ಗಂಡ ಹೆಂಡತಿಗೆ ನಿಮ್ಮ ಮೇಲೆ ಯಾವುದಾದರೂ ಕೇಸ್ ಇದೇನಾ ಅಂತ ಪೊಲೀಸ್ ಪ್ಪಾ ಕೇಳಿದ. ಇಲ್ಲ ಅಂತ ಹೇಳಿದ್ರು ಪೊಲೀಸಪ್ಪ ಬಿಡ್ಲಿಲ್ಲ. ಕೇಸ್ ಇದೆಯಾ ಅಂತ ಪದೇ ಪದೇ ಕೇಳಿದ. ಆಗ ಗಂಡ ಒಂದೇ ಮಾತು ಹೇಳಿದ ಆ ಮಾತಿಗೆ ಪೊಲೀಸ್ ಪ್ಪಾ ಓಡಿ ಹೋದ. ಮುಂದೆ ಓದಿ…
ಪತಿ ಪತ್ನಿ ಇಬ್ಬರೂ Passport renewal ಗೆ apply ಮಾಡಿರುತ್ತಾರೆ. Passport office ನಲ್ಲಿ ಒಂದಷ್ಟು procedure ಮುಗಿಸಿದ ಮೇಲೆ ಮನೆಗೆ ಬರುತ್ತಾರೆ. Pass port verification ಗೆ ಪೋಲಿಸಪ್ಪ ಮನೆಗೆ ಬರುತ್ತಾರೆ ( ಇದು ಪ್ರೊಸೀಜರ್). ಅಪ್ಲಿಕೇಶನ್ ಫಾರ್ಮ್ ನಲ್ಲಿ ಈ ಮೊದಲೇ ಭರ್ತಿ ಮಾಡಿದ ವಿಷಯಗಳು ಸರಿಯೇ ತಪ್ಪೇ ಎಂದು ಮತ್ತೆ ಮತ್ತೆ ಕೇಳಿ ಕನ್ಫರ್ಮ್ ಮಾಡಿಕೊಳ್ಳುತ್ತಾರೆ. ಸುಮಾರು ಹತ್ತು ಪ್ರಶ್ನೆ ಆದ ಮೇಲೆ…
ಪೊಲೀಸ್: ಮೇಡಂ, ಏನಾದರೂ ನಿಮ್ ಮೇಲೆ ಕೇಸ್ ಗಳು ಇವೆಯಾ??
ಮೇಡಂ : ಅಯ್ಯೊ ಛೇ .ಹಾಗೆಲ್ಲ ಏನಿಲ್ಲ ಸರ್.
ಪೊಲೀಸಪ್ಪ: sir, ನಿಮ್ ಮೇಲೆ ಏನಾದರೂ ಕೇಸ್ ಇದೆಯ.
ಸರ್ : ಇಲ್ಲಾ sir.
ಪೊಲೀಸಪ್ಪ: ಸರಿ.. sir. ನಾವ್ ಓಕೆ ಅಂತ ಪಾಸ್ಪೋರ್ಟ್ ಆಫೀಸ್ ಗೆ ತಿಳಿಸಿದ ಒಂದು ವಾರದೊಳಗೆ ನಿಮಗೆ regd ಪೋಸ್ಟ್ ನಲ್ಲಿ ಪಾಸ್ಪೋರ್ಟ್ ಮನೆಗೆ ಬರುತ್ತೆ.
ಸರ್ ಮತ್ತು ಮೇಡಂ : thanks sir
ಪೊಲೀಸಪ್ಪ : ಏನಾದರೂ ಕೊಡಿ ನಮಗೂ
ಸರ್ : ಅಂದ್ರೇ
ಪೊಲೀಸಪ್ಪ : ಒಂದು ಪಾಸ್ಪೋರ್ಟ್ ಗೆ ಇಷ್ಟು ಅಂತ ಸರ್ .. ಸರಿ.. ತಗೊಳಿ..300 ರೂಪಾಯಿ ಇದೆ.
ಪೊಲೀಸಪ್ಪ : ಆಗಲ್ಲಾ sir.. ಎರಡು passport ಅಲ್ವಾ..500 ಕೊಡಿ. ಆ Sir ಬೇರೆ ವಿಧಿ ಇಲ್ಲದೆ 500 ಕೊಡುತ್ತಾರೆ.
ಪೊಲೀಸಪ್ಪ : ಬರ್ತೀನಿ sir. ಅಂದ ಹಾಗೆ ಯಾವುದೂ case ಇಲ್ಲಾ ತಾನೇ. ಮತ್ತೊಮ್ಮೆ ಕನ್ಫರ್ಮ್ ಮಾಡಿ ಕೊಂಡೆ ಅಷ್ಟೇ.
ಸರ್ : ಇದೂವರೆಗೂ ಇರಲಿಲ್ಲ. ಆದ್ರೆ ನನ್ passport ಕೈಗೆ ಬಂದ ಮೇಲೆ “ಮಿತಿ ಮೀರಿದ ಲಂಚಗುಳಿತನ” ಅಂತ ಕೇಸ್ ಹಾಕ್ತೀನಿ ನಾನೇ.
ಹೀಗೇ ಹೇಳುವ ಹೊತ್ತಿಗೆ ಪೊಲೀಸ್ ಆಗಲೇ ಬೈಕ್ ಸ್ಟಾರ್ಟ್ ಮಾಡಿರುತ್ತಾರೆ. ಇವರು ಹೇಳಿದ್ದು ಕೇಳಿಸಲ್ಲ. ಜೋರಾಗಿ ಹೇಳಲು ದಂಪತಿಗಳಿಗೆ ಧೈರ್ಯ ಇಲ್ಲ. ಸುಮ್ನೇ ಯಾಕೆ ಸಗಣಿಯ ಜೊತೆ ಗುದ್ದಾಟ ಅಂತ.
- ಸುಮಾ ಉಮೇಶ್