ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ



ಪುಸ್ತಕ ಮೊದಲ ಪುಟ ತೆರೆದಿಡುತ್ತಿದ್ದಂತೆ ನನಗೆ ಕಂಡ, ” ಪದಗಳಿಗೆ ನಿಲುಕದ ಪ್ರೀತಿ ಪ್ರೇಮವನ್ನು ಪುಸ್ತಕದ ಬದನೇಕಾಯಿ ಎಂದು ಬಿಟ್ಟ ‘ಉಪೇಂದ್ರ’ ಅವರಿಗೆ ಅರ್ಪಣೆ…”ಎಂಬ ಸಾಲುಗಳೇ ಈ ಪುಸ್ತಕವನ್ನು ಬಿಟ್ಟು ಬಿಡದಂತೆ ಓದುವಂತೆ ಮಾಡಿತು ಎಂದರೇ ತಪ್ಪಾಗಲಾರದು. ಅದ್ರಲ್ಲೂ ನನ್ನ ನೆಚ್ಚಿನ ಬರಹಗಾರ್ತಿ ಪೂರ್ಣಿಮಾ ಅವರ ಪುಸ್ತಕ ಅಂದ್ರೇ ಕೇಳಬೇಕೇ. ಪುಸ್ತಕದ ಕುರಿತು ರಾಘವೇಂದ್ರ ಇನಾಮದಾರ ಅವರು ಬೆರೆದ ಲೇಖನ ಓದುಗರಿಗಾಗಿ, ಮುಂದೆ ಓದಿ…

ಪುಸ್ತಕ : ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ

ಲೇಖಕರು : ಪೂರ್ಣಿಮಾ ಮಾಳಗಿಮನಿ

ಪ್ರಕಾಶಕರು : ಸಾವಣ್ಣ ಪ್ರಕಾಶನ

ಬೆಲೆ : 200/-

ಖರೀದಿಸಲು : 86604 04034

(ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ ಪುಸ್ತಕ ಮುಖಪುಟ)

ಕೆಲಸದಿಂದ ಮನೆಗೆ ಬಂದ ಕೂಡಲೇ ಓದುವಾಗ ಡಿಸ್ಟರ್ಬ್ ಆಗದಿರಲಿ ಎಂದೆನಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಿನ್ನೆ ತಾನೇ ಕೊರಿಯರ್ ಮೂಲಕ ತಲುಪಿದೆ “ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ” ಓದಲು ಕುಳಿತೇ ಬಿಟ್ಟೆ. ಮೊಟ್ಟ ಮೊದಲ ಗುಟುಕಿಗೆ ಮಾರು ಹೋಗಿ ಮುಂದೆ ಓದುತ್ತಾ ಹೋದಂತೆ ಪುಸ್ತಕ ಕೇಳಗಿರಿಸಲು ಮನಸ್ಸಾಗಲೇ ಇಲ್ಲ.

‘ಮೊದಲ ಗುಟುಕು’ ಎಂದು ಆರಂಭವಾಗುವ ಪುಸ್ತಕದಲ್ಲಿ ಶೀರ್ಷಿಕೆ ಹ್ಯಾಗೆ ಮೂಡಿಬಂತು ಎಂಬುದನ್ನು ಪೂರ್ಣಿಮಾ ಅವರು ಲೈಟಾಗಿ ತಿಳಿಸಿದ್ದಾರೆ.

(‘ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ’ ಲೇಖಕಿ ಪೂರ್ಣಿಮಾ ಮಾಳಗಿಮನಿ)

ಅನೀಶ್

ಈ ಕಥೆಯ ಆರಂಭದ ಅನಿಶ್ ಹಾಗೂ ಅವನ ಸ್ನೇಹಿತ ಜೀವನ್ ಅವರ ಫೋನಿನ ಸಂಭಾಷಣೆಯನ್ನು ಓದುತ್ತಾ ಹೋದಂತೆ ನಿಮ್ಮೆಲ್ಲರ ಮುಖದಲ್ಲಿ ಒಂದ್ರಿತಿ ಮಂದಹಾಸ ಮೂಡುತ್ತೆ. ಕಾಲೇಜಿನ ಕಾಲದಲ್ಲಿ ಅನಿಶ್ ಪ್ರೀತಿಸುತ್ತಿದ್ದ ಬೇಲಾ ಎಂಬ ಹುಡುಗಿ ಫೇಸ್ಬುಕ್ ಪುಟದಲ್ಲಿ ಮತ್ತೆ ಸಿಕ್ಕಿದ ವಿಷಯ ಜೀವನ್ ತಿಳಿಸುತ್ತಿದ್ದಂತೆ ಅನಿಶ್ ಬೆಚ್ಚು ಬೆರಗಾಗುವನು. ಮುಂದೆ ಅವರಿಬ್ಬರ ಭೇಟಿಗೆ ಜೀವನ್ ಸಹಾಯ ಮಾಡುತ್ತಾನೆ. ಮುಂದೇನಾಗುತ್ತೆ ಅಂತ ಹೇಳೋದ್ರಲ್ಲಿ ಏನೂ ಮಜಾ ಇಲ್ಲ. ಓದಿದಾಗ ನಿಮಗೆ ಅರ್ಥ ಆಗುತ್ತೆ. ಈ ಕಥೆ, ಪ್ರತಿಯೊಂದು ಹಂತದಲ್ಲೂ ನೀವು ಕುತೂಹಲದಿಂದ ಓದುವಂತೆ ಮಾಡುತ್ತದೆ. ಮೊಟ್ಟ ಮೊದಲು ಶುರುವಾದ ಅನಿಶನ ಕಥೆಯನ್ನು ನೀವು ಕೊನೆವರೆಗೂ ನೆನಪಿಟ್ಟುಕೊಂಡು, ಮುಂದಿನ ಭಾಗಗಳನ್ನು ಓದಬೇಕು. ಯಾಕೆ ಅಂತೀರಾ…? ನಾನು ಹೇಳೋಲ್ಲ ಅದು ಮಾತ್ರ ತುಂಬಾ ಸಸ್ಪೆನ್ಸ್. ಇನ್ನೂ ಕಥೆ ಕೊನೆ ಅಂತೂ….

(‘ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ’ ಪುಸ್ತಕ ಬೆನ್ನುಡಿ)

ಲಾವಣ್ಯ

ಅದೊಂದು ದಿನ ಲಾವಣ್ಯ ಬಿಕ್ಕಿಸಿದಾಗ, ಕೆಲಸದಾಕೆ ಲಕ್ಷ್ಮಿ, ‘ಅಮ್ಮ ಯಾರೋ ನಿಮ್ಮನ್ನ ನೆನಕೋತವ್ರೆ’ ಅಂತ ಹೇಳುತ್ತಾಳೆ. ಲಾವಣ್ಯ ಮಾತ್ರ ‘ಅದೆಲ್ಲಾ ಸಿನಿಮಾ ಹಾಗೂ ಪುಸ್ತಕದಲ್ಲಿ ಸಾಧ್ಯ’ ಎಂದು ಹೇಳಿ ತನ್ನ ಮನೆ ಕೆಲಸದಲ್ಲಿ ತೊಡಗುತ್ತಾಳೆ. ಸ್ವಲ್ಪ ಸಮಯದ ಬಳಿಕ ಅವಳ ಗಂಡ ರಣಜಿತ್ ಅಂದಿನ ದಿನಪತ್ರಿಕೆ ನೋಡಿ, “ಇಲ್ನೋಡೇ ಪೇಪರಿನಲ್ಲಿ ಏನು ಬಂದಿದೆ.? ಎಷ್ಟು ದಿನದಿಂದ ನಡೀತಿದೆ ಇದೆಲ್ಲಾ? ” ಎಂದು ಪ್ರಶ್ನಿಸಿದಾಗ, ಪಾಪ ಗಾಬರಿಯಿಂದ ಅವಳ ಕಣ್ಣು ಮಂಜಾಗುತ್ತವೆ. ಹಾಗಾದ್ರೆ ಆ ಪತ್ರಿಕೆಯಲ್ಲಿ ಅಂಥಹದ್ದು ಪ್ರಕಟವಾದದ್ದಾದರೂ ಏನು..? ಎಂಬುದನ್ನು ತಿಳಿಯಲು ಈ ಪುಸ್ತಕ ಓದಲೇ ಬೇಕು.



ದೀಪಿಕಾ

ಈ ಕಥೆ ದೀಪಿಕಾಳ ಟ್ಯಾಕ್ಸಿ ಪ್ರಯಾಣದ ಒಂದು ಘಟನೆಯಾಗಿದ್ದು. ಓದುವುದಕ್ಕೆ ತುಂಬಾ ಮಜವಾಗಿದೆ. ದೀಪಿಕಾಳ ಕಥೆ ಓದಿ ಮುಗಿಸುವ ಹೊತ್ತಿಗೆ ಒಟ್ಟಾರೆ ಕಥೆ ಹೊಸ ತಿರುವು ಪಡೆದುಕೊಂಡಿದೆ. ಯಾಕೆಂದರೆ ಇಷ್ಟು ಓದಿದ ಮೇಲೆ ಮತ್ತೆ ಇವೇ ಶೀರ್ಷಿಕೆಯೊಂದಿಗೆ ಕಥೆ ಮುಂದುವರಿದಿದೆ. ಅದು ಯಾಕೆ..?? ಅನ್ನೋದು ಮಾತ್ರ ನಾನಂತೂ ಹೇಳೊಲ್ಲ. ಇಷ್ಟು ಮಾತ್ರ ಹೇಳಬಲ್ಲೆ.. ನನಗಂತೂ ಸೂಪರ್ ಸ್ಟಾರ್ ಉಪೇಂದ್ರ ಅವರ ಚಲನಚಿತ್ರದ ಸ್ಕ್ರಿಪ್ಟ್ ಓದಿದ ಅನುಭವವಾಯಿತು. ಪೂರ್ಣಿಮಾ ಅವರ ಬರಹದಲ್ಲಿ ಹೊಸತೇನೋ ಇರುತ್ತೆ ಅನ್ನೋದಕ್ಕೆ ಈ ಕೃತಿನೇ ಸಾಕ್ಷಿ. ಅದ್ರಲ್ಲೂ ಕೊನೆಯಲ್ಲಿ ಬರುವ ಗುಟುಕಂತೂ ನಮ್ಮನ್ನು ಅವಕ್ಕಾಗಿಸೋದು ಗ್ಯಾರಂಟಿ……

ಬಿಡುಗಡೆಯಾದ ಕೂಡಲೇ ಪುಸ್ತಕ ನನ್ನ ಕೈಗಿಟ್ಟ ಪೂರ್ಣಿಮಾ ಅವರಿಗೆ ಅನಂತ ಧನ್ಯವಾದಗಳು.


  • ರಾಘವೇಂದ್ರ ಇನಾಮದಾರ (ಲೇಖಕರು, ಕತೆಗಾರರು) ಹುಬ್ಬಳ್ಳಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW