ್ ಡೌನ್ ಅನಿವಾಯ೯ವಾಗಿ ನಮ್ಮ ಕ್ಷೌರ ನಾವೇ ಮಾಡಿಕೊಂಡು ಪರಿಣಿತಿ ಪಡೆಯುವಂತಾಯಿತು. ಇದರಿಂದ ಸಮಯ ಉಳಿಯಿತಾದರೂ ಕ್ಷೌರಿಕ ಕುಟುಂಬಗಳ ಸಂಬಂಧ ಕಳೆದು ಹೋಯಿತು.
ಕ್ಷೌರದ ಸಮಯದಲ್ಲಿ ಊರಿನ ಅನೇಕ ಘಟನೆಗಳ ಬಾತ್ಮಿದಾರರಾಗಿ ಅವರು ನೀಡುತ್ತಿದ್ದ ಸುದ್ದಿಯ ಸರಕು ಸವಿಯದಂತಾಯಿತು. ನಮ್ಮ ತಲೆ ಕೂದಲು ನಿವಾರಿಸುವ ಕೆಲಸ ಅಷ್ಟು ಸುಲಭವಲ್ಲ. ಅದರ ಪರಿಣಿತಿಗೆ ತುಂಬಾ ಶ್ರಮ ಬೇಕು. ಈಗ ಇದಕ್ಕೆ ಅನೇಕ ಸುಲಭ ಉಪಕರಣ ಲಭ್ಯಇದೆ. ಆದರೆ ಗಾಂಧೀಜಿ ಕಾಲದಲ್ಲಿ ಅದೆಲ್ಲ ಇಲ್ಲದಿದ್ದ ಕಾಲದಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರವಾಸ -ಭಾಷಣ – ಬರವಣಿಗೆಗಳ ಮಧ್ಯೆ ಅವರು ತಮ್ಮ ಕ್ಷೌರ ತಾವೇ ಮಾಡಿಕೊಳ್ಳುವ ಕಲೆ ಕರಗತ ಮಾಡಿಕೊಂಡಿದ್ದು ಸುಲಭವಲ್ಲ.
ಈ ಮೂಲಕ ತಾನು ಪರಾವಲಂಭಿ ಅಲ್ಲ ಎಂಬ ಸಂದೇಶ ನೀಡಿದ್ದು ಇತಿಹಾಸ.
ಒಂದು ಕಾಲದಲ್ಲಿ ಗ್ರಾಮೀಣ ಭಾಗದ ಈ ವೃತ್ತಿಯವರದು ಬಲು ಕಷ್ಟದ ಜೀವನ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ಹೋಗಿ ಎಲ್ಲರ ಕ್ಷೌರ ಮಾಡಿ ಸುಗ್ಗಿ ಕಾಲದಲ್ಲಿ ಅದಕ್ಕೆ ಪ್ರತಿಫಲವಾಗಿ ಅವರು ನೀಡುವ ಭತ್ತ, ರಾಗಿ ಕಾಳು ಕಡಿ ಪಡೆಯುವ ವತ೯ನೆ ಹೆಸರಿನ ಪದ್ದತಿ ಇತ್ತು. ಈಗ ಕಾಲ ಬದಲಾಗಿದೆ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು.
