ತಮಿಳುನಾಡಿನಲ್ಲಿ ವಿಶೇಷ ಹಬ್ಬ ‘ಆಡಿಮಾಸದ ಕಾವಡಿ’ ಹಬ್ಬ..

ಜುಲೈ29 ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ. ತಮಿಳಿನಲ್ಲಿ ಆಡಿಮಾಸವಾಗಿದೆ. ಆಡಿಮಾಸ 13ರಂದು ಕಾವಡಿ ಹಬ್ಬ. ಮುರಗಸ್ವಾಮಿಯ ಹಬ್ಬ ಎಲ್ಲಾ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಗಳಲ್ಲಿ ಕಾವಡಿ ಹಬ್ಬ ಜಾತ್ರೆ ನಡೆಯುತ್ತದೆ.

ತಮಿಳುನಾಡಿನಲ್ಲಿ ಆಡಿ 12ರಂದು ಆಡಿಕೃತ್ತಿಕ ಕಾವಡಿ ಹಬ್ಬ ಆಚರಿಸುತ್ತಾರೆ. ಭರಣಿಕಾವಡಿ ಪಾಲಕಾವಡಿ ಪನ್ನೀರ್ ಕಾವಡಿ ಪುಷ್ಪಕಾವಡಿ ನವಿಲುಕಾವಡಿಗಳಿವೆ. ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಭಕ್ತಾದಿಗಳು ಭಕ್ತಿಯಿಂದ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನಕ್ಕೆ ಕಾವಡಿ ಎತ್ತುಕೊಂಡು ಹೋಗಿ ದೇವರಿಗೆ ಪೂಜೆ ಮಾಡುತ್ತಾರೆ.ದೇಶ ವಿದೇಶಗಳಲ್ಲಿರುವ ಮುರಗಸ್ವಾಮಿ ದೇವಸ್ಥಾನದಲ್ಲಿಯೂ ಕಾವಡಿ ಹಬ್ಬ ಆಡಿ 18 (ಪದೖಿನೇಟು) ಹಬ್ಬ ಆಚರಿಸುತ್ತಾರೆ. ತಮಿಳು ನಾಡಿನಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರಗಳು ತಮಿಳುನಾಡಿನಲ್ಲಿ ಕರೆಯಲಾಗುವ ಆರು ಪಡೖೆವೀಡು ಕ್ಷೇತ್ರಗಳ ಇದು ಮುರಗಸ್ವಾಮಿಯ ದೇವಾಲಯವೂ ಒಂದು ಆರು ಪಡೖೆವೀಡು ಅಂದರೇ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರು ದಿವ್ಯ ದೇವಾಲಯಗಳು ಅಥವಾ ನೆಲೆಗಳು ಎಂದರ್ಥ.

  • ಸ್ವಾಮಿಮಲೖೆ – Swamimalai
  • ಪಳನಿ – Palani
  • ತಿರುತ್ತಿನಿ – Thiruthani
  • ತಿರುಚೆಂದೂರ್ – Tiruchendur
  • ತಿರುಪ್ಪಾರನ್ ಕುನ್ರನ್ – Thiruparankundram
  • ಪಲಮುದ್ರಿಚೋಲೈ – Palhamudircholai ಈ ಎಲ್ಲಾ ದೇವಸ್ಥಾನಗಳು ತಮಿಳುನಾಡಿನಲ್ಲಿದೆ.

ಕರ್ನಾಟಕ ತಮಿಳುನಾಡು ದೇಶ ವಿದೇಶಗಳಲ್ಲಿ ಮತ್ತು ಸಿಂಗಾಪುರಂ ಮಲೇಶಿಯಾದಲ್ಲೂ ಶ್ರಿ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಗಳಿವೆ. ಎಲ್ಲಾ ದೇವಸ್ಥಾನಗಳಲ್ಲಿ ಕಾವಡಿ ಹಬ್ಬ ಆಚರಿಸುತ್ತಾರೆ.


  • ವಿ.ಎಂ.ಎಸ್.ಗೋಪಿ  – ಲೇಖಕರು, ಸಾಹಿತಿಗಳು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW