‘ಅವನಿಯ ಅಪೇಕ್ಷೆ!’ ಕವನ

ಅವನಿಯೊಳು ಬಿರುಬಿಸಿಲ ಧಗೆ, ಬಂಜರಾಗಿ ಬಳಲಿ ಬೆಂಡಾದ ಧರೆ… ಕವಿ ರಶ್ಮಿಪ್ರಸಾದ್ (ರಾಶಿ) ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಮುಗಿಲ ಮೋಡಗಳೇ ಕರಗಿ
ನೀರಾಗಿ ಒಮ್ಮೆಲೇ ಸುರಿದುಬಿಡಿ
ಮಳೆಹನಿಯ ಹೊನ್ನ ಹೊನಲಾಗಿ
ಚಿಟಪಟನೆ ಚಿಮ್ಮವ ಹನಿಯಾಗಿ.!

ಅವನಿಯೊಳು ಬಿರುಬಿಸಿಲ ಧಗೆ
ಬಂಜರಾಗಿ ಬಳಲಿ ಬೆಂಡಾದ ಧರೆ
ತಣಿದು ತಂಪಾಗಿ ಸಂತೃಪ್ತಿಗೊಳ್ಳಲಿ
ಕನಕಣವೂ ಕಾರಂಜಿಯಾಗಿ ಹೊಮ್ಮಲಿ.!

ಪಡುವಣದಿ ಮೂಡಲಿ ಭಾನರಂಗು
ಧುಮ್ಮಿಕ್ಕಿ ಝೆ0ಕರಿಸಲಿ ಭುವಿಯ ಗುಂಗು
ಸಿಡಿಲ ಸಪ್ಪಳಕೆ ನಲಿಯಲಿ ಮುಗಿಲನರ್ತನ
ಗುಡುಗುಸದ್ದಿಗೆ ಮೊಳಗಲಿ ಮಳೆಯ ಕೀರ್ತನ.!

ಬಾನಂಚಲಿ ಮೂಡಲಿ ಮಳೆಯಬಿಲ್ಲು
ಕಂಗೊಳಿಸಿ ನಳನಳಿಸಲಿ ಕಾಮನಬಿಲ್ಲು
ಪುಳಕಗೊಂಡು ವಿರಮಿಸಲಿ ಧರಣಿ
ಚಿಲುಮೆಗೊಂಡು ಸಂಭ್ರಮಿಸಲಿ ಅವನಿ.!

ಕೊಚ್ಚಿ ಹೋಗಲಿ ಇಳೆಯಕಳೆ
ಹರಿದುಬಿಡಲಿ ಒಲವ ಹೊನ್ನ ಹೊಳೆ
ಭುವಿಯೊಡಳಲಿ ಧುಮ್ಮಿಕ್ಕಲಿ ವರ್ಷಧಾರೆ
ಚಿಗುರೊಡೆಯಲಿ ಹಸಿರ ಹೊನ್ನಧಾರೆ.!

ಮಳೆಯೇ ಸುಧೆಯಾಗಿ ಅವತರಿಸಿಬಿಡು
ಗಾಢ ಆಲಿಂಗನದಿ ಆವರಿಸಿಬಿಡು
ಚಿಮ್ಮಿಹೊಮ್ಮಲಿ ಬಸಿದ ಜೀವಕಳೆ
ನಿತ್ಯ ಚೈತನ್ಯ ರೂಪ ತಾಳಲಿ ಇಳೆಯಕಳೆ.!!


  • ರಶ್ಮಿಪ್ರಸಾದ್ (ರಾಶಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading