ಆಂಟೀಬಯೋಟಿಕ್ ಔಷಧಿಯ ಎಂದರೆ ಏನು? ಅದರ ಬಗ್ಗೆ ಹೆಚ್ಚಿಲ್ಲದಿದ್ದರು ಸ್ವಲ್ಪವಾದರೂ ತಿಳಿದುಕೊಂಡರೆ ಒಳ್ಳೆಯದು. ಒಂದಷ್ಟು ಮಾಹಿತಿಯನ್ನು ಲೇಖಕಿ ನಾಗರತ್ನ ಜಿ ರಾವ್ ಅವರು ನೀಡಿದ್ದಾರೆ..ಓದಿ ಅಭಿಪ್ರಾಯ ಹಂಚಿಕೊಳ್ಳಿ…
ಉಮಾ ೨೦ ರ ತರುಣಿ. ಅವಳಿಗೆ ಹಿಂದೆ ಎರಡು , ಮೂರು ತಿಂಗಳಿಂದ ಕಿವಿಮಂದವಾಗಿ ಕೇಳುತ್ತಿದ್ದು ಇತ್ತೀಚಿಗೆ ಪೂರ್ತಿ ಕೇಳದಂತಾಗಿತ್ತು. ಕಿವಿಯೊಳಗಿನ ಅಂಗಾಂಗಗಳೆಲ್ಲಾ ಸಮರ್ಪಕವಾಗೇ ಇದ್ದರೂ, ಈ ರೀತಿಯ ಶ್ರವಣಹಾನಿಗೆ ಕಾರಣವೇನೆಂದು ಕೇಳುತ್ತಾ ಹೋದಾಗ ತಿಳಿದ ಸತ್ಯ. ಉಮಾ ಐದು ವರ್ಷದ ಕೆಳಗೆ ಶ್ವಾಸ ಸಂಬಂಧಿತ ಕಾಯಿಲೆಗೆ, ಮೆಡಿಕಲ್ ಸ್ಟೋರಿನಿಂದ ಪಡೆದ Erithromycin ಎಂಬ ಆಂಟಿಬಯೋಟಿಕನ್ನು ಸತತವಾಗಿ ಬಳಸುತ್ತಲೇ ಇದ್ದಳು. ಆ ದುರ್ಬಳಕೆಯ ಪರಿಣಾಮವೇ ಇಂದು ಅವಳಿಗೆ ಶಾಶ್ವತವಾಗಿ ಕಿವಿ ಕೇಳದಂತೆ ಮಾಡಿತ್ತು.

ಫೋಟೋ ಕೃಪೆ : Petplace
ಜನಸಾಮಾನ್ಯರು ಪದೇಪದೇ ಕೇಳುವಪದ ಆಂಟೀಬಯೋಟಿಕ್. (antibiotics). ಹಾಗೆಂದರೇನು?
ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ, ನಮ್ಮ ದೇಹದ ರಕ್ಷಕರಾದ ಬಿಳಿರಕ್ತಕಣಗಳು ಹೋರಾಟ ಪ್ರಾರಂಭಿಸುತ್ತವೆ.ಆದರೆ ರೋಗಾಣುಗಳ ಶಕ್ತಿ ಜಾಸ್ತಿಯಿದ್ದಲ್ಲಿ,ಮೀಸಲುಪಡೆಯಂತೆ ಕೆಲಸಮಾಡುವುದು ನಮಗೆ ವೈದ್ಯರು ನೀಡುವ ಆಂಟಿಬಯೋಟಿಕ್ಸ.ಇವು ರಾಸಾಯನಿಕ ವಸ್ತುಗಳಾಗಿದ್ದು ಹೆಚ್ಚಿನವು ಪಾಚಿ ಅಥವಾ ಫಂಗಸ್ನಿಂದ ತಯಾರಾದವು.ಕೆಲವೊಂದು ಪೂರ್ತಿ ರಸಾಯನಿಕ ವಸ್ತುಗಳಿಂದ ತಯಾರಿಸಲ್ಪಟ್ಟವೂ ಇವೆ.

