ಅತ್ತಿ ಹಣ್ಣಿನ ಮಹತ್ವ (ಔದುಂಬರ) – ಸುಮನಾ ಮಳಲಗದ್ದೆ 

ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಅತ್ತಿ ಹಣ್ಣಿನ ಉಪಯೋಗವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…

ಅತ್ತಿ (ಔದುಂಬರ) ಹೆಚ್ಚಿನವರು ಹೋಮದಲ್ಲಿ ಮಾತ್ರ ಉಪಯೋಗಿಸುವ ಒಳ್ಳೆಯ ಔಷಧೀಯ ಗುಣವುಳ್ಳ ಸಸ್ಯ. ಇದರ ಬೇರು ಕಾಂಡ, ಎಲೆ, ಹಣ್ಣು, ಕಾಯಿ ಎಲ್ಲವೂ ಔಷಧೀಯ ಗುಣ ಹೊಂದಿದೆ.

ಫೋಟೋ ಕೃಪೆ : google

1) ಸೂರ್ಯಾಸ್ತದ ನಂತರ ಬೇರು ಕಡಿದರೆ ಮಾತ್ರ ನೀರು ಬರುತ್ತದೆ. ಉಳಿದಂತೆ ಇದರಲ್ಲಿ ಹಾಲು ಬರುತ್ತದೆ. ಇದು ಈ ಮರದ ವಿಶೇಷ. ಹೀಗೆ ಕಡಿದ ನೀರನ್ನು ಸಂಗ್ರಹಿಸಿ ಶುಧ್ಧೀಕರಣ ಮಾಡಿ ಭಟ್ಟಿ ಇಳಿಸಿ ವಿಶೇಷವಾದ ಮೂಲಿಕೆ ಸೇರಿಸಿ (ಈ ಔಷಧಿ ನನ್ನಲ್ಲಿ ಲಭ್ಯವಿದೆ) ತಯಾರಿಸಿದ ಔಷಧಿ ಸೇವಿಸುವುದರಿಂದ 5 ದಿನದಲ್ಲಿ 90 ಪ್ರತಿಶತ ಹೃದಯದ ಮತ್ತು ರಕ್ತನಾಳದಲ್ಲಿ ತಡೆ (blockage) ಇದ್ದರೂ ಗುಣವಾಗುತ್ತದೆ.

2) ಎಲೆಯನ್ನು ನೀರಿನಲ್ಲಿ ಕುದಿಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.

3) ಗೋಧಿ ಹಿಟ್ಟಿನೊಂದಿಗೆ ಎಲೆಯ ರಸವನ್ನು ಸೇರಿಸಿ ಕುರುವಿಗೆ ಹಚ್ಚಿದರೆ ಕುರು ಒಡೆಯುತ್ತದೆ.

4) ಚಕ್ಕೆಯನ್ನು ಕಷಾಯ ಮಾಡಿ ಕಲ್ಲು ಸಕ್ಕರೆ ಸೇರಿಸಿ ಸೇವಿಸುವುದರಿಂದ ಬಿಳಿ ಮುಟ್ಟು ಗುಣವಾಗುತ್ತದೆ.

5) ಚಕ್ಕೆಯ ಕಷಾಯ ಮಾಡಿ ಕುಡಿಯುವುದರಿಂದ ಅತಿಸಾರ ಆಮಶಂಕೆ ಮೂಲವ್ಯಾಧಿ ಮತ್ತು ಗುದದ್ವಾರದ ಯಾವುದೇ ಕಾಯಿಲೆಗಳು ಗುಣವಾಗುತ್ತದೆ.

6) ಪಕ್ವವಾದ ಹಣ್ಣನ್ನು ಬೆಲ್ಲದೊಂದಿಗೆ ಸೇರಿಸಿ ತಿನ್ನುವುದರಿಂದ ದೇಹದ ಯಾವುದೇ ಭಾಗದಲ್ಲಿ ಹೊರಬರುವ ರಕ್ತ ನಿಲ್ಲುತ್ತದೆ.

7) ಹಣ್ಣನ್ನು ಒಣಗಿಸಿ ಚೂರ್ಣ ಮಾಡಿ ಆಗಲ ಕಾಯಿಯ ಚೂರ್ಣದೊಂದಿಗೆ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.

8) ಅತ್ತಿಯ ಹಣ್ಣಿನೊಂದಿಗೆ ಜೇನು ಸೇರಿಸಿ ಸೇವಿಸುವುದರಿಂದ ಶೀಘ್ರ ಸ್ಕಲನ ಗುಣವಾಗುತ್ತದೆ.

9) ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆಯುತ್ತಿದ್ದರೆ ಗಾಯ ಬೇಗನೆ ವಾಸಿಯಾಗುತ್ತದೆ.

ಫೋಟೋ ಕೃಪೆ : google

10) ಯಾವುದೇ ಪ್ರಾಣಿ ವಿಷಜಂತು ಕಚ್ಚಿದರೆ ತೊಗಟೆಯ ಕಷಾಯದಿಂದ ತೊಳೆಯುವುದು ಮತ್ತೆ ಹೊಟ್ಟೆಗೆ ಕಷಾಯವನ್ನು ಕುಡಿಯುವುದು ಮಾಡುವುದರಿಂದ ವಿಷ ಪರಿಹಾರವಾಗುತ್ತದೆ.

11) ಹೊಟ್ಟೆ ಗುಡುಗುಡುಗುಟ್ಟುವುದು ಉಬ್ಬರ ಅಜೀರ್ಣ ಇವುಗಳಿಗೆ ಅತ್ತಿಯ ಹಾಲನ್ನು ಒಕ್ಕಳಿಗೆ ಹಚ್ಚುವುದರಿಂದ ಗುಣವಾಗುತ್ತದೆ.

12) ಅತ್ತಿಯ ಹಸಿ ಚಕ್ಕೆಯನ್ನು ಜೀರಿಗೆ ಸೇರಿಸಿ ಕಾಳು ಮೆಣಸು ಹಾಕಿ ಕಷಾಯ ಮಾಡಿ ಕೊಡುವುದರಿಂದ ಮಕ್ಕಳು ಆರೋಗ್ಯವಂತರಾಗುತ್ತಾರೆ.

13) ಚಕ್ಕೆಯ ಕಷಾಯ ಮತ್ತು ಜೊತೆಯಲ್ಲಿ ಇತರೆ ಮೂಲಿಕೆಗಳನ್ನು ಸೇರಿಸಿ ಕುಡಿಯುವುದರಿಂದ ಮೂತ್ರದ ಕಲ್ಲು ಗುಣವಾಗುತ್ತದೆ.

14) ಕಷಾಯವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕಫ ರಹಿತ ಒಣಕೆಮ್ಮು ನಿವಾರಣೆಯಾಗುತ್ತದೆ.


  • ಸುಮನಾ ಮಳಲಗದ್ದೆ – ನಾಟಿ ವೈದ್ಯರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW