ಜಗದೆಲ್ಲೆಡೆ ನಿನ್ನಯ ಜನುಮದಿನದ ಸಡಗರ…ನಿನ್ನ ನಾಮವೆ ಮೊಳಗಿದೆ ಎಲ್ಲೆಲ್ಲೂ ಭಕ್ತಿ ಸಾಗರ…ಕವಿ ಅವಿನಾಶ ಸೆರೆಮನಿ ಅವರು ರಾಮನವಮಿ ಪ್ರಯುಕ್ತ ಬರೆದ ಸುಂದರವಾದ ಕವನವನ್ನು ತಪ್ಪದೆ ಮುಂದೆ ಓದಿ….
ದಶರಥ ಸುತ ಸಕಲರ ಧಾತ
ಮನುಕುಲದ ಉದ್ಧಾರಕನೀತ
ಧರ್ಮ ರಕ್ಷಿಸುತ ಆದರ್ಶದಿ ಬದುಕುತ
ಜನರ ಕಣ್ಣು ತೆರೆಸಿದ ಸದ್ಗುಣವಂತ
ಕಷ್ಟಗಳ ಎದುರಿಸಿ ಸವಾಲು ಸ್ವೀಕರಿಸಿ
ದಿಟ್ಟತನದಿ ಮುನ್ನಡೆದ ಸರಳ ಸಾತ್ವಿಕ
ಮಮತೆ ತೋರಿ ಜನಮಾನಸದಿ ನೆಲೆಸಿ
ದೈವಿಕ ಸ್ವರೂಪದ ದರ್ಶನವಿತ್ತ ಪರಿಪಾಲಕ
ಧರ್ಮವೇ ಉಸಿರೆನುತ ಸತ್ಯದಿ ಸಾಗುತ
ಜಗವ ಬೆಳಗಿದ ಮಾನವೀಯತೆಯ ಹರಿಕಾರ
ಯುಗಾದಿ ಹಬ್ಬದ ತರವೇ ಜನ್ಮ ತಾಳುತ
ಪ್ರಕೃತಿಯ ಹರಸಿಹ ಸಹೃದಯಿ ಶ್ರೀರಾಮ ಚಂದಿರ
ಜಗದೆಲ್ಲೆಡೆ ನಿನ್ನಯ ಜನುಮದಿನದ ಸಡಗರ
ನಿನ್ನ ನಾಮವೆ ಮೊಳಗಿದೆ ಎಲ್ಲೆಲ್ಲೂ ಭಕ್ತಿ ಸಾಗರ
- ಅವಿನಾಶ ಸೆರೆಮನಿ – ಬೈಲಹೊಂಗಲ