ಫೋಟೋ ಕೃಪೆ : Thoughtco
೧೯೨೮ ರಲ್ಲಿ ಅಲೆಗ್ಸಾಂಡರ್ ಫ್ಲೆಮಿಂಗ್, ಪೆನ್ಸಿಲಿನ್ ಎನ್ನುವ ಮೊತ್ತಮೊದಲ ಆಂಟಿಬಯೋಟಿಕ್ ಕಂಡುಹಿಡಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಲಕ್ಷಾಂತರ ಜನರ ಪ್ರಾಣವನ್ನು ಇದು ಉಳಿಸಿದಕ್ಕಾಗಿ ೧೯೪೫ ರಲ್ಲಿ ನೋಬೆಲ್ ಪ್ರಶಸ್ತಿ ಕೂಡ ಪಡೆದರು. ಅಂದಿನ ಸಮಾರಂಭದ ಭಾಷಣದಲ್ಲಿ ಆತಹೇಳಿದ್ದು ”ಮುಂದೊಂದು ದಿನ ಆಂಟಿಬಯಾಟಿಕ್ ದುರ್ಬಳಕೆಯಿಂದ ದೇಹವು ಪ್ರತಿಸ್ಪಂದನೆಯನ್ನು ಕಳೆದುಕೊಳ್ಳುತ್ತದೆ. ಈಗಿನಿಂದಲೇ ಎಚ್ಚೆತ್ತುಕೊಳ್ಳಿ”… ಎಲ್ಲಾ ಒಳ್ಳೆಯ ಮಾತು ಮರೆವಂತೆ, ಜನ ಈ ಮಾತನ್ನೂ ಮರೆತರು. ಇಂದು ಆಂಟಿಬಯೋಟಿಕ್ಸ ದುರ್ಬಳಕೆಯಿಂದ, ದೇಹ ಪ್ರತಿಸ್ಪಂದನೆಯನ್ನು ಕಳೆದುಕ್ಕೊಳ್ಳುತ್ತಿದೆ. ಕಾರಣ ಅದರ ಬಗೆಗೆ ಸರಿಯಾಗಿ ತಿಳಿಯದೇ ದುರ್ಬಳಕೆ ಮಾಡುತ್ತಿರುವುದೇ ಆಗಿದೆ.
ರೋಗಗಳು, ಬ್ಯಾಕ್ಟೀರಿಯಾ, ವೈರಸ್ ನಿಂದ ಸಂಭವಿಸುತ್ತದೆ. ಆಂಟೀಬಯೋಟಿಕ್ ಗಳು ಬ್ಯಾಕ್ಟೀರಿಯಾ ವಿರುದ್ಧ ಹೋರಾಡಬಲ್ಲದೇ ಹೊರತಾಗಿ ವೈರಸ್ ವಿರುದ್ಧವಲ್ಲ. ಬಹಳ ಜನಕ್ಕೆ ತಿಳಿಯದ ವಿಪತ್ಕಾರೀ ಅಂಶ ದುರ್ಬಳಕೆಯ ಮೊದಲ ಹೆಜ್ಜೆ. ಆಂಟೀಬಯೋಟಿಕ್ ಗಳು ಬ್ಯಾಕ್ಟೀರಿಯಾವನ್ನು ಸಾಯಿಸುತ್ತದೆ. ಇಲ್ಲಾ ಅದು ಉಲ್ಬಣಗೊಳ್ಳದಂತೆ ತಡೆದು ಶಕ್ತಿ ಹೀನವಾಗಿಸುತ್ತದೆ. ಇದರ ಜೊತೆ ಜೊತೆಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸದಾ ಬೆಂಗಾವಲಾಗಿ ಇದ್ದೇ ಇರುತ್ತದೆಯೆಂದು ಮರೆಯಬೇಡಿ.
ಗ್ರಾಂ ಪಾಸಿಟೀವ್, ಗ್ರಾಂ ನೆಗೆಟೀವ್, ಏರೋಬಿಕ್, ಅನರೋಬಿಕ್ ಈ ಎಲ್ಲಾ ಬ್ಯಾಕ್ಟೀರಿಯಾಗಳು ಮತ್ತು ಆಂಟಿಬಯೋಟಿಕ್ಸ ಬಗ್ಗೆ ಹೇಳ ಬೇಕೆಂದರೆ ನೀವೂ ವೈದ್ಯಕೀಯವಿಜ್ಞಾನ ಓದ ಬೇಕಾಗುತ್ತದೆ. ಆದ್ದರಿಂದ ಮಾಡಬಹುದಾದದ್ದು ಮಾತ್ರ ಹೇಳುತ್ತೇನೆ.

