ಚಿಕ್ಕದಾದರೂ ಮನಸ್ಸಲ್ಲಿ ಉಳಿಯುವ ಕವಿತೆ… ಮಧುಮಿತಾ ಗೌಡ ಅವರ ಪದಕುಂಜದಲ್ಲಿ ಅರಳಿದ ಈ ಕವಿತೆಯನ್ನು ಓದಿ…
ಅಚ್ಚಳಿಯದೆ ಉಳಿವ ನೆಪವೊಂದು ಬೇಕು
ಕಾಲವಾದರೂ #ಮರುಜನ್ಮದಿ ಕಾಡುವ
ಕನಸಾಗಿರಬೇಕು
ಮರಳಿ ಮರಳಿ #ಮನಸು ಮುದುಡಿ ಅದನ್ನೇ
ಬಯಸುತಿರಬೇಕು
ಆಗಸದ ಅಂಚಾಗಿ ಭುವಿಗೆ ಉಡುಗೆಯಾಗಿ
ಹೊಳೆಯುತಿರಬೇಕು
ಕಂಗಳ ಅಳತೆಗೆ ಮೀರಿ ದೃಷ್ಟಿಗೆ ನಿಲುಕದೆ
ಗೋಚರಿಸಬೇಕು
ನಸುಕಾದ ನಸುಬೆಳಕಲ್ಲಿ ಮಸುಕು ಮಸುಕಾಗಿ
ಕಾಣಬೇಕು
- ಮಧುಮಿತಾ ಗೌಡ (ಯುವಕವಿಯತ್ರಿ) ಬೆಂಗಳೂರು