ದಾಂಡೇಲಿಯ ದಟ್ಟ ಕಾಡುಗಳ ಮಧ್ಯೆ ಅರಳಿದ ಕೆಂದಾವರೆ

ದಾಂಡೇಲಿಯ ದಟ್ಟ ಕಾಡುಗಳ ಮಧ್ಯೆ, ಧನಗರ ಮರಾಠಿ ಜನಾಂಗದಲ್ಲಿ ಹುಟ್ಟಿ ಮುಂದೆ ಅವರು ನೂರಾರು ಜನರಿಗೆ ಯೋಗ ಗುರುವಾಗಿ ‘ಯೋಗಮಯಂ’ ಕೇಂದ್ರವನ್ನು ಸ್ಥಾಪಿಸುತ್ತಾರೆ, ಅವರೇ ನಮ್ಮ ಹೆಮ್ಮೆಯ ಲಕ್ಷ್ಮಣ ಗಂಗಾರಾಮ ಬೋಡಕೆ.  ಯುವ ಬರಹಗಾರ ವಿಕಾಸ್. ಫ್. ಮಡಿವಾಳರ ಲೇಖನಿಯಲ್ಲಿ ಅರಳಿದ ಒಬ್ಬ ಸಾಧಕನ ಕತೆಯಿದು. ತಪ್ಪದೆ ಮುಂದೆ ಓದಿ…

ಎಲ್ಲರಲ್ಲೂ ಒಂದು ಕನಸು ಇರುತ್ತದೆ. ಕೆಲವರು ಆ ಕನಸಿನ ಹಿಂದೆ ಬೆನ್ನಟ್ಟಿ ಹೋದರೆ ಇನ್ನೂ ಕೆಲವರು ಬರಿ ಕನಸ್ಸನ್ನಷ್ಟೇ ಕಂಡು ಖುಷಿ ಪಡುತ್ತಾರೆ. “Dream is not that which you see while seeing. It is something that does not let you sleep” ಅಬ್ದುಲ್ ಕಲಾಂ ಹೇಳಿದ ಮಾತು. ಈ ಮಾತುಗಳನ್ನು ಪುಷ್ಠಿಕರಿಸುವಂತೆ ವ್ಯಕ್ತಿ ಚಿತ್ರವೇ ಲಕ್ಷ್ಮಣ ಗಂಗಾರಾಮ ಬೋಡಕೆ.

“ಇವರೇನಾ ಲಕ್ಷ್ಮಣ ಗಂಗಾರಾಮ ಬೋಡಕೆ ? ಎರಡು ತಿಂಗಳಿಂದ ನಾ ಹುಡುಕುತ್ತಿದ್ದ ವ್ಯಕ್ತಿ ಇವರೇನಾ?. ನನ್ನ ಕೈ ಬೆರಳುಗಳು ಪೆನ್ನು ಹಿಡಿದು ಬರೆಯಬೇಕೆಂದು ಕಾತರಿಸುತ್ತಿದ್ದದ್ದು ಇವರ ಬಗ್ಗೆನಾ?” ನನಗೆ ಕಾಡುತ್ತಿದ್ದ ಹಲವಾರು ಪ್ರಶ್ನೆಗಳಿಗೆ ಅವರ ನಗುವೆ ಉತ್ತರವಾಗಿತ್ತು. ಸದಾ ಹಸನ್ಮುಖಿ, ತನ್ನಲ್ಲಿ ಅದೆಷ್ಟೋ ಜ್ಞಾನ ಹುದುಗಿದ್ದರೂ, ತಾನು ಎಲ್ಲರಂತೆ ಸಾಮಾನ್ಯನೆಂದು ತೋರಿಸಿಕೊಳ್ಳುವಂತ ವ್ಯಕ್ತಿ. ಎಲ್ಲರನ್ನು ಗೌರವದಿಂದ ಮಾತಾಡಿಸುವಂತವರು, ಅದೆಷ್ಟೋ ಜನರಿಗೆ ತಮ್ಮಲ್ಲಿರುವ ವಿದ್ಯೆಯನ್ನು ಧಾರೆಯೆರೆದಿದ್ದಾರೆ. ಇಷ್ಟೆಲ್ಲಾ ವ್ಯಕ್ತಿಚಿತ್ರವನ್ನು ಹೊಂದಿದ್ದರೂ ತಾನೇನು ಮಾಡಿಲ್ಲವೆಂಬಂತೆ ನಗು ನಗುತ್ತಾ ನನ್ನೆದುರಿಗೆ ಕೂತಿದ್ದರು. ನನ್ನಂತ ಸಣ್ಣ ಬರಹಗಾರ ಕೇಳಿದ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿ ಹೃದಯವನ್ನು ಗೆದ್ದಿದ್ದಾರೆ.