ಫೋಟೋ ಕೃಪೆ : Todayonline
- ಆಂಟಿಬಯೋಟಿಕ್ಸ ಸೇವನೆಗೆ ಮುನ್ನ, ರೋಗ ತಪಾಸಣೆ ನಡೆಸಿ, ರೋಗವು ವೈರಸ್ ನಿಂದಾಗಿಯೋ, ಬ್ಯಾಕ್ಟೀರಿಯಾದಿಂದಲೋ ಖಚಿತಪಡಿಸಿಕೊಳ್ಳಿ. (“ಡಾಕ್ಟ್ರು ಹೋದಕೂಡಲೇ ಇಷ್ಟುದೊಡ್ಡ ಪಟ್ಟಿ ಬರೀತಾರೆ. ಅದ್ನ ಮಾಡ್ಸು,ಇದ್ನ ಮಾಡ್ಸೂಂತ..ಕಾಸು ಯಾರು ಕೊಡ್ತಾರೆ??”)
- ನೆಗಡಿ, ಗಂಟಲು ಕೆರೆತ, ಬಹಳಷ್ಟು ರೀತಿಯ ಕೆಮ್ಮುಗಳಿಗೆ (ಕೆಮ್ಮಿನಲ್ಲೂ ವಿಧಗಳಿವೆ) ಆಂಟಿಬಯಾಟಿಕ್ಸ ಬೇಕಾಗುವುದೇ ಇಲ್ಲ. ಇದನ್ನು URI (upper respiratory tract infection ಎನ್ನುತ್ತೇವೆ. ವೈದ್ಯರು ಬರೆಯದಿದ್ದರೂ, ಈ ರೀತಿಯ ತೊಂದರೆಗಳಿಗೆ ರೋಗಿಯೇ ಸ್ವಯಂ ತಾನು ನಿರ್ಧರಿಸಿ, ಆಂಟಿಬಯೋಟಿಕ್ ಸೇವಿಸಿದರೆ ಬೇಗ ವಾಸಿಯಾಗುವುದೆಂಬ ಭ್ರಮೆಯಲ್ಲಿ ಸೇವಿಸುತ್ತಾರೆ. ಮುಚ್ಚಿಟ್ಟು ವೈದ್ಯರನ್ನೂ ಕಕ್ಕಾ ಬಿಕ್ಕಿಯಾಗಿಸುತ್ತಾರೆ.
- ವೈದ್ಯರು ರೋಗಿಯ ರೋಗದ ತೀವ್ರತೆ, ರೋಗಿಯ ದೇಹದ ತೂಕ ಗಮನಿಸಿ, ಆಂಟಿಬಯೋಟಿಕ್ ಮಾತ್ರವನ್ನು ನಿರ್ಧರಿಸುತ್ತಾರೆ. ಅದನ್ನು ಬದಲಿಸಬಾರದು. (“ಅಯ್ಯೋ ಅವರಿಗೇನು ತಿಳಿಯತ್ತೆ??ಇನ್ನೂ 20 ವರ್ಷದ ಕೂಸು. ೫೦೦ mg ಕೊಟ್ಟಿದ್ದಾರೆ. ಅದಕ್ಕೆ ಮುರಿದುಕೊಟ್ಟೆ””!!???ಎನ್ನಬಾರದು)
- ಒಂದೇ ಮಾತ್ರೆಗೆ ರೋಗವಾಸಿಯಾದಾಗ ಉಳಿದ ಮಾತ್ರೆಗಳನ್ನು ತೆಗೆದುಕ್ಕೊಳ್ಳುವುದಿಲ್ಲ.ಕಾಯಿಲೆಯೇ ಇಲ್ಲದ ಮೇಲೆ ಔಷಧಿ ಯಾಕೆ??ಹಲವರು ವಾದ ಮಾಡುತ್ತಾರೆ.ಆದರೆ ಆಂಟಿಬಯೋಟಿಕ್ಸ ಡೋಸೇಜ್ ಪೂರ್ತಿ ಮಾಡದಿದ್ದರೆ,ಮುಂದೆ ಅದು ಶಕ್ತಿಹೀನವಾಗುತ್ತದೆ.resistence ಬಂದು ಅದಕ್ಕಿಂತ ಹೆಚ್ಚಿನ ಆಂಟಿಬಯೊಟಿಕ್ ನೀಡುವ ಪ್ರಸಂಗ ಬರುತ್ತದೆ.ಎಲ್ಲಾ ಆಂಟಿಬಯೋಟಿಕ್ಸಗೂ ರೆಸಿಸ್ಟೆನ್ಸ ಬಂದರೆ,ಮುಂದೆ…????(ಶಿವಪ್ಪ ಕಾಯೋ ತಂದೆ ಎಂದು ಕೈಲಾಸದಲ್ಲೇ ಹಾಡಬೇಕು).ಭಾರತ ಎದುರಿಸುತ್ತಿರುವ ದೊಡ್ಡ ಸವಾಲೆಂದರೆ ಆಂಟಿಬಯೋಟಿಕ್ಸ ರೆಸಿಸ್ಟೆನ್ಸ.ವೈದ್ಯರು ೧೦ ಮಾತ್ರೆ ಬರೆದರೆ, ೫ ತೊಗೋತಾರೆ. ೩ ಪೂರ್ತಿಮಾಡುತ್ತಾರೆ. ೧ ಮಾತ್ರೆಗೆ ಹೋಗುವ ಕಾಯಿಲೆಗೆ ೧೦ ಬರೆದುಕ್ಕೊಟ್ಟು ,ಕೆಮಿಸ್ಟನಿಂದ ಡಾಕ್ಟ್ರು ಕಮೀಶನ್ ತೊಗೋತಾರೆಂದು ಹಳಿಯುವವರೂ ಇದ್ದಾರೆ.ಬೇರೆದೇಶಗಳಲ್ಲಿ ೧೦ ಮಾತ್ರೆಗಳ ಶೀಟನ್ನು ಹರಿಯುವಂತಿಲ್ಲ.ಭಾರತದಲ್ಲೂ ಆ ನಿಯಮ ಇದೆಯಾದರೂ ಪಾಲಿಸುವುದಿಲ್ಲ.ಮತ್ತೊಮ್ಮೆ ಹೇಳುತ್ತೇನೆ.ದಯವಿಟ್ಟು ವೈದ್ಯರು ಹೇಳಿದ ಡೋಸೇಜ್ ಮುಗಿಸಿ.
- ”ಆಂಟಿಬಯೋಟಿಕ್ಸ ಕೊಡಬೇಡಿ ಡಾಕ್ಟ್ರೆ.ತುಂಬಾ ಸಂಕಟವಾಗುತ್ತೆ.ಬೇಕಾದ್ರೆ ಇಂಜಕ್ಷನ್ ಕೊಡಿ” ಕೆಲವು ರೋಗಿಗಳು ಹೇಳುವುದೂ ಉಂಟು.ನಿಜ ಕೆಲವೊಂದು ಆಂಟಿಬಯೋಟಿಕ್ಗಳು ಕೆಲವರಿಗೆ ಹೊಟ್ಟೇತೊಳಸು,ವಾಂತಿ,ತಲೇಸುತ್ತು,ತುರಿಕೆ ,ಭೇದಿ ಆಗಬಹುದು.ಹೀಗೆ ಆಗುವುದೆಂದು ಹೇಳಿದಾಗ,ಅದಕ್ಕೆ ಸರಿಯಾದ ಔಷಧಿಯನ್ನು ಒತ್ತಾಸೆಯಾಗಿರಿಸಿ ವೈದ್ಯರು ಔಷಧಿ ನೀಡುತ್ತಾರೆ.
