ಕನ್ನಡದ ಪ್ರೇಮಕವಿ ಲಕ್ಷ್ಮಣರಾವ್‌ರವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲದಲ್ಲಿ 1946ರ ಸೆಪ್ಟಂಬರ್ 9ರಂದು. ಸಾಹಿತ್ಯ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ.ಅವರಿಗೆ ಈಗ ೮೦ ವರ್ಷ ವಯಸ್ಸು. ನಮ್ಮೆಲ್ಲರ ಪ್ರೀತಿಯ ಕವಿ ಬಿ. ಆರ್. ಲಕ್ಷಣರವರಿಗೆ ಲೇಖಕಿ ಚೇತನ ಭಾರ್ಗವ ಅವರು ತಮ್ಮ ಕಾವ್ಯಾತ್ಮಕದ ಮೂಲಕ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

ಸುಬ್ಬಾಭಟ್ಟರ ಮಗಳೇ ಎನ್ನುತ
ಬಾ ಮಳೆಯೇ ಬಾ ಎಂದು ಹಾಡುತ
ಮನ ತಟ್ಟುವ ಕವಿತೆಯ ಲಕ್ಷಣ
ಬರೆದವರು ನಮ್ಮ ಬಿ ಆರ್ ಲಕ್ಷ್ಮಣರಾವ್
ನವ್ಯ ನವೋದಯ ಕರತಲಾಮಲಕ
ಮನದ ಭಾವಕೆ ಪ್ರಾಕಾರ ಯಾಕ
ಕಾವ್ಯದಲ್ಲೇ ರಸಿಕತೆ ತುಂಬಿದಿರಲ್ಲ
ಜಾಲಿಬಾರನು ಸದಾ ನೆನೆಯುವರೆಲ್ಲ
ಏನೀ ಅದ್ಭುತವು, ನಿಮ್ಮ ಸಾಹಿತ್ಯವು
ಕಾವ್ಯ ರಸಿಕರಿಗೆ ಸಿಹಿ ಔತಣವು
ಪದ ಪದಗಳಲ್ಲಿಯೂ ಹೊಸ ಚೈತನ್ಯವು
ಪ್ರತಿ ಸಾಲುಗಳಲ್ಲಿಯೂ ನವ ತಾರುಣ್ಯವು
ಎಂಬತ್ತಾದರೂ ಕವಿಮನ ಹರೆಯ
ಹರಿಸುತ್ತಿರಿ ಕಾವ್ಯ ರಸಧಾರೆಯ
ಮೀರುತ ಎಲ್ಲ ಕಟ್ಟು ಪಾಡು
ಒಂದೊಂದು ಕವನವೂ ಸುಂದರ ಹಾಡು
ಅಮ್ಮನ ಎದೆಯಾಳದಲ್ಲಿ ಮೀನಾಗಿ
ಕಾರಣವಿಲ್ಲದೆ ಹೋದವರ ದನಿಯಾಗಿ
ಕವಿ ನಿಮಗೆ ಇದೋ ಶುಭಾಶಯ
ಕಾವ್ಯ ರಸಿಕರ ಮನದಲ್ಲೆಂದೂ ರಾಜಾಶ್ರಯ
- ಚೇತನ ಭಾರ್ಗವ – ಲೇಖಕರು, ವಿಮರ್ಶಕರು, ಕವಿಗಳು, ಬೆಂಗಳೂರು.