ಲಕ್ಷ್ಮಣ ಗಂಗಾರಾಮ ಬೋಡಕೆ ಅವರು ಹುಟ್ಟಿದ್ದು ದಾಂಡೇಲಿಯ ಕುಳುಗಿ ಎಂಬ ಹಳ್ಳಿಯಲ್ಲಿ. ಅದು ಸಹ್ಯಾದ್ರಿಯ ಮಡಿಲಿನಲ್ಲಿರುವ ಸಣ್ಣ ಹಳ್ಳಿ. ಧನಗರ ಮರಾಠಿ ಜನಾಂಗದಲ್ಲಿ ಹುಟ್ಟಿ ಬೆಳೆದ ಅವರನ್ನು ಅಪ್ಪ ಅಮ್ಮ ಪ್ರೀತಿಯಿಂದ ಕರೆಯುತ್ತಿದ್ದದ್ದು ಲಕ್ಕು. ಮುಂದೆ ಅವರು ಲಕ್ಷ್ಮಣ ಗಂಗಾರಾಮ ಬೋಡಕೆ ಎಂದೇ ಚಿರಪರಿಚಿತರಾದರು.

ಬೆಂಗಳೂರು, ಹುಬ್ಬಳ್ಳಿ , ಧಾರವಾಡದಲ್ಲಿ ಯೋಗ ಕಲಿಸಿದ ಅವರ ಬದುಕು ತುಂಬ ರೋಮಾಂಚನೀಯ. ಗೋಪಾಲಕರ ಜನಾಂಗದಲ್ಲಿ ಜನಿಸಿದರು.ಧನಗರ ಮರಾಠಿ ಜನಾಂಗದ ಮೂಲ ಕಸುಬು ಹೈನುಗಾರಿಕೆ. ಅಲ್ಲಿ ಬೆಳೆದ ಲಕ್ಷ್ಮಣರಿಗೆ ಎದುರಾಗಿದ್ದು ಬಡತನ. ಎರಡು ಹೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ. ತಿನ್ನಲು ಅಕ್ಕಿ ಇರದಿದ್ದಾಗ ಕುಂಬಳಕಾಯಿಯ ಬೀಜದಿಂದಲೆ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಇತ್ತು. ತಮ್ಮ 7 ನೇ ವಯಸ್ಸಿಗೆ ಮನೆ ಬಿಟ್ಟು ಅಂಬಿಕಾನಗರದ ವನವಾಸಿ ಕಲ್ಯಾಣ ಹಾಸ್ಟೆಲ್ ಗೆ ಸೇರಿ ಅಲ್ಲಿ ಶಾಲೆ ಕಲಿತರು. ಶಾಲಾ ರಜೆ ದಿನಗಳಲ್ಲಿ ಇವರ ಕೈಗಳು ಕೂಲಿ ಕೆಲಸವನ್ನು ಮಾಡುತ್ತಿದ್ದವು. ಗದ್ದೆ ಕೆಲಸ, ಹೈನುಗಾರಿಕೆ ಮಾಡುತ್ತಿದ್ದರು.