- ಆಂಟಿಬಯೋಟಿಕ್ಗಳು ಕೇವಲ ಮಾತ್ರೆಗಳಲ್ಲ.ಇದು ಇಂಜಕ್ಷನ್,ಆಯಿಂಟ್ಮೆಂಟ್,ಕ್ರೀಂಗಳ ರೂಪದಲ್ಲಿ ಸಹ ಬರುತ್ತವೆ.ಯಾವುದೇ ಆಯಿಂಟ್ಮೆಂಟ್,ಕ್ರೀಂ ಹಚ್ಚಿಕ್ಕೊಳ್ಳುವ ಮುನ್ನ ಮುಂಗೈಗೆ ಅಥವಾ ಕಿವಿಹಿಂದೆ ಸ್ವಲ್ಪ ಸವರಿಕ್ಕೊಳ್ಳಿ.ಅಲರ್ಜಿ ಅಥವಾ ಬೇರಾವ ದುಶ್ಪರಿಣಾಮಗಳು ಕಂಡುಬರದಿದ್ದಲ್ಲಿ ಮಾತ್ರ ಸವರಿಕ್ಕೊಳ್ಳಿ. ಟೆಸ್ಟಡೋಸ್ ಕೊಟ್ಟೇ ವೈದ್ಯರು ಇಂಜಕ್ಷನ್ ನೀಡುವುದನ್ನು ಗಮನಿಸಿರುತ್ತೀರಿ.
- “ಏನಾಗಿದೇ ಡಾಕ್ಟ್ರೇ?”ಎಂದು ಕೇಳಿದಾಗ ವೈದ್ಯರು ವೈರಲ್ ಇನ್ಫೆಕ್ಷನ್ ಎಂದು ಹೇಳುತ್ತಾರೆ. ಆದರೂ ಆಂಟಿಬಯೋಟಿಕ್ಸ ಬರೆದಿದ್ದರೆ, ವೈರಲ್ ನಂತರದ ದಿನಗಳಲ್ಲಿ ಬ್ಯಾಕ್ಟೀರಿಯಲ್ ಆಗಿ ಉಪದ್ರವ ಕೊಡುವ ಚಿಹ್ನೆಗಳಿದ್ದರಷ್ಟೇ ನೀಡಿರುತ್ತಾರೆ.
- “ಮಿಲ್ಕ ಇಂಜಕ್ಷನ್ ಕೊಡೀ ಡಾಕ್ಟ್ರೇ”ಎಂದು ಹಲವರು ಈಗ್ಲೂ ಕುರುಗಳೆದ್ದಾಗ ಬರುತ್ತಾರೆ. ಇದು PPF (forted procaine penciling). pencine ಬಳಕೆ ಈಗ ಕಡಿಮೆಯಾಗಿದೆ. ಸೈಡ್ ಎಫೆಕ್ಟ್ಸ ಜಾಸ್ತಿ ಎಂದಷ್ಟೇ. ಆದರೂ ಹೃದ್ರೋಗಿಗಳು penidure injection ತೆಗೆದುಕ್ಕೊಳ್ಳುವುದು ಕೇಳಿರುತ್ತೀರಿ. ಜೀವದಾಯಕ ಆಂಟಿಬಯಾಟಿಕ್ಸ ಮಾರಕವಾಗದಂತೆ ಕಾಪಾಡಿಕ್ಕೊಳ್ಳುವುದು ನಮ್ಮೆಲ್ಲರ ಹೊಣೆ.
- ಲಾಕ್ಷಣಿಕ ಚಿಕಿತ್ಸೆ(symptomatic treatment)ಗೆ ನೀವು ವೈದ್ಯರಲ್ಲಿ ಹೋದಲ್ಲಿ,ನಿಮಗೆ ಭಾಗಶಃ antibiotics ಬೇಕಾಗುವುದಿಲ್ಲ.
- ಜನೌಷಧಿ ಕೇಂದ್ರಗಳಲ್ಲಿ ವೈದ್ಯರು ಬರೆದ , antibiotics ಸಿಗುತ್ತವೆ. ಕಡಿಮೆ ಬೆಲೆಗೆ. ವೈದ್ಯರಿಗೆ ತಂದು ತೋರಿಸಿ ಬಳಸಿ. ನೀವೂ, ಪರ್ಸ ಎರಡೂ ಸೇಫ್.
- ನಾಗರತ್ನ ಜಿ ರಾವ್.