ಫೇಕಿನ ನರ್ತನ ಕವನ – ಹೆಚ್. ಪಿ. ಕೃಷ್ಣಮೂರ್ತಿ

ಎಐ ಕೃಪೆಯಿಂದ ಎಪ್ಪತ್ತರಲ್ಲೂ ಮತ್ತೆ ಇಪ್ಪತ್ತರಂತೆ ಕಾಣುವ ಹಂಬಲ, ಎಲ್ಲೆಡೆ ಈಗ ಎಐ ಯದ್ದೆ ಹಾವಳಿ. ಯಾವುದು ವಾಸ್ತವ ಯಾವುದು ನೈಜ ನಿರ್ಧರಿಸುವುದೇ ಕಷ್ಟ. ಎ ಐ ಕುರಿತು ಕವಿ ಹೆಚ್. ಪಿ. ಕೃಷ್ಣಮೂರ್ತಿ ರಚನೆಯ ನಾಲ್ಕು ಹನಿಗವಿತೆಗಳು, ತಪ್ಪದೆ ಮುಂದೆ ಓದಿ…

ಈಗ ಎಲ್ಲಿ ನೋಡಿದರೂ
A I ನದೇ
ಸಂಚಲನ
ಇದು ಫ್ಯಾಕ್ಟಿನ ತಲೆಯ ಮೇಲೆ
ಹೊಡೆದಂತೆ
ಫೇಕಿನ ನರ್ತನ!

ವಯಸಾದ ಸುಂದರಿಯರ
ಒಲವೆಲ್ಲ ಈಗ
A I ಕಡೆಗೆ
ಎಪ್ಪತ್ತರಲ್ಲೂ ಮತ್ತೆ ಇಪ್ಪತ್ತರಂತೆ
ಕಾಣುವ ಹಂಬಲ
ಸಾಯುವುದರೊಳಗೆ!!

ಹದಿನಾರರ ಸುಂದರಿ ಎಂದು
ಆಕೆಯ ಮುಖಪಟದಲಿ
ಸ್ನೇಹಿತನಾದ
ಕುತೂಹಲದ ಭೇಟಿಯಲೂಮ್ಮೆ
ಅರವತ್ತರ ಆ ಮುದುಕಿಯ ಕಂಡು
ಮೂರ್ಛೆ ಹೋದ!

FB ಯಲ್ಲಿನ ಸುಂದರ ಮುಖಗಳನ್ನು
ನೋಡಿ ಆಗಬೇಡಿರಿ ಎಂದೂ
ಎಮೋಷನ್ನು
ವಾಸ್ತವದಲ್ಲದು ಅರವತ್ತರ ಅಜ್ಜಿಗಳ
AI ತಂತ್ರದಲ್ಲರಳಿದ ಫೋಟೋಗಳ
ಪ್ರಮೋಷನ್ನು!


  • ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW