ಪ್ರೇಮಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಪ್ರೇಮಕಾವ್ಯವನ್ನು ಗಣೇಶ್ ದೇಸಾಯಿ, ಶಿಲ್ಪ ಸುನೀಲ್ ಅವರು ಸೊಗಸಾಗಿ ಹಾಡಿದ್ದಾರೆ. ಶೋತೃಗಳಿಗೆ ರಸದೌತಣ ನೀಡಲು ಸಜ್ಜಾಗಿದೆ. ಕೇಳಿ ಆನಂದಿಸಿ…
ಕಾರ್ಯಕ್ರಮದ ವಿವರ :
ದಿನಾಂಕ : ಫೆಬ್ರುವರಿ ೧೯
ಸಮಯ : ಬೆಳಗ್ಗೆ ೧೧ ಗಂಟೆ
A2 music ನಲ್ಲಿ ಬಿಡುಗಡೆಗೊಳ್ಳಲಿದೆ.
https://www.youtube.com/c/A2ENTERTAINMENT

ಇನಿಯ ಚಂದ್ರ
ಅವನಿಯಲ್ಲಿ ನಿಲುಕದಂತ
ಚೆಲುವ ಚೆನ್ನ ಚಂದ್ರಮ
ಅವನೆ ಇಲ್ಲಿ ತಲುಪಿ ನಿಂತ
ಹೃದಯದಲ್ಲಿ ಸಂಭ್ರಮ
ಇರುಳಿನಲ್ಲಿ ಅರಳಿನಿಂತ
ಇನಿಯನಿವನು ಸುಂದರ
ತೆರಳಿದರು ಜೊತೆಯಲಿರುವ
ಭುವಿಯ ಭವ್ಯ ಹಂದರ
ಕರೆದರೂನು ಬಾರನೆಂದು
ಮೌನಿಯಾಗಿ ನಿಲ್ಲುತ
ಕೆರೆಯ ನೀರ ಒಳಗೆ ಬೆರೆವ
ನೋಡಲೇಳಿ ಸೊಲ್ಲುತ
ತಾರೆಗಳಲಿ ನೀರೆಗಳಿರೆ
ಅವನೆ ಅಲ್ಲಿ ಬಂಧಿತ
ಮೀರಿ ತೋರೆ ಪ್ರೀತಿ ಧಾರೆ
ಇಳಿವನೇನೊ ಖಂಡಿತ.
ತುಡಿದು ಮನಸು ಪ್ರೀತಿಗಾಗಿ
ಮೇರೆ ಮೀರಿ ನಿಂತಿದೆ
ಮಿಡಿದು ಏರಿ ಒಲವಿಗಾಗಿ
ಧಾರೆಯಾಗಿ ಬಂದಿದೆ.
ಚನ್ನಕೇಶವ ಜಿ ಲಾಳನಕಟ್ಟೆ
- ಆಕೃತಿ ಕನ್ನಡ ನ್ಯೂಸ್