(ಲಕ್ಷ್ಮಣ ಗಂಗಾರಾಮ ಬೋಡಕೆ ಅವರ ಯೋಗ ಗುರುಗಳಾದ ಶ್ರೀ ರಾಘವೇಂದ್ರ ಶೆಣೈ ಮತ್ತು ಶ್ರೀ ವಿನಾಯಕ ತಲಗೇರಿಯವರ ಜೊತೆಯಲ್ಲಿ)

ಅಪ್ಪ ಅಮ್ಮ ದಸರಾ ಹಬ್ಬಕೊಮ್ಮೆ ಹೊಸ ಬಟ್ಟೆ ಕೊಡಿಸುತ್ತಿದ್ದರು. ಮುಂದೆವಿದ್ಯಾಭ್ಯಾಸ ಮುಗಿದ ಮೇಲೆ  ಕೃಷ್ಣಮೂರ್ತಿ ಗುರುಗಳ ಮಾರ್ಗದರ್ಶನದಲ್ಲಿ RSS ಅಂಗ ಸಂಸ್ಥೆಯಾದ ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಮೂರು ವರ್ಷ ಸಮಾಜ ಸೇವೆ ಮಾಡಿದರು. ಆಗ ಅವರಿಗೆ ಸಿಗುತ್ತಿದ್ದ ಗೌರವ ಧನ ತಿಂಗಳಿಗೆ 600 ರೂಪಾಯಿ. ತದನಂತರ ಹಿಂದೂ ಸೇವಾ ಪ್ರತಿಷ್ಠಾನ ಸೇವಾವೃತ್ತಿ ಶಿಬಿರ ಮುಗಿಸಿದ ನಂತರ ಯೋಗ ಗುರುಗಳಾದ ರಾಘವೇಂದ್ರ ಶಣೈ ಅವರ ಗುರುಗಳ ಮಾರ್ಗದರ್ಶನದಲ್ಲಿ ಯೋಗ ಕಲಿತು, ರಾಷ್ಟ್ರೋತ್ತಾನ ಪರಿಷತ್ತಿನಲ್ಲಿ 11 ವರ್ಷಗಳ ಕಾಲ ಯೋಗ ವಿಭಾಗ ಪೂರ್ಣಾವಧಿ ಕಾರ್ಯಕರ್ತನಾಗಿ ಕಾರ್ಯ ಮಾಡಿದರು. ಮುಂದೆ ವಿನಾಯಕ್ ತಲಗೇರಿ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ ‘ಯೋಗಮಯಂ’ ಕೇಂದ್ರವನ್ನು ಸ್ಥಾಪಿಸಿ ಅದೆಷ್ಟೋ ಯೋಗಾಭ್ಯಾಸಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದಿದ್ದಾರೆ. ಇದು ಲಕ್ಷ್ಮಣ್ ಬೋಡಕೆಯವರ ಕಿರುಪರಿಚಯ.

This slideshow requires JavaScript.

