ಪತ್ರಕರ್ತರಾದ ಬಿ.ವಿ.ಅನುರಾಧ ಅವರು ಪತ್ರಿಕೋದ್ಯಮದಲ್ಲಿ ಅವರದೇ ಛಾಪು ಮೂಡಿಸಿದ್ದಾರೆ. ಅವರ ಸಾಧನೆಯ ಕಿರು ಪರಿಚಯ ಮತ್ತು ಅವರ ಹೊಸ ಅಂಕಣ ‘ಇಳಿಸಂಜೆ’ ಆಕೃತಿಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಲಿದೆ. ತಪ್ಪದೆ ಪ್ರೋತ್ಸಾಹಿಸಿ …
ಇವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ಈ ಸಂಜೆ ದಿನಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಓದಿದ್ದು :
ಕನ್ನಡ ಸ್ನಾತಕೋತ್ತರ ಪದವಿ (ಮೈಸೂರು ವಿವಿ), ಡಿಪ್ಲೊಮಾ ಇನ್ ಜರ್ನಲಿಸಂ (ಮೈಸೂರು ವಿವಿ)
ಅನುಭವಗಳು :
- 1998-1999 ಕರ್ನಾಟಕ ನ್ಯೂಸ್‌ನೆಟ್ ಸುದ್ದಿಸಂಸ್ಥೆಯಲ್ಲಿ ಉಪ ಸಂಪಾದಕರು
- 1998-1999 ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರು
- 1999-2020 ಉದಯವಾಣಿ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರು
- 2020-2022 ಈ ಸಂಜೆ, ಸಂಯುಕ್ತ ಕರ್ನಾಟಕದಲ್ಲಿ ಹಿರಿಯ ಉಪ ಸಂಪಾದಕರು
- 2022-2023 ಪ್ರಸ್ತುತ ಕನ್ನಡ ಪ್ರಭ ಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರು
- ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ನ್ಯೂಸ್ ರೀಡರ್, ನ್ಯೂಸ್ ಎಡಿಟರ್ ಆಗಿಯೂ ಕೆಲಸ ಮಾಡಿದ್ದೇನೆ.
- 5 ವರ್ಷ ತಮಿಳುನಾಡಿನ ಮಲರ್ಚಿ ಟ್ರಸ್ಟ್, ಚೋಲೈ ಟ್ರಸ್ಟ್ ಎನ್‌ಜಿಒ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ.
- ಕೆಲಸ ಮಾಡಿದ ವಿಭಾಗ: ಉದಯವಾಣಿ ಪತ್ರಿಕೆಯ ಗ್ರಾಮೀಣ ವಿಭಾಗ, ನಮ್ಮ ಬೆಂಗಳೂರು, ವಾಣಿಜ್ಯ, ಕೃಷಿ, ಉತ್ತರಾಯಣ, ಪುಸ್ತಕ ಸಂಪದ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ.
ಹವ್ಯಾಸ: ಓದುವುದು, ಬರೆಯುವುದು, ಉತ್ತಮ ಸಂದರ್ಶನಗಳು ಕೇಳುವುದು, ಪ್ರವಾಸ, ತಾರಸಿ, ಕೈತೋಟ, ವೃದ್ಧಾಶ್ರಮ, ಅನಾಥಾಶ್ರಮ, ಎನ್‌ಜಿಒಗಳಿಗೆ ಭೇಟಿ ನೀಡುವುದು.
ಇತರೆ: ಕತೆ, ಮಕ್ಕಳ ಕತೆ, ಲೇಖನ, ಮಡಿಲ ಮಲ್ಲಿಗೆ ಕಾದಂಬರಿ ಪ್ರಕಟಗೊಂಡಿವೆ.
ಪುರಸ್ಕಾರ: ಯುನೆಸೆಫ್ ಫೆಲೋಶಿಪ್‌ನಡಿ ‘ಎಚ್‌ಐವಿ/ಏಡ್ಸ್ ಸೋಂಕು ಎದೆಹಾಲಿಗೆ ಬಾಧಕವಲ್ಲ’ ಸಂಶೋಧನಾತ್ಮಕ ಲೇಖನಕ್ಕೆ ಯುನೆಸೆಫ್ ಪ್ರಶಸ್ತಿ.
ತಿಳಿದಿರುವ ಭಾಷೆಗಳು: ಕನ್ನಡ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್.
ಆಸಕ್ತ ವಿಷಯಗಳು: ಗ್ರಾಮೀಣಾಭಿವೃದ್ಧಿ, ಪ್ರಗತಿಪರ ಕೃಷಿ, ಮಹಿಳಾ ಸಬಲೀಕರಣ, ಗ್ರಾಮೀಣ ಶಿಕ್ಷಣಾಭಿವೃದ್ಧಿ, ಪ್ರಸಕ್ತ ವಿಷಯಗಳ ಕುರಿತು ವಿಶ್ಲೇಷಣಾ ಲೇಖನಗಳು ಇತ್ಯಾದಿ.
- ಆಕೃತಿಕನ್ನಡ
