‘ನನ್ನ ನಿನ್ನ ಪ್ರೀತಿಯು ಗೆಳತೀ, ಬದಲಾಗದು ಎಂದೆಂದೂ ಅದು’…ಕವಿ ಪದ್ಮನಾಭ.ಡಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಓದಿ…
ನನ್ನ ಕಣ್ಣಿಂದ ಜಾರಿದ ಹನಿಯಲಿ
ನಿನ್ನಯ ಚಿತ್ರ ಕಂಡಿತೇ
ನಿನ್ನಯ ನೆನಪಾ ತಂದಿತೇ //
ನೆನಪಿದೆಯಾ ಓ ಗೆಳತೀ ಸುಂದರ ಆ ಸಮಯ
ಹುಣ್ಣಿಮೆ ಚಂದ್ರನು ಹೊಳೆದಿರುವಾಗ
ನಿನ್ನ ಮಡಿಲಲಿ ನಾನು ತಲೆಯಿಟ್ಟುಮಲಗಿದ ಸಮಯ
ಹುಟ್ಟಿದ ಸುಮಧುರ ಗೀತೆಯು ಗೆಳತಿ
ಮಾರ್ದನಿಸುತಿದೆ ಮನದಿ ನನ್ನೊಳಗೇ ಇಂದು //
ಬದಲಾಗಿದೆ ಜಗವೆಂದು
ಹೇಳುವರು ಜನರೆಲ್ಲ
ದಿನದಿನಕೂನು ಬದಲಾಗುತಿಹ
ಜಗದಳಗೇ ಎಂದೆಂದೂ
ಬದಲಾಗದೇ ಉಳಿದಿಹುದು
ನನ್ನ ನಿನ್ನ ಪ್ರೀತಿಯು ಗೆಳತೀ
ಬದಲಾಗದು ಎಂದೆಂದೂ ಅದು
ಸವಿಯಾದ ಜೇನಿನ ಬಿಂದು//
- ಪದ್ಮನಾಭ. ಡಿ – ನಿವೃತ್ತ ಪೋಸ್ಟ್ ಮಾಸ್ಟರ್, ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018, ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ– 2022 ಕವಿಗಳು, ಲೇಖಕರು, ಮೈಸೂರು.