ಧಾರವಾಡದಲ್ಲಿ ಯೋಗ ಕೇಂದ್ರವಿದ್ದರೂ ಯೋಗಮಯಂ ಕೇಂದ್ರ ತಮ್ಮದೇಯಾದ ಒಂದು ಛಾಪನ್ನು ಮೂಡಿಸಿದೆ. 5 ವರ್ಷದಲ್ಲಿ ಒಂದು ಮಾದರಿ ಯೋಗ ಕೇಂದ್ರವಾಗಿ ರೂಪಗೊಂಡಿದೆ. ಇದಕ್ಕೆಲ್ಲ ಕಾರಣ ಲಕ್ಷ್ಮಣ್ ಬೋಡಕೆ ಅವರ ಸತತ ಪ್ರಯತ್ನ ಹಾಗು ಶಿಸ್ತು ಪಾಲನೆ. ಬೆಳಗ್ಗೆ 4 ಕ್ಕೆ ಎದ್ದು, 5 ಗಂಟೆಗೆ ಯೋಗಮಯಂ ಕೇಂದ್ರವನ್ನು ತೆರೆಯುತ್ತಾರೆ. ಬೆಳಗ್ಗೆ ಶುರುವಾಗುವ ತರಗತಿ ದಿನದ ಬೇರೆ ಬೇರೆ ಸಮಯದಲ್ಲಿ ಯೋಗ ಬಂಧುಗಳಿಗೆ ಅನುಕೂಲವಾಗುವ ಹಾಗೆ ಪ್ರತಿದಿನದ ತರಗತಿಗಳು ನಡೆಯುತ್ತವೆ. ಸತತ 14 ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳಿಗೆ ಯೋಗ ಕಲಿಸುತ್ತಾರೆ. ಹಬ್ಬ ಹರಿದಿನಗಳು ಬಿಟ್ಟರೆ ಯೋಗ ಕೇಂದ್ರ ಎಂದಿಗೂ ತೆರೆದೆ ಇರುತ್ತದೆ. ಜ್ವರವಿರಲಿ, ಕಷ್ಟವಿರಲಿ ಅಥವಾ ತುರ್ತು ಕೆಲಸವಿರಲಿ ಅದೇನೆ ಇದ್ದರೂ ಎಲ್ಲವನ್ನು ಬದಿಗಿರಿಸಿ ಯೋಗ ತರಬೇತಿ ನೀಡುವ ಅವರನ್ನು ಶ್ರಮ ಜೀವಿ ಎಂದು ಕರೆದರೆ ತಪ್ಪಿಲ್ಲ.

ಅವರ ಜೊತೆಗೆ ಶ್ರೀಮತಿ ಹೇಮಲತಾ ಹೆಗಡೆ, ಶ್ರೀ ಸಂತೋಷ ಪೂಜಾರ್, ಶ್ರೀ ನರೇಂದ್ರ ಪಟೇಲ್, ಶ್ರೀ ಅಶ್ವಿನ್ ಪಟೇಲ್, ಶ್ರೀಮತಿ ಸುಮನಾ ಹೆಬ್ಳಿಕರ್ ಅವರು ಸ್ಥಾನೀಯ ಶಿಕ್ಷಕರಾಗಿ ಅವರ ಜೊತೆಗೆ ಕೈ ಜೋಡಿಸಿರುತ್ತಾರೆ. ಮುಖ್ಯವಾಗಿ ಸುರೇಶ ಹೆಗಡೆಯವರು ಲಕ್ಶ್ಮಣ ಅವರಿಗೆ ಸಹಕಾರ ನೀಡುತ್ತಿದ್ದಾರೆ.


(ವಿಆರ್ ಎಲ್ ನಿರ್ದೇಶಕ  ವಿಜಯ ಸಂಕೇಶ್ವರ, ಗುರುಗಳಾದ ಶ್ರೀ ರಾಘವೇಂದ್ರ ಶೆಣೈ ಮತ್ತು ಶ್ರೀ ವಿನಾಯಕ ತಲಗೇರಿ ಅವರಿಂದ ಗೌರವ ಸ್ವೀಕಾರ )

ಇಂತ ಶ್ರಮಜೀವಿಯಿಂದಾಗಿ ಯೋಗಮಯಂ ಕೇಂದ್ರದ ಪ್ರಖ್ಯಾತಿ ದೇಶ ವಿದೇಶದಲ್ಲೂ ಹರಡಿ ಕೆನಡಾ, ಯು.ಎಸ್.ಎ,ಮಸ್ಕತ್ ಮುಂತಾದ ಕಡೆಯಿಂದ ಯೋಗ ತರಗತಿಯಲ್ಲಿ ಭಾಗವಹಿಸುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದರು ತಾವು ಬಂದ ದಾರಿಯನ್ನು ಮರೆಯದೆ ಸೌಜನ್ಯದಿಂದ ಸಾಮಾನ್ಯರಂತೆ ಬದುಕುತ್ತಿದ್ದಾರೆ.

This slideshow requires JavaScript.

