ಗಂಡನನ್ನು ಕೊಂದು ಅವಳ ಮಾಂಗಲ್ಯವ ಕಸಿದವರ ಅವರು ಯಾರು?…ಕವಿ ಅಪ್ಪಯ್ಯ ಯು ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನಗಳು ತಪ್ಪದೆ ಮುಂದೆ ಓದಿ…
ಜಗವೆ ಎದ್ದು ಗೌರವಿಸುವ
ಧೀರನವನು ಯಾರದು/
ಹೊಳೆವಕಣ್ಣ ಬಿಳಿಯಗಡ್ಡ
ವಿರಮಿಸದ ಧೀರನು /
ಕಣ್ಣುಬಿಟ್ಟು ಗುಡುಗಿದರೆ
ವೈರಿಗಳೇ ಪಲಾಯನ
ಭ್ರಷ್ಟರೆದೆಯ ಕುಟ್ಟಿ ಮೆಟ್ಟಿ
ಯಮಲೋಕಕಟ್ಟೊ ಕಾಲನ /
ದೇಶದೊಳಗೆ ದುಷ್ಟಶಕ್ತಿ
ಅಟ್ಟಹಾಸ ಮೆರೆಯಲು
ಜಾತಿಜಾತಿಗಳ ಎತ್ತಿ ಕಟ್ಟಿ
ಒಡೆದುಬಿನ್ನ ಮಾಡಲು /
ದೇವಧೂತನಂತೆ ಧರೆಗೆ
ಇಳಿದುಬಂದನಾರದು? /
ದೇಶವೆಲ್ಲ ಕೇಸರಿಯ
ರಂಗು ಚೆಲ್ಲಬಂದನೆ
ಲೋಕವೆಲ್ಲ ಹಿಂದು ಹವಾ
ಹಬ್ಬಲೆಂದು ಹೊರಟನೆ /
ಮದುಚಂದ್ರಕೆ ಕಾಶ್ಮೀರಕೆ
ವಿಹಾರಕಾಗಿ ಬಂದವರ
ಗಂಡನನ್ನು ಕೊಂದು
ಅವಳ ಮಾಂಗಲ್ಯವ ಕಸಿದವರ
ನಿರ್ದಾಕ್ಷಿಣ್ಯ ದಿಂದ ತರಿದು
ಯಮಲೋಕಕಟ್ಟಿದವನ/
ದೋಕಲಾಮ್ ನಲ್ಲಿ ಚೈನ
ಕಾಲುಕೆರೆದು ಬಂದರೂ
ಆತನೊಮ್ಮೆ ಹೂಂಕರಿಸಲು
ಚದುರಿಹೋದರೆಲ್ಲರೂ /
ಪಾಕಿಗಳ ಅಟ್ಟಹಾಸ
ಮೆರೆಯುತಿದ್ದು ಗಡಿಯಲಿ
ಓಪರೇಷನ್ ಸಂಧೂರ ಎಂಬ
ಮಂತ್ರದಂಡ ಕೈಯಲಿ /
ಶತ್ರುಗಳೇ ನಡುಗುತಾರೆ
ಮೋದಿಹವಾ ಬೀಸಲು
ವಿರೋದ ಹಸ್ತ ಕರಗಿಹೋಯ್ತು
ಕಮಲನೆಟ್ಟು ಬೆಳೆಸಲು/
- ಅಪ್ಪಯ್ಯ ಯು – ಕಾಸರಗೋಡು
