‘ಆತಂಕದ ಬಲೆ’ ಸಣ್ಣಕತೆ

ಗಂಡ ಅರುಣ ಅಮೇರಿಕಾಕ್ಕೆ ಹಾರಿದ ಮೇಲೆ ಸಂಧ್ಯಾಳಿಗೆ ವಸಂತ ಹತ್ತಿರವಾಗತೊಡಗಿದ. ವಸಂತ ಕೂಡಾ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ. ಸಂಧ್ಯಾಳ ಒಂಟಿತನಕ್ಕೆ ವಸಂತ ಜೊತೆಯಾದ. ಮುಂದೇನಾಯಿತು ಗುರು ಮೂರ್ತಿ ಅವರ ಆತಂಕದ ಬಲೆಯನ್ನು ತಪ್ಪದೆ ಮುಂದೆ ಓದಿ…

ಅರುಂಧತಿ ನಕ್ಷತ್ರ ಅಗೊ ಅಲ್ಲಿದೆ, ಆಕಾಶದತ್ತ ಕೈ ಚಾಚಿ ತೋರಿದರು ಪುರೋಹಿತರು.ಆ ಕಡೆ ಕೈ ಚಾಚಿದ ಅರುಣ್.ಅವನು ಕೈಚಾಚಿದಡೆ ತಲೆ ಎತ್ತಿ ನೋಡಿದಳು ಸಂಧ್ಯಾ. ಕ್ಯಾಮೇರದವನು ಕಿಕ್ಲ್ ಮಾಡಿದ.

ಎಲ್ಲಾ ಮದುವೆಯಲ್ಲಿನ ಅರುಂಧತಿ ನಕ್ಷತ್ರ ತೋರಿಸುವ ಶಾಸ್ತ್ರಕ್ಕೆ ತೆರೆ ಬಿತ್ತು. ಇನ್ನೂ ಹೆಣ್ಣು ಒಪ್ಪಿಸುವ ಕಾರ್ಯಕ್ರಮ. ದೊಡ್ಡ ಜಮಖಾನೆ ಹಾಸಲಾಯಿತು. ಒಬ್ಬೊಬ್ಬರೆ ಬಂದು ಹೆಣ್ಣನ್ನು ಒಪ್ಪಿಸಿದರು. ಎಲ್ಲರ ಕಣ್ಣುಗಳು ಮಂಜಾದವು. ಕೊನೆಗೆ ಸಂಧ್ಯಾಳ ಅಪ್ಪ ಮಗಳನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅರುಣ್ ಗೆ ಮಗಳನ್ನ ಒಪ್ಪಿಸಿದರು. ಕಣ್ಣಲ್ಲಿ ಕಣ್ಣೀರು ಉಕ್ಕಿ ಹರಿಯಿತು. ಇಪ್ಪತ್ತೆರಡು ವರ್ಷಗಳ ಕಾಲ ಸಾಕಿ ಬೆಳೆಸಿದ ಮಗಳು ,ಇನ್ನೊಬ್ಬರ ಮನೆಗೆ ಹೋಗುವಳಲ್ಲ ಎಂಬ ದುಖದ ಕಡಲು ಉಕ್ಕಿ ಹರಿಯಿತು.ಅಪ್ಪನ ಕಣ್ಣೀರು ಕಂಡು ಸಂಧ್ಯಾಳ ಕಣ್ಣಲ್ಲಿ ಕಣ್ಣೀರ ಹನಿಗಳು ತುಂಬಿಕೊಂಡವು.