ಯೋಗ ಧ್ಯಾನವೆಂದರೆ ಮೂಗು ತಿರುಗುವ ಸಮಾಜದಲ್ಲಿ ಯೋಗದಿಂದಲೆ ಸಮಾಜ ಸೇವೆ ಮಾಡಬೇಕೆಂದು ಕನಸು ಕಾಣುವುದು ಸುಲಭವೇನಲ್ಲ. ಜಿಮ್ ಗೆ ಹೋಗಿ ಕಸರತ್ತು ಮಾಡುವವರಿಗೆ ಯೋಗದ ಬಗ್ಗೆ ತಿಳಿಹೇಳುವುದು ತುಂಬ ಕಷ್ಟ. ಜಿಮ್ ಗೆ ಹೋಗುವುದರಿಂದ ಶರೀರ ಬೆಳೆಯುತ್ತದಷ್ಟೆ. ಆದರೆ ಯೋಗ ಶಾರೀರಿಕವಾಗಿ , ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ವಿಕಾಸ ಮಾಡುತ್ತದೆ. ಹಿತ ಮಿತ ಆಹಾರದಿಂದ ದೇಹದಲ್ಲಿ ತೇಜಸ್ಸು ಹೆಚ್ಚುತ್ತದೆ. ಊಟ ನಿದ್ದೆ ಹೇಗೊ ಯೋಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ನಿರಂತರ ಯೋಗಾಭ್ಯಾಸದಿಂದ ಅನಾರೋಗ್ಯದ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಯಲ್ಲಿ ರೋಗ ಬರದಂತೆ ತಡೆಯಬಹುದು.

(ಯೋಗಮಯಂ ಕೇಂದ್ರದ ಯೋಗ ತರಗತಿಯ ಮಾಹಿತಿ)

ಭಾರತದಿಂದ ಹೊರಗೆ ಹೋಗಿ ವಿದೇಶದಲ್ಲಿ ಯೋಗ ಕಲಿಸುತ್ತಿರುವ ಜಾಯಮಾನದಲ್ಲಿ, ಭಾರತದ ಹಳ್ಳಿ ಹಳ್ಳಿಯಲ್ಲೂ ಯೋಗ ಕಲಿಸಬೇಕೆಂದು ಕನಸು ಕಾಣುತ್ತಿರುವ ಲಕ್ಷ್ಮಣ್ ಬೋಡಕೆ ಮಹಾನರು. ದೇಹಕ್ಕಾಗಿ ಯೋಗ ಮಾಡುತ್ತ, ದೇಶಕ್ಕಾಗಿ ಬದುಕಬೇಕು ಎಂಬ ಅವರ ಅಭಿಲಾಷೆ ಬೇಗ ಇಡೇರಲಿ. ಇವರಂತೆ ಕನಸು ಕಂಡು ಶ್ರಮ ಪಟ್ಟರೆ ಆ ಬದುಕಿಗೆ ಒಂದು ಸಾರ್ಥಕತೆಯಿರುತ್ತದೆ. ಬರಿ ಕನಸು ಕಂಡು ಖುಷಿ ಪಟ್ಟರೆ ಎಲ್ಲವೂ ವ್ಯರ್ಥವಾಗುತ್ತದೆ. ಯೋಗದಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ ಮತ್ತು ಅವರ ಕನಸು ನೆರವೇರಲಿ ಎಂಬುದು ನನ್ನ ಆಶಯ.

ಲಕ್ಷಣ ಅವರ ಎಲ್ಲ ಯಶಸ್ಸಿನ ಹಿಂದೆ ಧರ್ಮಪತ್ನಿ ಜನಾಭಾಯಿ ಅವರ ಸಹಕಾರ, ಪ್ರೋತ್ಸಾಹ ನಿರಂತರವಾಗಿ ಇದ್ದೇ ಇದೆ. ರಾಘವ, ಶ್ರದ್ದಾ, ದೈವಿಕ ಮೂರು ಜನ ಮಕ್ಕಳಿರುವ ತುಂಬಿದ ಸಂಸಾರ ಅವರದು.


  • ವಿಕಾಸ್. ಫ್. ಮಡಿವಾಳರ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW