ಗೆಳತಿಯ ಮಮತೆ, ಪ್ರೀತಿಯ ಕುರಿತಾದ ಸಾಕಷ್ಟು ಕವಿತೆಗಳಿವೆ.ಆದರೆ ಗೆಳೆಯನ ಬಗ್ಗೆ ಕವಿತೆಗಳು ಅಲ್ಲೊಂದು ಇಲ್ಲೊಂದಿವೆ. ಮಧುಮಿತ ಗೌಡ ಅವರು ಬರೆದಿರುವ ‘ಗೆಳೆಯ’ ಕವಿತೆಯಲ್ಲಿ ಅವನ ಪ್ರೀತಿಯಿದೆ, ಅವನ ಮಮತೆಯಿದೆ. ಕವಿತೆಯನ್ನೊಮ್ಮೆ ಓದಿ…
ಎಂತಹ ಅನುರಾಗ ಅವನು
ಎಣಿಸಲಾಗದ ತಾರೆಯ ಹೊಂದಿದ ಮುಗಿಲವನು
ಮರೆಯಲಾಗದ ನೆನಪವನು
ಕೊಡಿಡಲಾಗದ ಮಳೆಹನಿಯವನು
ಮಳೆಹನಿಯೆಲ್ಲ ಇಂಗಿಸುವ ತಿರೆಯವನು
ಮಗುವ ನಗು ಅವನು
ತಾಯಿ ತೋರುವ ಮಮತೆಯವನು
ಎಷ್ಟು ವರ್ಣ ಮಿಶ್ರಿಸಿದರು ಮತ್ತೊಂದು ಸುಂದರ ವರ್ಣವಾಗಿ ಮೂಡುವವನು
ಕಮರಿದರು ಚಿಗುರುವ ಲತೆಯವನು
ಅರಳಿದ ಸುಮದ ಪರಿಮಳ ಅವನು
ಎಷ್ಟು ವರ್ಣಿಸಿದರೂ ಮುಗಿಯದ ನಿಲುವವನು
- ಮಧುಮಿತ ಗೌಡ (ಯುವಕವಿಯತ್ರಿ) ಬೆಂಗಳೂರು