ಹೆಣ್ಣು ಒಪ್ಪಿಸುವಾಗ ಸಂಧ್ಯಾಳ ಅತ್ತೆ, ಕಣ್ಣೀರು ಹಾಕಬೇಡಿ ನಗುನಗುತ್ತಾ ಕಳುಹಿಸಿಕೊಡಿ, ಮಗಳನ್ನು ನಿಮಕ್ಕಿಂತ ಚೆನ್ನಾಗಿ ನೋಡಿ ಕೊಳ್ತಿವಿ ಎಂದು ಪದೇ ಪದೇ ಭರವಸೆಯನ್ನು ಕೊಟ್ಟರು.ಆದರೂ ಹೆಣ್ಣಿನ ಕಡೆಯವರ ಕಣ್ಣುಗಳು ಕೆಂಪಾಗಿ ಕಣ್ಣೀರಿನಿಂದ ತುಂಬಿ ತುಳುಕುತ್ತಿದ್ದವು. ಹೊಸ್ತಿಲ ಮೇಲಿದ್ದ ಸೇರನ್ನು ತನ್ನ ಬಲಗಾಲಲ್ಲಿ ಒದ್ದು,ತನ್ನ ಬಲಗಾಲನ್ನು ಇಟ್ಟು ಗಂಡನ ಮನೆ ಪ್ರವೇಶ ಮಾಡಿದಳು ಸಂಧ್ಯಾ.

ಫೋಟೋ ಕೃಪೆ : google

ಮದುವೆಯಾದ ಒಂದು ತಿಂಗಳಿಗೆ ಅಮೆರಿಕಾಗೆ ಹೊರಟು ನಿಂತ ಅರುಣ್. ಒಂದು ತಿಂಗಳ ಕಾಲ ಗಂಡನ ಜೊತೆ ಸುಖದ ಕ್ಷಣಗಳನ್ನು ಅನುಭವಿಸಿದ ಸಂಧ್ಯಾಳಿಗೆ ಗಂಡನ ಬಿಟ್ಟು ಇರದಾಯಿತು.ತನ್ನ ಬಿಟ್ಟು ಅಮೆರಿಕಾಗೆ ಹೋಗದಿರಿ ಎಂದು ಹಟ ಹಿಡಿದು ಕುಳಿತಳು.ಹಟ ಹಿಡಿದು ಕುಳಿತ ಸೊಸೆಗೆ ಸಮಾಧಾನವನ್ನು ಹೇಳಿ ಸಮಾಧಾನಪಡಿಸಿದವಳು ಅವಳ ಅತ್ತೆ.
ಅತ್ತೆಯ ಸಮಾಧಾನದ ಮಾತುಗಳು ಸಂಧ್ಯಾಳ ಹಟವನ್ನು ಸಡಿಲಗೊಳಿಸಿತು. ಗಂಡನನ್ನು ವಿಮಾನ ನಿಲ್ದಾಣಕ್ಕೆ ಹೋಗಿ ಕಳುಹಿಸಿ ಬಂದಳು ಸಂಧ್ಯಾ. ಮಗ ಅಮೆರಿಕಾಗೆ ಹೋದ ಮರುದಿನದಿಂದಲೇ ಸೊಸೆಯ ವಿಸಾಗಾಗಿ ಬೆನ್ನು ಹತ್ತಿದ್ದರು ಸಂಧ್ಯಾಳ ಮಾವ.

ಆರು ತಿಂಗಳು ಕಳೆದರು ವಿಸಾ ಸಿಗಲಿಲ್ಲ. ಒಂದಲ್ಲ ಒಂದು ಕಾರಣಕ್ಕಾಗಿ ವಿಸಾ ದೊರೆಯದಾಯಿತು. ಪ್ರತಿ ದಿನ ಗಂಡನ ಜೊತೆ ಮಾತನಾಡುವುದನ್ನು ಬಿಟ್ಟರೆ, ಅವನಿದ್ದಡೆಗೆ ಹೋಗುವ ಆಸೆ ಮರೀಚಿಕೆ ಆಗ ತೊಡಗಿತು. ಮನೆ ತುಂಬಿದ ಸೊಸೆ ಮಗನ ಜೊತೆ ಸಂಸಾರ ಮಾಡಳಾರದೆ ಹೋದಳಲ್ಲ ಎಂಬ ಚಿಂತೆ ಕಾಡತೊಡಗಿತು ಸಂಧ್ಯಾಳ ಅತ್ತೆಗೆ. ಮಗನೊಡನೆ ಮಾತನಾಡಿದಳು. ಪ್ರಯೋಜನವಾಗಲಿಲ್ಲ. ಗಂಡ ದೂರವಾಗ ತೊಡಗಿದಾಗ ಹತ್ತಿರನಾದವನು ಪಕ್ಕದ ಮನೆಯ ವಸಂತ್.

ವಸಂತ್ ಇಂಜಿನಿಯರ್, ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೈತುಂಬಾ ಸಂಬಳ, ನೋಡಲು ಸುಂದರನಾಗಿದ್ದ. ಅವನ ಜೊತೆ ಸಲುಗೆ ಬೆಳೆಯಿತು. ಸಲುಗೆ ಇಬ್ಬರನ್ನು ಹತ್ತಿರಗೊಳಿಸಿತು. ಇಬ್ಬರು ರಜಾ ದಿನಗಳಲ್ಲಿ ಮಾಲ್ ಗಳ ಸುತ್ತಾಡ ತೊಡಗಿದರು. ಈ ಇಬ್ಬರ ಸುತ್ತಾಡುವಿಕೆ ಸರಿ ಬರಲಿಲ್ಲ ಸಂಧ್ಯಾಳ ಅತ್ತೆಗೆ. ಸೊಸೆಯು ವಸಂತನ ಹಿಂದೆ ಸುತ್ತಾಡುವುದ ಕಂಡು ಮಗನ ದೂರವಾಗುವಿಕೆಯೇ ಈ ಇಬ್ಬರ ಸನಿಹಕ್ಕೆ ಕಾರಣ ಎಂಬುದನ್ನು ಅರಿತು ಮಗನನ್ನು ಭಾರತಕ್ಕೆ ಬರುವಂತೆ ಒತ್ತಾಯಿಸಿದರು.

ಗಂಡ ಹಿಂತಿರುಗಿದ್ದನ್ನು ಕಂಡು ಖುಷಿಪಟ್ಟಳು ಸಂಧ್ಯಾ. ಆರು ತಿಂಗಳ ನಂತರ ಗಂಡ ತನ್ನ ತವುರು ನಾಡಿಗೆ ಹಿಂತಿರುಗಿದಾಗ ಎಲ್ಲರಿಕ್ಕಿಂತ ಖುಷಿಪಟ್ಟಳು ಸಂಧ್ಯಾ. ನೀವು ನನಗೆ ವಿಸಾ ಸಿಗದಿದ್ದರೆ ಅಮೆರಿಕಾಗೆ ಹೋಗದಿರಿ ಎಂದು ಗಂಡನ ಎದೆಗೆ ಒರಗಿಕೊಂಡು ಕೇಳಿದಳು ಸಂಧ್ಯಾ. ಈ ವಿಸಾಕ್ಕಾಗಿ ನಾನೆ ಪ್ರಯತ್ನ ಮಾಡುವೆ ಎಂದು ಹೆಂಡತಿಗೆ ಭರವಸೆ ಕೊಟ್ಟ ಅರುಣ್.
ತನ್ನ ಹಾಗು ವಸಂತ್ ನ ಸ್ನೇಹದ ಬಗ್ಗೆಯೂ ಹೇಳಿದಳು ಸಂಧ್ಯಾ. ತಾನು ಅವನ ಸ್ನೇಹ ಬಯಸಿದರೆ, ಅವನು ಅದಕ್ಕಿಂತಲೂ ಹೆಚ್ಚಿನ‌ ಆಸೆ ಹೊಂದಿದ್ದಾನೆ ಎಂದು ಸೂಕ್ಷ್ಮವಾಗಿ ಅವನಾಸೆಯನ್ನು ಹೇಳಿದಳು ಗಂಡನಿಗೆ ಸಂಧ್ಯಾ. ಈ ಇಬ್ಬರ ನಡುವಿನ ಒಡನಾಟ , ತನ್ನ ಸಂಸಾರಕ್ಕೆ ದಕ್ಕೆ ತರುವುದೆಂದು ಊಹಿಸಿದ ಅರುಣ್. ಈ ಬಾರಿ ವಿಸಾ ಸಿಗದೆ ತಾನು ಸಂಧ್ಯಾಳನ್ನು ತನ್ನೊಡನೆ ಅಮೆರಿಕಾಗೆ ಕರ ದ್ಯೊಯದಿದ್ದರೆ ಸಂಧ್ಯಾಳನ್ನು ತನ್ನಡೆ ಸೆಳೆದು ಕೊಂಡು ತನ್ನಿಂದ ಅವಳನ್ನು ಖಂಡಿತವಾಗಿಯೂ ವಸಂತ್ ದೂರಮಾಡುವ ಎಂದು ಯೋಚಿಸಿದ.

 ಫೋಟೋ ಕೃಪೆ : google 

ತನ್ನ ಅಮ್ಮನೊಂದಿಗೆ ಈ ಕುರಿತು ಚರ್ಚೆಯನ್ನು ಮಾಡಿದ. ಪ್ರತಿ ಬಾರಿ ಸಂಧ್ಯಾಳ ವಿಸಾ ಬೆಂಗಳೂರು‌ಕೇಂದ್ರದಿಂದ ಆಗುತಿತ್ತು. ಈ ಬಾರಿ ಮುಂಬಾಯಿ ಕಚೇರಿಯಿಂದ ಪ್ರಯತ್ನಿಸಲು‌ ನಿಶ್ಚಯಿಸಿದ. ಮುಂಬಾಯಿ ಕಚೇರಿಯಿಂದ ಸಂಧ್ಯಾಳಿಗೆ ವಿಸಾ ದೊರೆಯಿತು. ಮನೆಯವರೆಲ್ಲ ಹರ್ಷಗೊಂಡರು. ಇತ್ತ ವಸಂತ್ ಹೇಗಾದರು ಮಾಡಿ ಸಂಧ್ಯಾ ಅಮೆರಿಕಾಗೆ ಹೋಗದಂತೆ ತಡೆಯಲು ಯತ್ನಿಸಿದ. ನೀನು ಅಮೆರಿಕಾಗೆ ಹೋದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಸಂಧ್ಯಾಳಿಗೆ ಹೆದರಿಸಿದ. ತಾನು ಮತ್ತು ಸಂಧ್ಯಾ ಮಾಲ್ ಗಳಲ್ಲಿ ತೆಗೆದುಕೊಂಡಿರುವ ಫೋಟೊಗಳನ್ನು ಸಾಮಾಜಿಕ ಜಾಲದಲ್ಲಿ ಹರಿಬಿಡುವೆ ಎಂದು ಬೆದರಿಸಿದ. ಗಂಡನಿಗೆ‌ ವಿಚ್ಚೇದನ ನೀಡುವಂತೆ ಒತ್ತಾಯಿಸಿದ.

ಅವನ ಒತ್ತಡವನ್ನು ಗಂಡನಿಗೆ ವಿವರಿಸಿದಳು ಸಂಧ್ಯಾ. ಅವನ ಯಾವ ಒತ್ತಡಕ್ಕೂ ಅಂಜದಿರೆಂದು ಧೈರ್ಯ ತುಂಬಿದ ಅರುಣ್.ಹೆಂಡತಿಯನ್ನು ಮುಂಬಾಯಿ ಕಚೇರಿಗೆ ಕರೆದುಕೊಂಡು ಹೋದ, ಎರಡೇ ದಿನಕ್ಕೆ ಸಂಧ್ಯಾಳಿಗೆ ವಿಸಾ ದೊರೆಯಿತು. ವಿಸಾ ದೊರೆತು, ಅಮೆರಿಕಾಗೆ ಹೋಗಲು ಸಿದ್ದಳಾದ ಸಂಧ್ಯಾಳ ಬಳಿ ಬಂದ ವಸಂತ್ ನೀನು ನನ್ನ ಬಿಟ್ಟು ಅಮೆರಿಕಾಗೆ ಹೋದರೆ ನನ್ನ ಸಾವಿಗೆ ನೀನೇ ಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ ವಸಂತ್.

ಅವನ ಹೆದರಿಕೆಯಿಂದ ಮಂಕಾದಳು ಸಂಧ್ಯಾ. ಅವನು ಆತ್ನಹತ್ಯೆ ಮಾಡಿಕೊಂಡರೆ ಅವನ ಸಾವಿಗೆ ತಾನೆ ಕಾರಣಾಳಾಗಿ ಜೈಲು ಸೇರಬಹುದು. ನಾ ಜೈಲು ಪಾಲಾದರೆ ಅತ್ತೆ ಮನೆಯವರಿಗೆ ಕಳಂಕ ಬರುವುದೆಂದು ಎಂದು ಯೋಚಿಸಿದಳು ಸಂಧ್ಯಾ. ತಾ ಅಮೆರಿಕಾಗೆ ಹೋದರೆ ಈ ಎಲ್ಲಾ ತೊಂದರೆ, ತಾ ಅಮೆರಿಕಾಗೆ ಹೋಗದೆ ಇರಲು ನಿರ್ಧರಿಸಿದಳು ಸಂಧ್ಯಾ.
ಅಮೆರಿಕಾಗೆ ಹೋಗುವ ದಿನವು ಸಮೀಪಿಸಿತು. ಸಂಧ್ಯಾಳ ಹೊರತು ಪಡಿಸಿ ಮನೆಯ ಎಲ್ಲರಲ್ಲೂ ಉತ್ಸಹಕತೆ. ಸದಾ ಯೋಚನೆಯಲ್ಲಿರುವ ಹೆಂಡತಿಯನ್ನು ಗಮನಿಸಿದ ಅರುಣ್. ಅಮೆರಿಕಾಗೆ ತನ್ನೊಡನೆ ಬರಲು ಪ್ರೆರಪಿಸಿದ.

ಗಂಡನ ಮೇಲೆ ಭಾರ ಹಾಕಿ, ಅಮೆರಿಕಾಗೆ ಹೋಗಲು ಸಿದ್ದಳಾದಳು ಸಂಧ್ಯಾ. ಆದರೂ ವಸಂತ್ ನ ಆತಂಕ ಅವಳಲ್ಲಿ ಮನೆ ಮಾಡಿತ್ತು. ಅಮೆರಿಕಾಗೆ ಹೊರಡುವ ವಿಮಾನ ನಿಲ್ದಾಣದಲ್ಲಿ ಇಬ್ಬರು. ಅವಳನ್ನು ವಿಮಾನದ ನಿಲ್ದಾಣದವರೆಗೆ ಹಿಂಬಾಲಿಸಿದ್ದ ವಸಂತ. ತನ್ನ ಹಿಂಬಾಲಿಸುತ್ತಿರುವ ವಸಂತ ಕಂಡು ಬೆದರಿದಳು ಸಂಧ್ಯಾ. ಬೆದರಿದ ಹೆಂಡತಿಯ ಕೈಹಿಡಿದು ನಿಲ್ದಾಣದೊಳಗೆ‌ ಕಾಲಿಟ್ಟ ಅರುಣ್. ಸ್ವಲ್ಪ ಧೈರ್ಯ ಆವರಿಸಿತು ಸಂಧ್ಯಾಳಿಗೆ, ಗಂಡನ ಕೈ ಹಿಡಿದು ವಿಮಾನವನ್ನು ಏರಿದಳು ಸಂಧ್ಯಾ. ವಿಮಾನ ಮೇಲಕ್ಕೆ ಹಾರಿದಾಗ ಮನ ಅರಳಿತು.
ಗಂಡನ ಎದೆಗೆ ತಲೆಯಿಟ್ಟು, ತನ್ನ ಆತಂಕವನ್ನು ಬಗೆ ಹರಿಸಿದ್ದಕ್ಕೆ ಅರುಣಗೆ ಧನ್ಯವಾದಗಳನ್ನು ಹೇಳಿದಳು ಸಂಧ್ಯಾ. ಅವಳ ಮಖವನ್ನು ಎತ್ತಿ ಎಲ್ಲರೆದರು ಅವಳ ಕೆಂಪು ತುಟಿಗಳಿಗೆ ಮುತ್ತಿಟ್ಟು ,ಬರಸೆಳೆದು ಕೊಂಡ ಅರುಣ. ಆತಂಕದ ಬಲೆಯಿಂದ ಹೊರ ಬಂದಳು ಸಂಧ್ಯಾ.


  • ಗುರು ಮೂರ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading