ನರೇಗಾ ಕೂಲಿಕಾರ್ಮಿಕರ ಗ್ರಾಮ ಆರೋಗ್ಯ ಅಭಿಯಾನ

ದುಡಿಯುವ ಜನರು ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ – ಶಾರದಾ ಜಾಲವಾಡಿ, ಮುಂದೆ ಓದಿ…

ಹಾವೇರಿ: ದುಡಿಯುವ ಜನರು ಆರೋಗ್ಯವಾಗಿ ಇರಬೇಗಿರಬೇಕೆಂಬ ಉದ್ದೇಶದಿಂದ ಸರಕಾರವು, ಜನರು ದುಡಿಯುವಂತಹ ಸ್ಥಳದಲ್ಲೇ ಆರೋಗ್ಯ ತಪಾಸಣೆ ನಡೆಸುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೂರ್ಗುಂದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಶಾರದಾ ಜಲವಾಡಿ ಕರೆ ನೀಡಿದರು.

ತಾಲ್ಲೂಕಿನ ‌ ಕೂರ್ಗುಂದ ಗ್ರಾಮ ಪಂಚಾಯಿತಿಯ ಕೂರಗುಂದ ಗ್ರಾಮದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿವೃದ್ಧಿ ‌ಹಾಗೂ ಕರ್ನಾಟಕ ಹೆಲ್ತ್ ‌ಪ್ರಮೋಷನ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ನರೇಗಾ ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

 

ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಬಡ ಜನರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಜನತೆ ಆರೋಗ್ಯವಾಗಿದ್ದರೆ ಗ್ರಾಮ, ರಾಜ್ಯ ಹಾಗೂ ದೇಶ ಆರೋಗ್ಯವಾಗಿರುತ್ತದೆ ಎಂದರು.

ಪ್ರಾಸ್ತಾವಿಕವಾಗಿ ತಾಲೂಕ್ ಪಂಚಾಯತಿಯ ಮಾಹಿತಿ ಶಿಕ್ಷಣ ಸಂಯೋಜಕರಾದ ಗಿರೀಶ್ ಬೆನ್ನೂರು ಮಾತನಾಡಿ ಕೂರಗುಂದ ಗ್ರಾಮದ ಚಾನೆಲ್ ಸೇತುವೆಯಿಂದ ರೋಡಿನ ಬ್ರಿಜ್ವ ವರೆಗೆ ಹಳ್ಳ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿರುವ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲಾ ಕೂಲಿಕಾರರು ಬಿಪಿ ಶುಗರ್ ಎಲ್ಲರೂ ಕಡ್ಡಾಯವಾಗಿ ಚೆಕ್ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಸರ್ವ ಸದಸ್ಯರು ಸಮುದಾಯ ಆರೋಗ್ಯ ಅಧಿಕಾರಿ ಮಂಜುನಾಥ್ ದೊಡ್ಮನಿ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.


  • ಆಕೃತಿ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading